ಎಡಪಂಥೀಯರು ಸಿಎಂ ಮನೆಯಲ್ಲೇ ಸಭೆ ಮಾಡಿ SIT ತನಿಖೆ ಶುರು ಮಾಡಿಸಿದ್ದಾರೆ: ಆರ್‌. ಅಶೋಕ್‌ ಕಿಡಿ

Public TV
2 Min Read

– ಎಡಪಂಥೀಯರಿಂದಲೇ ತಿರುಪತಿ, ಧರ್ಮಸ್ಥಳ, ಅಯ್ಯಪ್ಪನನ್ನು ಹಾಳುವ ಮಾಡುವ ಪ್ರಯತ್ನ; ವಾಗ್ದಾಳಿ

ಬೆಂಗಳೂರು: ಎಡಪಂಥೀಯರು (Leftists) ಸೇರಿ ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ಮಾಡಿದ್ದಾರೆ. ಎಲ್ಲಾ ಎಡಪಂಥೀಯರಿಗೆ ಬೆಂಬಲವಾಗಿ ನಿಂತವರು ಸಿದ್ದರಾಮಯ್ಯ. ಅವರ ಮನೆಯಲ್ಲೆ ಸಭೆ ಮಾಡಿ ಎಸ್‌ಐಟಿ ತನಿಖೆ ಶುರು ಮಾಡಲಾಗಿತ್ತು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಕಿಡಿ ಕಾರಿದ್ದಾರೆ.

ವಿಧಾನಸೌಧದ (Vidhan Soudha) ಕೆಂಗಲ್‌ ಗೇಟ್‌ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಡಪಂಥೀಯರು ಸೇರಿ ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ಮಾಡಿದ್ದಾರೆ. ತಿರುಪತಿ, ಧರ್ಮಸ್ಥಳ, ಅಯ್ಯಪ್ಪ ಎಲ್ಲರನ್ನೂ ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ. ಎಲ್ಲಾ ಎಡಪಂಥೀಯರಿಗೆ ಬೆಂಬಲವಾಗಿ ನಿಂತವರು ಸಿದ್ದರಾಮಯ್ಯ (Siddaramaiah) ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ: ಡಿಕೆಶಿ

ದೇಶದ ಬಗ್ಗೆ ಕಡಿಮೆ ನಿಷ್ಠೆ ಇರೋರು ಕಮ್ಯುನಿಸ್ಟ್‌ಗಳು. ಅವರೆಲ್ಲಾ ಸೇರಿ ಕುತಂತ್ರ ಮಾಡಲು ಹೊರಟಿದ್ದಾರೆ. ಇವರಿಗೆಲ್ಲಾ ಮಾಸ್ಟರ್ ಮೈಂಡ್ ಸಿದ್ದರಾಮಯ್ಯ. ಅವರ ಮನೆಯಲ್ಲಿ ಸೇರಿ ಸಭೆ ಮಾಡಿ ಎಸ್‌ಐಟಿ ತನಿಖೆ ಮಾಡಿಸಿದ್ದಾರೆ. ಪ್ರಣವ್ ಮೊಹಂತಿ ಹೆಸರೇಳಿ ಅವರನ್ನೇ ನೇಮಕ ಮಾಡಿದ್ದು ಎಡಪಂಥೀಯರು. ರಾಜ್ಯದ ಎಲ್ಲಾ ದೇವಸ್ಥಾನ ಪರ ನಾವು ಇರ್ತೇವೆ. ಹಿಂದೂ ದೇವಾಲಯಕ್ಕೆ ಏನಾದ್ರೂ ಆದ್ರೆ ನಾವು ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗಳನ್ನ ಹಿಡಿಯಿರಿ, ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಬಿಟ್ಟುಬಿಡಿ: ಸುಪ್ರೀಂ ತೀರ್ಪಿನಲ್ಲಿ ಮಹತ್ವದ ತಿದ್ದುಪಡಿ

ಇನ್ನು ವಿಧಾನಸಭೆಯಲ್ಲಿ ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ ವಿಚಾರ ಕುರಿತು ಮಾತನಾಡಿ, ಅದು ಆರ್‌ಎಸ್‌ಎಸ್ ಭಗವದ್ಗೀತೆ. ಅದಕ್ಕೆ ನಮ್ಮ ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಇದು ಒಟ್ಟು ಕಾಂತ್ರಿ ಅಂತೂ ನಿಜ. ಕಾಂಗ್ರೆಸ್ ಒಳಗೆ ಏನಾಗ್ತಿದೆ ಅಂತ ಗೊತ್ತಿಲ್ಲ ಎಂದರು. ಇದನ್ನೂ ಓದಿ: ವಿಧಾನಸಭೆಯಲ್ಲಿ RSS ಗೀತೆ ಹಾಡಿ ಗಮನ ಸೆಳೆದ ಡಿಕೆಶಿ – ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ

ಇನ್ನೂ ವೋಟ್‌ ಚೋರಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ಎಂಪಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಪಕ್ಷದಿಂದ ಯಾರೆಲ್ಲಾ ಆಯ್ಕೆ ಆಗಿದ್ದಾರೆ, ಅವರೆಲ್ಲಾ ರಾಜೀನಾಮೆ ಕೊಡಬೇಕು. ಚುನಾವಣೆ ಅಕ್ರಮ ಅಂತಾರೆ, ಯಾರೂ ರಾಜೀನಾಮೆ ಕೊಡಲು ಸಿದ್ಧರಿಲ್ಲ ಎಂದು ಕುಟುಕಿದರು.

Share This Article