ಸಿಎಂ ಮೇಲೆ ಕುಮಾರ್ ಬಂಗಾರಪ್ಪ ಮೀಟೂ ಆರೋಪಕ್ಕೆ ರಾಧಿಕಾ ಖಡಕ್ ಪ್ರತಿಕ್ರಿಯೆ

Public TV
1 Min Read

ಬೆಂಗಳೂರು: ಸಿಎಂ ಕುಮಾರಸ್ವಾಮಿ ಮತ್ತು ಕುಮಾರ್ ಬಂಗಾರಪ್ಪ ನಡುವಿನ ವಾಕ್ಸಮರಕ್ಕೆ ರಾಧಿಕಾ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ಮೇಲೆ ಮಾಡಿರುವ ಮೀಟೂ ಆರೋಪಕ್ಕೆ ಸ್ವಾಂಡಲ್‍ವುಡ್ ಸ್ವೀಟಿ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಕುಮಾರ್ ಬಂಗಾರಪ್ಪ ಹೇಳಿಕೆ ಕುರಿತು ರಾಧಿಕಾ ಮೌನ ಮುರಿದಿದ್ದಾರೆ. ಭೈರವದೇವಿ ಚಿತ್ರದ ಶೂಟಿಂಗ್ ಸೆಟ್‍ನಲ್ಲಿ ರಾಧಿಕಾ ಕುಮಾರಸ್ವಾಮಿ ಪತ್ರಿಕೆಯೊಂದಕ್ಕೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, `ಅಯ್ಯೋ ನನ್ ಕೆಲಸಗಳೇ ಸಾಕಷ್ಟಿದೆ. ಅದು ಮಾಡೋಕೇ ನಂಗೆ ಟೈಮಿಲ್ಲ. ಚುನಾವಣೆ ಸಂಬಂಧ ಮಾತನಾಡಿದ್ದು ಕುಮಾರಸ್ವಾಮಿ ಮತ್ತು ಕುಮಾರ್ ಬಂಗಾರಪ್ಪಗೆ ಸಂಬಂಧಪಟ್ಟ ವಿಷಯ. ಅದನ್ನು ಅವರಿಬ್ಬರೇ ಬಗೆಹರಿಸಿಕೊಳ್ತಾರೆ. ಈ ಬಗ್ಗೆ ನಾನ್ ಹೆಚ್ಚು ಮಾತಾಡಲ್ಲ. ನಾನು ಈ ಬಗ್ಗೆ ಸುಖಾಸುಮ್ಮನೆ ಮಧ್ಯೆ ಮಾತನಾಡಿ ಬಲಿಪಶು ಆಗೋದು ಇಷ್ಟವಿಲ್ಲ’ ಎಂದು ಹೇಳಿದ್ದಾರೆ.

ದಿನಗಳ ಹಿಂದೆ ಶಿವಮೊಗ್ಗ ಉಪಕದನ ಅಖಾಡದಲ್ಲಿ ಕುಮಾರಸ್ವಾಮಿ ಮತ್ತು ಕುಮಾರ್ ಬಂಗಾರಪ್ಪ ವೈಯಕ್ತಿಕ ದಾಳಿ ನಡೆಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರಿಗಾದ ಲೈಂಗಿಕ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುವ ಮೀಟೂ ಬಾಂಬನ್ನೂ ಕುಮಾರ್ ಬಂಗಾರಪ್ಪ ಮುಖ್ಯಮಂತ್ರಿಗಳ ಮೇಲೆ ಎಸೆದಿದ್ದರು. ಮೀಟೂ ಎಂಬ ಚಳವಳಿಯಡಿ ಶೋಷಣೆಗೊಳಗಾದವರು ಸಿಎಂ ವಿರುದ್ಧ ಆರೋಪ ಮಾಡಬಹುದು. ಕುಮಾರಸ್ವಾಮಿಯವರೇ ಎಚ್ಚರವಿರಿ ಅಂದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *