ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

Public TV
1 Min Read

ಸ್ಯಾಂಡಲ್‌ವುಡ್‌ನ(Sandalwood) ಹಿರಿಯ ನಟ ಸುಂದರ್ ರಾಜ್(Sundar Raj) ಅವರದ್ದು ಕಲಾವಿದರ ಕುಟುಂಬ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ ಚಿತ್ರದ ಈವೆಂಟ್‌ವೊಂದಕ್ಕೆ ಸಾಥ್ ನೀಡಿದ್ದ ಸುಂದರ್ ರಾಜ್ ಮೊಮ್ಮಗ ರಾಯನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ.

ನಟಿ ಮೇಘನಾ ರಾಜ್ ಬಹುಭಾಷಾ ನಟಿ, ತಾವು ಬೆಳೆದು, ಇದೀಗ ಸೊಸೆಯಾಗಿ ಸೇರಿರುವ ಕುಟುಂಬ ಕೂಡ ಕಲಾವಿದರ ಕುಟುಂಬವಾಗಿದ್ದು, ನಟನೆ ಎಂಬುದು ರಕ್ತಗತವಾಗಿ ಬಂದಿದೆ. ಹಾಗಾಗಿ ಸಮಾರಂಭವೊಂದರಲ್ಲಿ ಹಿರಿಯ ನಟ ಸುಂದರ್ ರಾಜ್ ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ.

ಸುನಾಮಿ ಕಿಟ್ಟಿ ನಟನೆಯ ಹೊಸ ಚಿತ್ರದ ಟ್ರೈಲರ್ ಲಾಂಚ್ ಸಮಾರಂಭಕ್ಕೆ ಬಂದ ಸಂದರ್ಭದಲ್ಲಿ ಸುಂದರ್ ರಾಜ್, ಚಿತ್ರತಂಡಕ್ಕೆ ಶುಭ ಹಾರೈಸಿ ಮಾತನಾಡಿದ್ದಾರೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಕಲಾವಿದರೇ ಇದ್ದೀವಿ. ನಾಯಕಿ ಮೇಘನಾ ಇದ್ದಾರೆ, ತಾಯಿ ಪಾತ್ರ ಮಾಡಿರುವ ಪ್ರಮಿಳಾ, ಶಕ್ತಿ ಪ್ರಸಾದ್, ಅರ್ಜುನ್ ಸರ್ಜಾ, ಚಿರು, ಧ್ರುವಾ ಸರ್ಜಾ ಹೀಗೆ ಎಲ್ಲರೂ ಕಲಾವಿದರೇ ಇದ್ದೀವಿ. ಈಗ ನನ್ನ ಮೊಮ್ಮಗ ಬಂದಿದ್ದಾನೆ. ಮುಂದೆ ಅವನು ಕೂಡ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article