ಸಣ್ಣ ಮಕ್ಕಳ ಹಾಲಿಗೆ 4, ದೊಡ್ಡ ಮಕ್ಕಳ ಕ್ವಾಟರ್‌ಗೆ 40 ರೂ. ಜಾಸ್ತಿ – ಸರ್ಕಾರದ ವಿರುದ್ಧ ಅಶೋಕ್ ಕಿಡಿ

Public TV
1 Min Read

ಚಿಕ್ಕಬಳ್ಳಾಪುರ: ಸಣ್ಣ ಮಕ್ಕಳು ಕುಡಿಯೋ ಹಾಲಿನ ಬೆಲೆ 3-4 ರೂ. ಜಾಸ್ತಿ ಮಾಡಿದ್ದಾರೆ. ಸಂಜೆ ದೊಡ್ಡ ಮಕ್ಕಳು ಕುಡಿಯೋ ಎಣ್ಣೆಗೆ ಕ್ವಾಟರ್ ಮೇಲೆ 30-40 ರೂ. ಜಾಸ್ತಿ ಮಾಡಿದ್ದಾರೆ. ಇದು ಭಿಕ್ಷುಕ ಸರ್ಕಾರ ಎಂದು ಮಾಜಿ ಸಚಿವ ಆರ್.ಅಶೋಕ್ (R.Ashoka) ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ (Chikkaballapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಎಲ್ಲಾ ಬೆಲೆ ಜಾಸ್ತಿ ಮಾಡಿದೆ. ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದಾರೆ. ಸಬ್ ರಿಜಿಸ್ಟರ್ ಬೆಲೆ ಜಾಸ್ತಿ ಮಾಡಿದ್ದಾರೆ. ಅಲ್ಲದೇ ಲೋಡ್ ಶೆಡ್ಡಿಂಗ್ ಹೆಚ್ಚಾಗಿದ್ದು ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ಕಾಂಗ್ರೆಸ್‍ನವರ (Congress) ಕಾಲುಗುಣ ಸರಿ ಇಲ್ಲ. ಹಿಂದೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೂ ಬರ ಬಂದಿತ್ತು. ಈಗಲೂ ಬರಗಾಲ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸಿಎಂ ಇಬ್ರಾಹಿಂ ಎಲ್ಲೂ ಹೋಗಲ್ಲ, ಜೆಡಿಎಸ್‌ನಲ್ಲೇ ಇರ್ತಾರೆ: ಜಿ.ಟಿ ದೇವೇಗೌಡ

ರಾಜ್ಯ ಸರ್ಕಾರ ಪಾಪರ್ ಆಗಿದೆ, ಅವರ ಬಳಿ ಹಣವಿಲ್ಲದೇ ದೊಡ್ಡ ಭಿಕ್ಷಕರು ಥರ ಆಗಿದ್ದಾರೆ. ಹೀಗಾಗಿ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಫ್ರೀ ಎನ್ನುವ ಹೆಸರಿನಲ್ಲಿ ತೆರಿಗೆ ಹೆಚ್ಚಳ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಈಗ ಬಿಜೆಪಿ ಶಾಸಕರ ಅನುದಾನವನ್ನೂ ಕಿತ್ತುಕೊಂಡಿದ್ದಾರೆ. ಇದು ಅನ್ಯಾಯ, ಅನುದಾನಗಳ ತಾರತಮ್ಯ ಕಾಂಗ್ರೆಸ್‍ನ ದಿವಾಳಿಗೆ ಸಾಕ್ಷಿ ಎಂದಿದ್ದಾರೆ.

ಬೆಂಗಳೂರಲ್ಲಿ ಹೊಸಕೆರೆಹಳ್ಳಿ ಹಾಗೂ ಕತ್ರಿಗುಪ್ಪೆ ಬಳಿಯ ಮೇಲ್ಸೇತುವೆ ನಿರ್ಮಾಣದ ಅನುದಾನವನ್ನೇ ಕಡಿತ ಮಾಡಿದ್ದಾರೆ. ಈ ಸರ್ಕಾರ ಪಾಪರ್ ಆಗಿದೆ. ಬಿಜೆಪಿಯಲ್ಲಿನ ಕಾಮಗಾರಿಗಳ ಅನುದಾನ ವಾಪಾಸ್ ಪಡೆದಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧಾರ್ಮಿಕ ಜಿಲ್ಲೆ ಉಡುಪಿಯಲ್ಲಿ ಮಹಿಷಾ ದಸರಾ ಯಾಕೆ?: ಶೋಭಾ ಕರಂದ್ಲಾಜೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್