ಕರುವಿಗೆ ಬಾಟಲಿ ಹಾಲು ಕುಡಿಸಿದ ಯಶ್ ಮಗಳು ಐರಾ

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ (Yash) ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂಬುದಕ್ಕೆ ಸದ್ಯ ಸದ್ದು ಮಾಡುತ್ತಿರುವ ಫೋಟೋಗಳು ಸಾಕ್ಷಿಯಾಗಿದೆ. ಮಗಳು ಐರಾ ಕರುವಿಗೆ ಬಾಟಲಿ ಹಾಲು ಕುಡಿಸುವಾಗ ಜೊತೆಯಿದ್ದು, ಯಶ್ ಸಾಥ್ ನೀಡಿದ್ದಾರೆ.

‘ಟಾಕ್ಸಿಕ್’ (Toxic) ಸಿನಿಮಾ ಕೆಲಸದ ಜೊತೆಗೆ ವೈಯಕ್ತಿಕ ಜೀವನಕ್ಕೂ ಸಮಯ ನೀಡುತ್ತಾ ಯಶ್ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ (Radhika Pandit) ಶೇರ್ ಮಾಡಿರುವ ಫ್ಯಾಮಿಲಿ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮೊದಲ ಫೋಟೋದಲ್ಲಿ ಐರಾ ಪುಟ್ಟ ಕರುವಿಗೆ ಬಾಟಲಿ ಹಾಲು ಕುಡಿಸಿ ಖುಷಿಪಡುತ್ತಿದ್ದಾರೆ. ಯಶ್ ಕೂಡ ಕರುವಿಗೆ ಮುದ್ದು ಮಾಡುತ್ತಾ ಮಗಳ ತುಂಟಾಟಕ್ಕೆ ಸಾಥ್ ನೀಡುತ್ತಿದ್ದಾರೆ.

ಇನ್ನೊಂದು ಫೋಟೋದಲ್ಲಿ ಅಜ್ಜ, ಅಜ್ಜಿ ಜೊತೆ ಐರಾ ಫೋಟೋಗೆ ಪೋಸ್ ನೀಡಿದ್ದಾಳೆ. ಆಗ ಕರುವನ್ನು ಹಿಡಿದುಕೊಂಡು ಮುದ್ದಿಸಿದ್ದಾರೆ. ರಜಾ ಸಮಯದಲ್ಲಿ ಮಕ್ಕಳು ಎಂಜಾಯ ಮಾಡುತ್ತಿದ್ದಾರೆ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಯಶ್ ಕುಟುಂಬ ಫೋಟೋ ನೋಡ್ತಿದ್ದಂತೆ ಅಭಿಮಾನಿಗಳು ಕೂಡ ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಇದನ್ನೂ ಓದಿ:‘ದಿಲ್ ಖುಷ್’ ಚಿತ್ರದ ಸಾಂಗ್ ರಿಲೀಸ್ ಮಾಡಿದ ಖ್ಯಾತ ಯುವ ನಿರ್ದೇಶಕರು

ಇತ್ತೀಚೆಗೆ ಪತಿ ಜೊತೆ ರಾಧಿಕಾ ಪ್ರೇಮಿಗಳ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದ್ದರು. ಸೆಲೆಬ್ರೇಶನ್‌ನ ಕೆಲವು ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದರು.

Share This Article