– ಸಿದ್ದರಾಮಯ್ಯ ಕಡೆಯ ಒಂದೊಂದೇ ವಿಕೆಟ್ ಬೀಳ್ತಿದೆ, ಡಿಕೆ ಬಲಾಢ್ಯ ಆಗ್ತಿದ್ದಾರೆ
ಬೆಂಗಳೂರು: ಸತ್ಯ ಹೇಳಿದ್ದಕ್ಕೆ ರಾಜಣ್ಣ (KN Rajanna) ಅವರ ರಾಜೀನಾಮೆ ಕೇಳಿದ್ದಾರೆ. ಸತ್ಯ ಅಂದ್ರೆ ಕಾಂಗ್ರೆಸ್‌ಗೆ ಆಗಲ್ಲ ಅಂತ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಹಕಾರ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಅನ್ನೋ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆಎನ್ ರಾಜಣ್ಣ ರಾಜೀನಾಮೆ?
ರಾಜಣ್ಣ ಸತ್ಯ ಹೇಳಿದ್ದಾರೆ, ಅದಕ್ಕೆ ಅವರ ರಾಜೀನಾಮೆ ಕೇಳಿದ್ದಾರೆ. ಸಿದ್ದರಾಮಯ್ಯ ಕಡೆಯ ಒಂದೊಂದೇ ವಿಕೆಟ್ ಬೀಳ್ತಿದೆ. ಡಿಕೆ ಬಲಾಢ್ಯ ಆಗ್ತಿದ್ದಾರೆ. ಕಾಂಗ್ರೆಸ್ ನಾಯಕರು ರಾಮಣ್ಣ ರಾಜೀನಾಮೆಗೆ ತಿಳಿಸಿದ್ದಾರೆ, ಯಾಕೆ? ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಅಂತಾರಲ್ಲ ಎಲ್ಲಿದೆ ಅವರ ಪಕ್ಷದಲ್ಲಿ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಳೆಗಾಲದ ಅಧಿವೇಶನ – ಸರ್ಕಾರಕ್ಕೆ ಮೊದಲ ದಿನವೇ ದೋಸ್ತಿಗಳಿಂದ ಪ್ರತಿಭಟನೆ ಬಿಸಿ
ಸೆಪ್ಟೆಂಬರ್ ಕ್ರಾಂತಿಗೆ ಮುನ್ನುಡಿ ಬರೆಯುತ್ತಾರಾ ರಾಜಣ್ಣ?
ಸಚಿವ ಸ್ಥಾನಕ್ಕೆ ಸಹಕಾರಿ ಸಚಿವ ರಾಜಣ್ಣ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೈಕಮಾಂಡ್ (High Command) ಸೂಚನೆಯ ಬೆನ್ನಲ್ಲೇ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಆರಂಭದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಹೇಳಿಕೆ ನೀಡಿ ರಾಜಣ್ಣ ಸಂಚಲನ ಮೂಡಿಸಿದ್ದರು. ರಾಹುಲ್ ಗಾಂಧಿ (Rahul Gandhi) ಮತಗಳ್ಳತನ ಆರೋಪ ಮಾಡಿದ ನಂತರ ರಾಜಣ್ಣ ನಮ್ಮ ಅವಧಿಯಲ್ಲಿ ಮತಪಟ್ಟಿ ಸಿದ್ಧವಾಗಿತ್ತು ಎಂದು ಹೇಳಿದ್ದರು.
ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡಿದ್ದ ರಾಜಣ್ಣ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರು ಕಣ್ಣುಮುಚ್ಚಿ ಕುಳಿತಿದ್ದರೇ ಎಂದು ಪ್ರಶ್ನಿಸಿದ್ದರು. ರಾಜಣ್ಣ ಅವರ ಈ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಈ ಹೇಳಿಕೆಯ ನಂತರ ಹೈಕಮಾಂಡ್ ರಾಜಣ್ಣಗೆ ರಾಜೀನಾಮೆ ಸಲ್ಲಿಸಲು ಸೂಚನೆ ನೀಡಿತ್ತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಸಿಎಂಗೆ ಕರೆ ಮಾಡಿ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಕೆಲವೊಂದಷ್ಟು ಖಾಲಿ ಟ್ರಂಕುಗಳಿವೆ, ಕೇವಲ ಶಬ್ದ ಮಾತ್ರ ಮಾಡುತ್ತವೆ: ಡಿಕೆಶಿ
ರಾಜೀನಾಮೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ರಾಜಣ್ಣ, ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಅಲ್ಲಿಯವರೆಗೂ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ – ಪೊಲೀಸರ ಮೇಲೆ ತಪ್ಪು ಹೊರಿಸಿ ನುಣುಚಿಕೊಳ್ಳುವ ಯತ್ನ: ವಿಜಯೇಂದ್ರ