ನನ್ನ ವ್ಯಾಲೆಂಟೈನ್ ಕಾಣಿಸಿಕೊಂಡಾಗ ಹ್ಯಾಪಿ ಟೈಮ್ ಶುರು ಎಂದ ರಾಧಿಕಾ ಪಂಡಿತ್

Public TV
1 Min Read

ಸ್ಯಾಂಡಲ್‌ವುಡ್ ಬ್ಯೂಟಿ ರಾಧಿಕಾ ಪಂಡಿತ್ (Radhika Pandit) ಅವರು ವ್ಯಾಲೆಂಟೈನ್ ವೀಕ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಪತಿ ಯಶ್‌ಗಾಗಿ ಕಾಯುತ್ತಿರುವ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಸದ್ಯ ನಟಿಯ ಹೊಸ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕೆಂಪು ಬಣ್ಣದ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಮಿನುಗುವ ಲೈಟ್ ಮಧ್ಯೆ ಕುಳಿತು ಕ್ಯೂಟ್ ಆಗಿ ಕ್ಯಾಮೆರಾಗೆ ರಾಧಿಕಾ ಪೋಸ್ ಕೊಟ್ಟಿದ್ದಾರೆ. ತಮ್ಮ ಫೋಟೋಗಳಿಗೆ ‘ನನ್ನ ವ್ಯಾಲೆಂಟೈನ್ ಕಾಣಿಸಿಕೊಂಡಾಗ ಹ್ಯಾಪಿ ಟೈಮ್ ಪ್ರಾರಂಭವಾಗುತ್ತದೆ’ ಎಂದು ರಾಧಿಕಾ ಪಂಡಿತ್ ಕ್ಯಾಪ್ಷನ್ ನೀಡಿದ್ದಾರೆ. ರಾಧಿಕಾರ ಸುಂದರ ಫೋಟೋ ನೋಡ್ತಿದ್ದಂತೆ ಯಶ್ ಎಲ್ಲಿ? ರಾಕಿ ಬಾಯ್‌ಗಾಗಿ ಕಾಯುತ್ತಿದ್ದೀರಾ ಅಲ್ವಾ? ಅಂತ ಫ್ಯಾನ್ಸ್ ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

ನಟ ಯಶ್ (Yash) ಮತ್ತು ರಾಧಿಕಾ (Radhika Pandit) 2016ರಲ್ಲಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಇದೀಗ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ರಾಧಿಕಾ ನಟನೆಯಿಂದ ದೂರ ಉಳಿದ್ದಾರೆ. ಇದನ್ನೂ ಓದಿ:ಕಮ್‌ಬ್ಯಾಕ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸಮಂತಾ

ಕೆಲ ನೆಟ್ಟಿಗರು ರಾಧಿಕಾ ಹೊಸ ಫೋಟೋಗೆ ‘ಟಾಕ್ಸಿಕ್’ (Toxic) ಬಗ್ಗೆ ಅಪ್‌ಡೇಟ್ ಕೊಡಿ ಎಂದು ಕಾಮೆಂಟ್ ಮಾಡುತ್ತಿದ್ರೆ, ಮತ್ತೆ ಯಾವಾಗ ನೀವು ಸಿನಿಮಾ ಮಾಡ್ತಿರಾ? ನಾವು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

Share This Article