ರಾಹುಲ್‌ ಗಾಂಧಿ ಭೇಟಿ ಬಳಿಕ ಬದಲಾಯ್ತು ಕ್ಷೌರದಂಗಡಿ ಲಕ್‌ – ಅಂಗಡಿಗೆ ಗ್ರಾಹಕರ ದಂಡು

By
1 Min Read

– ನಿಮಗೆ ಇಷ್ಟವಾದ ಪಕ್ಷಕ್ಕೆ ಮತ ಹಾಕುವಂತೆ ಗಾಂಧಿ ಹೇಳಿದ್ರು: ಕ್ಷೌರಿಕ ಪ್ರತಿಕ್ರಿಯೆ

ಲಕ್ನೋ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ (Raelareli) ಕಾಂಗ್ರೆಸ್‌ ನಾಯಕ ಹಾಗೂ ಕ್ಷೇತ್ರದ ಅಭ್ಯರ್ಥಿ ರಾಹುಲ್‌ ಗಾಂಧಿ (Rahul Gandhi) ಭೇಟಿ ಬಳಿಕ ಕ್ಷೌರದ ಅಂಗಡಿಯ ಲಕ್‌ ಬದಲಾಗಿದೆ. ರಾಜಕೀಯ ಜನಪ್ರಿಯ ನಾಯಕನ ಭೇಟಿ ನಂತರ ಅಂಗಡಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.

ಲೋಕಸಭಾ ಚುನಾವಣೆಗೆ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್‌ ಗಾಂಧಿ ಕಣಕ್ಕಿಳಿದಿದ್ದಾರೆ. ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಕ್ಷೌರದಂಗಡಿಯೊಂದಕ್ಕೆ ಭೇಟಿ ನೀಡಿ ಕ್ಷೌರ ಮಾಡಿಸಿದ್ದರು. ಗಡ್ಡ ಟ್ರಿಮ್‌ ಕೂಡ ಮಾಡಿಸಿದ್ದರು. ಇದು ಎಲ್ಲೆಡೆ ವೈರಲ್‌ ಆಗಿತ್ತು. ಬಳಿಕ ಅಂಗಡಿಗೆ ಭೇಟಿ ನೀಡುವವರ ಗ್ರಾಹಕರ ಸಂಖ್ಯೆ ಅಚ್ಚರಿ ರೀತಿಯಲ್ಲಿ ಹೆಚ್ಚಳವಾಗಿದೆ.‌ ಇದನ್ನೂ ಓದಿ: ಬಿಹಾರದಲ್ಲಿ ಭವ್ಯವಾದ ಸೀತಾ ಮಂದಿರ ಕಟ್ಟುತ್ತೇವೆ: ಅಮಿತ್ ಶಾ ಭರವಸೆ

ಈ ಕುರಿತು ರಾಯ್‌ಬರೇಲಿಯ ಲಾಲ್‌ಗಂಜ್‌ನಲ್ಲಿರುವ ನ್ಯೂ ಮುಂಬಾ ದೇವಿ ಹೇರ್ ಕಟಿಂಗ್ ಸಲೂನ್‌ನ ಮಾಲೀಕ ಮಿಥುನ್ ಕುಮಾರ್ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಅವರು ಆಕಸ್ಮಿಕವಾಗಿ ನಮ್ಮ ಅಂಗಡಿಗೆ ಬಂದು ಟ್ರಿಮ್ ಮಾಡಲು ಕೇಳಿದಾಗ ಆಶ್ಚರ್ಯವಾಯಿತು. ಇಂತಹ ದೊಡ್ಡ ನಾಯಕ ನನ್ನ ಅಂಗಡಿಗೆ ಬರುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಅವರ ಭೇಟಿ ನಂತರ ನಮ್ಮ ಅಂಗಡಿಗೆ ಜನ ಹೆಚ್ಚಾಗಿ ಬರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಂಗಡಿಯಲ್ಲಿ ಕೆಲಸ ಮಾಡುವ ಅಮನ್‌ಕುಮಾರ್ ಮಾತನಾಡಿ, ನಮ್ಮ ಅಂಗಡಿಗೆ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಮೊದಲು 10 ಜನ ಬರುವುದೇ ಹೆಚ್ಚಾಗಿತ್ತು. ಈಗ 15 ಕ್ಕೂ ಹೆಚ್ಚು ಗ್ರಾಹಕರು ಬರುತ್ತಿದ್ದಾರೆ. ಕೆಲವರು ಕರೆ ಕೂಡ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗೆ ತಾಜಾ ಉದಾಹರಣೆ ಸಿಎಎ: ಪ್ರಧಾನಿ

ಲೋಕಸಭೆ ಚುನಾವಣೆ ಕುರಿತು ಕಾಂಗ್ರೆಸ್‌ ನಾಯಕ ಮಾತನಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮನ್‌ಕುಮಾರ್‌, ನಿಜವಾಗಲೂ ಇಲ್ಲ. ನಿಮಗೆ ಇಷ್ಟವಾದ ಪಕ್ಷಕ್ಕೆ ಮತ ಹಾಕುವಂತೆ ಹೇಳಿದ್ದಾರೆ ಎಂದರು ಅಂತಾ ಹೇಳಿದ್ದಾರೆ.

Share This Article