‘ಕಲ್ಟ್’ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಚಿತಾ ರಾಮ್

Public TV
1 Min Read

ನ್ನಡದ ‘ಬುಲ್ ಬುಲ್’ ನಟಿ ರಚಿತಾ ರಾಮ್‌ಗೆ (Rachita Ram) ಇಂದು (ಅ.3) ಹುಟ್ಟುಹಬ್ಬ ಸಂಭ್ರಮವಾಗಿದ್ದು, ನಟಿಗೆ ‘ಕಲ್ಟ್’ (Cult Film) ಚಿತ್ರತಂಡ ನೀಡಿದೆ. ಹುಟ್ಟುಹಬ್ಬ ಆಚರಣೆಯ ಸುಂದರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌

2 ದಿನಗಳ ಹಿಂದೆಯೇ ತಾವು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ. ಎಂದಿನಂತೆ ಭಾನುವಾರ ಸಿಗೋಣ ಎಂದು ನಟಿ ಮಾಹಿತಿ ಹಂಚಿಕೊಂಡಿದ್ದರು. ಆದರೆ ಇದೀಗ ಚಿತ್ರತಂಡ ಒತ್ತಾಯಕ್ಕೆ ಮಣಿದು ರಚಿತಾ, ತಂಡದ ಜೊತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ.

‘ಕಲ್ಟ್’ ಚಿತ್ರದ ನಾಯಕ ಝೈದ್ ಖಾನ್ ಜೊತೆ ನಿಂತು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಒಬ್ಬರಿಗೊಬ್ಬರು ಕೇಕ್ ತಿನ್ನಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ, ರಚಿತಾ, ಝೈದ್ ಖಾನ್ ಜೊತೆ ಕ್ಯಾಮೆರಾ ಮ್ಯಾನ್ ಜೆ.ಎಸ್ ವಾಲಿ, ಆಲ್ ಓಕೆ, ಡೈರೆಕ್ಟರ್ ಅನಿಲ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಇನ್ನೂ ಕಳೆದ 20 ದಿನಗಳಿಂದ ‘ಕಲ್ಟ್’ ಸಿನಿಮಾದ ಶೂಟಿಂಗ್ ಬಿರುಸಿನಿಂದ ಉಡುಪಿಯಲ್ಲಿ ನಡೆಯುತ್ತಿದೆ. ಶೂಟಿಂಗ್ ಬಿಡುವಿನ ಮಧ್ಯೆ ರಚಿತಾ ಹುಟ್ಟುಹಬ್ಬ ಆಚರಿಸಿದ್ದಾರೆ.

ಇನ್ನೂ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯಾಗಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ.

Share This Article