ಕಾಂಗ್ರೆಸ್ ಕರಾಳ ರೀತಿಯಲ್ಲಿ ಈ ಅಧಿವೇಶನವನ್ನ ನಡೆಸಿದೆ: ಆರ್ ಅಶೋಕ್

3 Min Read

– ಇದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯ ಭಾಗ
– ಸದನದಲ್ಲಿ ಅಗೌರವ ತೋರಿಸಿದ ಶಾಸಕರ ವಿರುದ್ಧ ಕ್ರಮ ಆಗ್ಬೇಕು

ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನ (Joint Session) ಕಾಂಗ್ರೆಸ್ ನಡೆಸಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಕಾಂಗ್ರೆಸ್ (Congress) ವಿರುದ್ಧ ಗುಡುಗಿದ್ದಾರೆ.

ಭಾಷಣ ಓದದೇ ಹೊರನಡೆದ ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿ ಅಗೌರವ ತೋರಿದ ಘಟನೆ ಕುರಿತು ಮಾತನಾಡಿದ ಅವರು, ರಾಜ್ಯಪಾಲರ ನಡೆ ಇದೇ ಮೊದಲು ಅಲ್ಲ. ಹಿಂದೆ ಹಂಸರಾಜ್ ಭಾರದ್ವಾಜ್ ಅವರು ಮಾಡಿದ್ದರು. ಕಾಂಗ್ರೆಸ್ ಗೂಂಡಾಗಿರಿ ಮಾಡಿದ್ದಾರೆ. ರಾಜ್ಯಪಾಲರಿಗೆ ಘೇರಾವ್ ಮಾಡಿದ್ದಾರೆ. ಇದನ್ನು ಖಂಡಿಸುತ್ತೇವೆ. ಇವರನ್ನು ಸದನದಿಂದ ಹೊರಗೆ ಹಾಕಬೇಕು. ಸ್ವತಃ ಕಾನೂನು ಮಂತ್ರಿಯೇ ಅಡ್ಡಿಪಡಿಸಿದ್ದಾರೆ. ಸಭಾಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ – ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ AI ಸ್ಮಾರ್ಟ್‌ ಕನ್ನಡಕ

ಕಾಂಗ್ರೆಸ್ ಆಫೀಸ್ ಮಾಡಲು ಪ್ರಯತ್ನಿಸಿದರು. ರಾಜ್ಯಪಾಲರಿಗೆ ಯಾರೆಲ್ಲ ಅಗೌರವ ತೋರಿಸಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು. ರಾಹುಲ್, ಸೋನಿಯಾ ಮೆಚ್ಚಿಸಲು ಮಾಡಿರುವ ಕುತಂತ್ರ ಇದು. ಕಾಂಗ್ರೆಸ್ ಗೂಂಡಾ ಪ್ರವೃತ್ತಿಯನ್ನ ಮುಂದುವರೆಸಿದೆ. ಕಾಂಗ್ರೆಸ್‌ನ ಸದಸ್ಯರಿಗೆ ನಾಚಿಕೆಯಾಗಬೇಕು. ರಾಜ್ಯಪಾಲರನ್ನ ಅಡ್ಡಗಟ್ಟಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯ ಭಾಗ. ರಾಜ್ಯಪಾಲರು ಇವತ್ತು ಸಂವಿಧಾನವನ್ನ ಎತ್ತಿ ಹಿಡಿದಿದ್ದಾರೆ. ಬಿಜೆಪಿ ಹೋರಾಟ ಮುಂದುವರಿಸುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನದ ಉಲ್ಲಂಘನೆಯಾಗಿದೆ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ ತೀವ್ರ ಆಕ್ಷೇಪ

