ಅನಿಲ್ ಕಪೂರ್, ಬಾಬಿ ಡಿಯೋಲ್ ನಡುವಿನ ಕಿಸ್ಸಿಂಗ್ ವಿಡಿಯೋ ವೈರಲ್

Public TV
1 Min Read

ಮುಂಬೈ: ನಟ ಬಾಬಿ ಡಿಯೋಲ್‍ಗೆ ಬಾಲಿವುಡ್ ನ ಹಿರಿಯ ನಟ ಅನಿಲ್ ಕಪೂರ್ ಕಿಸ್ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಬಹುನಿರೀಕ್ಷಿತ ‘ರೇಸ್-3’ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಯುಎಇ ಯಲ್ಲಿ ನಡೆಯುತ್ತಿದ್ದು, ಬಿಡುವಿನ ಸಮಯದಲ್ಲಿ ಚಿತ್ರದ ಕಲಾವಿದರೆಲ್ಲಾ ಹೋಟೆಲ್ ವೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ಸಲ್ಮಾನ್ ಖಾನ್ ಸಹ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಪಾರ್ಟಿಯಲ್ಲಿ ಅನಿಲ್ ಕಪೂರ್ ಬಾಬಿ ಗೆ ಸ್ನೇಹದಿಂದ ಮುತ್ತು ನೀಡಿದ್ದಾರೆ.

ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಸಿನಿಮಾ ಮೂಡಿಬರುತ್ತಿದೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಜಾಕ್ವೆಲಿನ್ ಫೆರ್ನಾಂಡಿಸ್, ಬಾಬಿ ಡಿಯೋಲ್, ಸಾಕಿಬ್ ಸಲೀಂ ಮತ್ತು ಡೈಸಿ ಶಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರೇಸ್‍ನ ಈ ಹಿಂದಿನ ಎರಡು ಭಾಗಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು, ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದವು. ಪಕ್ಕಾ ಆ್ಯಕ್ಷನ್, ಥ್ರಿಲ್ಲರ್ ಕಥೆಯನ್ನು ಚಿತ್ರ ಹೊಂದಿದೆ. ಸಿನಿಮಾ ಇದೇ ವರ್ಷ ಈದ್ ಗೆ ಬಿಡುಗಡೆ ಆಗಲಿದೆ ಅಂತಾ ಚಿತ್ರತಂಡ ತಿಳಿಸಿದೆ.

ಈ ಹಿಂದಿನ ರೇಸ್ ನ ಎರಡು ಚಿತ್ರಗಳಲ್ಲಿ ಸೈಫ್ ಅಲಿ ಖಾನ್ ನಾಯಕನ ಪಾತ್ರದಲ್ಲಿ ಮಿಂಚಿದ್ದರೆ, ಅನಿಲ್ ಕಪೂರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ರು. ಆದ್ರೆ ಈ ಬಾರಿ ಸಲ್ಮಾನ್ ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಸಲ್ಮಾನ್‍ಗೆ ನಾಯಕಿಯಾಗಿ ಎರಡನೇ ಬಾರಿಗೆ ಜಾಕ್ವೆಲಿನ್ ಜೊತೆಯಾಗಿದ್ದಾರೆ.

https://www.instagram.com/p/BgiBReqnn-E/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *