ಕೇರಳದ ರೀತಿ ರಾಜ್ಯದಲ್ಲೂ ಲವ್ ಜಿಹಾದ್ ನಡೀತಿದೆ ಅಂದಿದ್ವಿ: ಆರ್.ಅಶೋಕ್

Public TV
2 Min Read

– ಕರ್ನಾಟಕ ಸರ್ಕಾರ ಜಿಹಾದಿಗಳ ಸರ್ಕಾರ ಎಂದ ಪ್ರತಿಪಕ್ಷ ನಾಯಕ

ಬೆಂಗಳೂರು: ಕರ್ನಾಟಕ ಸರ್ಕಾರ ಜಿಹಾದಿಗಳ ಸರ್ಕಾರ, ಸಿದ್ದರಾಮಯ್ಯ ಸರ್ಕಾರ (Siddaramaiah’s Government) ಬಂದ್ಮೇಲೆ ಹಿಂದೂಗಳ ಕಗ್ಗೊಲೆ, ಲವ್ ಜಿಹಾದ್ (Love Jihad) ಕೃತ್ಯಗಳು ಹೆಚ್ಚಾಗಿವೆ. ಲವ್ ಜಿಹಾದ್ ಕಾಂಗ್ರೆಸ್ ಅವರನ್ನೂ ಬಿಟ್ಟಿಲ್ಲ. ಕೇರಳದ ರೀತಿ ಕರ್ನಾಟಕದಲ್ಲೂ ಲವ್ ಜಿಹಾದ್ ನಡೆಯುತ್ತಿದೆ ಅಂತಾ ಹಿಂದೆಯೇ ಹೇಳಿದ್ವಿ ಅಂತಾ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು (Bengaluru BJP Office) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಘಟನೆ. ಕಾಂಗ್ರೆಸ್ ಸರ್ಕಾರ ನಾಚಿಕೆಗೇಡಿನ ಸರ್ಕಾರ. ಕಾನೂನು ವ್ಯವಸ್ಥೆಯನ್ನು ಗೂಂಡಾಗಳ ಕೈಗೆ ಕೊಟ್ಟಿದೆ. ಸರ್ಕಾರವನ್ನ ಡಾನ್‌ಗಳು ನಡೆಸುತ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.. ಲವ್ ಜಿಹಾದ್ ನನಗೆ ಕಾಣುತ್ತಿಲ್ಲ: ಹುಬ್ಬಳ್ಳಿ ಕೊಲೆ ಬಗ್ಗೆ ಪರಮೇಶ್ವರ್ ಹೇಳಿಕೆ

ಹುಬ್ಬಳ್ಳಿಯಲ್ಲಿ (Hubballi) ನಡೆದ ಘಟನೆ ಲವ್ ಜಿಹಾದ್ ಅಂತಾ ಕುಟುಂಬದವರು ಹೇಳಿದ್ದಾರೆ. ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಲವ್ ಜಿಹಾದ್ ಅಂತಾ ಹೇಳಿದ್ದು ಕಾಂಗ್ರೆಸ್ ಕಾರ್ಪೋರೇಟರ್. ಆದ್ರೆ ಆ ಹೆಣ್ಣು ಮಗಳ ಮೇಲೆ ಆಪಾದನೆ ಮಾಡ್ತಿದ್ದೀರಿ. ಕಾಂಗ್ರೆಸ್‌ನವರಿಗೆ ನಾಚಿಕೆ ಆಗಲ್ವಾ? ಕಾಂಗ್ರೆಸ್ ಅವರಿಗೆ ಮನುಷ್ಯತ್ವ ಇದ್ಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗದಗ ಬಿಜೆಪಿ ನಗರಸಭೆ ಉಪಾಧ್ಯಕ್ಷೆಯ ಕುಟುಂಬದ ನಾಲ್ವರ ಬರ್ಬರ ಹತ್ಯೆ – ಮಲಗಿದ್ದಲ್ಲೇ ಕೊಲೆಗೈದು ದುಷ್ಕರ್ಮಿಗಳು ಪರಾರಿ

ಚುನಾವಣೆ ಹತ್ತಿರ ಇದೆ. ಈ ವಿಷಯ ಬೆಳಕಿಗೆ ಬಂದ್ರೆ ಕಾಂಗ್ರೆಸ್‌ಗೆ ಛೀಮಾರಿ ಹಾಕ್ತಾರೆ ಅಂತಾ ಸಿದ್ದರಾಮಯ್ಯ ಅವರೇ ಫೀಲ್ಡಿಗೆ ಇಳಿದಿದ್ದಾರೆ. ಅವರ ಹೇಳಿಕೆಯನ್ನು ಗಮನಿಸಿದ್ದೇನೆ, ವೈಯಕ್ತಿಕ ಕಾರಣಕ್ಕೆ ನಡೆದಿರುವ ಕೊಲೆ ಅಂತಾ ಹೇಳಿದ್ದಾರೆ. ಕರ್ನಾಟಕದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ. ಲವ್ ಜಿಹಾದ್ ಮಾಡೋರಿಗೆ ಪಾಸ್ ಪೋರ್ಟ್ ಕೊಟ್ಟಿದ್ದಾರೆ. ಗಲಭೆ, ಕೊಲೆ ಮಾಡೋರಿಗೆ ವಿಸಾ ಕೊಟ್ಟಿದ್ದಾರೆ. ಕಾಂಗ್ರೆಸ್ ಅವರ ಸರ್ಕಾರ ಖದೀಮರ ಗ್ಯಾಂಗ್ ಆಗಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುವತಿ ಹತ್ಯೆ ಖಂಡಿಸಿ ಭುಗಿಲೆದ್ದ ಆಕ್ರೋಶ; ವಿದ್ಯಾರ್ಥಿಗಳು, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

Share This Article