ಅದ್ಧೂರಿಯಾಗಿ ನಡೆಯಿತು ರಾಧಿಕಾ ಪಂಡಿತ್ ಬರ್ತ್‌ಡೇ ಸೆಲೆಬ್ರೇಶನ್

By
1 Min Read

ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಮಾರ್ಚ್ 7ರಂದು ಅಭಿಮಾನಿಗಳ ಜೊತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದರು. ಅದಾದ ಬಳಿಕ ಕುಟುಂಬದ ಜೊತೆ ಬರ್ತ್‌ಡೇ ಸಂಭ್ರಮ ಹೇಗಿತ್ತು ಎಂದು ನಟಿ ವಿಡಿಯೋ ಝಲಕ್ ಹಂಚಿಕೊಂಡಿದ್ದಾರೆ.

ಮಾರ್ಚ್ 7, ನನ್ನ ಜೀವನದಲ್ಲಿ ಇಂತಹ ವ್ಯಕ್ತಿಗಳನ್ನು ಪಡೆದಿರೋದು ನನಗೆ ಸಿಕ್ಕ ಆಶೀರ್ವಾದ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿದ ವಿಡಿಯೋವನ್ನು ರಾಧಿಕಾ ಶೇರ್ ಮಾಡಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

‘ಕೆಜಿಎಫ್’ (KGF) ಸ್ಟಾರ್ ಯಶ್ (Yash) ಪತ್ನಿ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಕಡಲ ತೀರದಲ್ಲಿ ಪತಿ ಯಶ್ ಮತ್ತು ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಸ್ಟೇಜ್‌ನಲ್ಲಿ ಇಬ್ಬರೂ ಲೈಟ್ ಬಣ್ಣದ ಡ್ರೆಸ್‌ನಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಯಶ್‌ನ ಅಪ್ಪಿಕೊಂಡು ರಾಧಿಕಾ ಕೇಕೆ ಹಾಕುತ್ತಿರುವ ಪೋಸ್ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ:ನನಗೂ ಇಬ್ಬರೂ ಮಕ್ಕಳು ಬೇಕು ಎಂದ ‘ಸೀತಾರಾಮಂ’ ನಟಿ

ಇದೀಗ ರಾಧಿಕಾ ಪಂಡಿತ್ ಮತ್ತಷ್ಟು ಫಿಟ್ ಆಗಿದ್ದಾರೆ. ನಟಿಯ ಹೊಸ ಲುಕ್ ನೋಡಿ ಫ್ಯಾನ್ಸ್ ಖುಷ್‌ ಆಗಿದ್ದಾರೆ. ಮತ್ತೆ ನಟಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

Share This Article