Breaking- ದರ್ಶನ್ ನಟನೆಯ ‘ಡೆವಿಲ್‍’ ಚಿತ್ರಕ್ಕೆ ರಚನಾ ರೈ ಹಿರೋಯಿನ್ : ಅಧಿಕೃತ ಘೋಷಣೆ

By
1 Min Read

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಸಿನಿಮಾಗೆ ನಾಯಕಿಯ ಆಯ್ಕೆಯಾಗಿದೆ. ವಾಮನ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತುಳುನಾಡ ಕುವರಿ ರಚನಾ ರೈ (Rachana Rai) ಅವರು ಡೆವಿಲ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಇವರು ಶಂಕರ್ ರಾಮನ್ ನಿರ್ದೇಶನದಲ್ಲಿ  ಮೂಡಿ ಬಂದ ವಾಮನ ಸಿನಿಮಾಗೆ ನಾಯಕಿಯಾಗಿದ್ದರು. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ವಾಮನ ಮೊದಲ ಕನ್ನಡ ಸಿನಿಮಾವಾಗಿತ್ತು.

ಬ್ಯಾಡ್ಮಿಂಟನ್ ಪ್ಲೇಯರ್‌ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ‌ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ. ಈಗ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮೊನ್ನೆಯಷ್ಟೇ ದರ್ಶನ್ (Darshan) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿತ್ತು ಚಿತ್ರತಂಡ. ‘ಡೆವಿಲ್’ (Devil Film) ಸಿನಿಮಾದ ಫಸ್ಟ್ ಲುಕ್  ರಿಲೀಸ್ ಆದ ಬೆನ್ನಲ್ಲೇ ಅದರ ತೆರೆಹಿಂದಿನ ಝಲಕ್ ಹೇಗಿತ್ತು ಎಂಬುದನ್ನು ಇದೀಗ ರಿವೀಲ್ ಮಾಡಿದ್ದಾರೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿತ್ತು.

ಫೆಬ್ರವರಿಯಲ್ಲಿ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿತ್ತು. ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕ್ಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವಾ? ಎಂದು ದರ್ಶನ್‌ ಹೇಳಿರುವ ಡೈಲಾಗ್ ‘ಡೆವಿಲ್’ ಮೊದಲ ಟೀಸರ್‌ನಲ್ಲಿತ್ತು. ಈಗ ಇದರ ವಿಡಿಯೋ ಬಿಡಲಾಗಿದೆ. ಕಲರ್‌ಫುಲ್‌ ಲೋಕೇಷನ್‌ನಲ್ಲಿ ದರ್ಶನ್ ಸಖತ್ ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿದ್ದಾರೆ.

 

‘ತಾರಕ್’ ನಂತರ ‘ಡೆವಿಲ್’ ಚಿತ್ರದ ಮೂಲಕ ಮತ್ತೆ ದರ್ಶನ್‌ಗೆ ಪ್ರಕಾಶ್ ವೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಆದರೆ ಶೂಟಿಂಗ್ ವೇಳೆ, ದರ್ಶನ್ ಕೈಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಈಗ ಗುಣಮುಖರಾಗಿರುವ ದರ್ಶನ್ ಸದ್ಯದಲ್ಲೇ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

Share This Article