ರಾಜ್ಯಪಾಲರು ಸಂವಿಧಾನದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಧನ್ಯವಾದ ಹೇಳಿ ಹೊರಟಿದ್ದಾರೆ. ಭಾರಾದ್ವಾಜ್ ಇದ್ದಾಗಲೂ ಘೋಷಣೆ ಮಾಡಿ ಹೊರಟು ಹೋಗಿದ್ದರು. ಇದರಲ್ಲಿ ತಪ್ಪೇನಾಗಿದೆ? ಆ ಕುರ್ಚಿಯಲ್ಲಿ ಕುಳಿತು ಭಾಷಣ ಪ್ಲೇ ಮಾಡಿ ಹೋಗುವ ಅಧಿಕಾರ ಇದೆ. ಇದಕ್ಕೆ ಕಾಂಗ್ರೆಸ್‌ನವರು ಅಗೌರವ ತೋರಿದ್ದಾರೆ. ಹೆಚ್.ಕೆ ಪಾಟೀಲರೇ ಅಡ್ಡಿಪಡಿಸಿದ್ದಾರೆ. ಅಡ್ಡಿಪಡಿಸಿದವರ ಮೇಲೆ ಕ್ರಮ ಆಗಬೇಕು. ಇವರ ಬಿಲ್‌ಗಳಿಗೆಲ್ಲ ರಾಜ್ಯಪಾಲರು ಸಹಿ ಹಾಕಿ ಕಳುಹಿಸಿದ್ದಾರೆ, ಆಗ ಇವ್ರಿಗೆ ಸರಿ ಇತ್ತಾ? ಲೋಕಭವನವನ್ನ ಕಾಂಗ್ರೆಸ್ ಭವನ ಮಾಡಲು ಹೊರಟಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ. ರಾಹುಲ್, ಸೋನಿಯಾ ಮೆಚ್ವಿಸುವ ಕುತಂತ್ರ ಇದು. ಸಂವಿಧಾನಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ. ಅಂಬೇಡ್ಕರ್‌ನ ಈ ಹಿಂದೆ ಸೋಲಿಸಿದ್ದೇ ಅವರು. ಸದನದಲ್ಲಿ ಅಗೌರವ ತೋರಿಸಿದ ಶಾಸಕರ ವಿರುದ್ಧ ಕ್ರಮ ಆಗಲೇಬೇಕು ಎಂದು ಪಟ್ಟುಹಿಡಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ – ಭಾಷಣ ಓದದೇ ತೆರಳಿದ ಗೆಹ್ಲೋಟ್‌

ಸಿದ್ದರಾಮಯ್ಯ ಸೋನಿಯಾ, ರಾಹುಲ್ ಮೆಚ್ಚಿಸಲು ಸಿದ್ಧಪಡಿಸಿರುವ ಭಾಷಣ ಅದು. ಇಂಗ್ಲಿಷ್‌ನಲ್ಲಿ ಪ್ರಿಂಟ್ ಮಾಡಿ ಅವರಿಗೆ ಕಳುಹಿಸಿ, ನನ್ನನ್ನು ಉಳಿಸಿ ಎಂದು ಹೇಳಲು ರೆಡಿ ಮಾಡಿರೋದು, ಜನರ ಹಿತಕ್ಕೆ ಮಾಡಿರೋದಲ್ಲ. ಅದನ್ನು ಯಾಕೆ ರಾಜ್ಯಪಾಲರು ಓದಬೇಕು? ಕೇಂದ್ರ-ರಾಜ್ಯದ ಮಧ್ಯೆ ಸೇತುವೆಯಾಗಿ ಕೆಲಸ ಮಾಡಬೇಕು. ಕೇಂದ್ರಕ್ಕೆ ಅವಹೇಳನ ಮಾಡುವ ರೀತಿ ಇದ್ದರೆ ಟೀಕೆಗಳನ್ನು ಓದಬಾರದು ಎಂದು ಮನವಿ ಮಾಡಿದ್ದೇನೆ. ನಗರ ನಕ್ಸಲರೆಲ್ಲಾ ಬೀದಿಗೆ ಬಂದಿದ್ದಾರೆ. ಗವರ್ನರ್‌ಗೆ ಛೀಮಾರಿ ಹಾಕಬೇಕು ಎಂದು ಶುರು ಮಾಡಿದ್ದಾರೆ. ಇದನ್ನು ಎದುರಿಸುವ ಶಕ್ತಿ ರಾಜ್ಯಪಾಲರಿಗೆ ಇದೆ. ಭಾರತದ ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರಿಗೆ ಉನ್ನತ ಗೌರವಾನ್ವಿತ ಸ್ಥಾನ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲರು ಕೇಂದ್ರ, ರಾಜ್ಯ ಸರ್ಕಾರದ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಸಂವಿಧಾನದ ವಿಧಿ 175ರ ಪ್ರಕಾರ ಅವರೇ ಈ ಜಂಟಿ ಅಧಿವೇಶನವನ್ನ ಕರೆಯೋದು. ರಾಜ್ಯಪಾಲರ ಆದೇಶದ ಮೇರೆಗೆ ಜಂಟಿ ಅಧಿವೇಶನ ನಡೆಯೋದು. ಅವರ ಆದೇಶದ ಮೇರೆಗೆ ನಾವೆಲ್ಲರೂ ಕಲಾಪಕ್ಕೆ ಬರೋದು. ಈ ಸರ್ಕಾರದ ಕ್ಯಾಬಿನೆಟ್ ಇರೋದು ರಾಜ್ಯಪಾಲರಿಗೆ ಸಲಹೆ ಕೊಡಲು ಅಷ್ಟೇ. ರಾಜ್ಯಪಾಲರು ಏನು ಮಾತಾಡಬೇಕು ಕರ್ನಾಟಕ ಅಭಿವೃದ್ಧಿ ಬಗ್ಗೆ ಭಾಷಣದಲ್ಲಿ ಸಲಹೆ ನೀಡಬಹುದು. ಮಾತಾಡ್ಲೇ ಬೇಕು ಅಂತೇನಿಲ್ಲ ಎಂದರು. ಇದನ್ನೂ ಓದಿ: ವಿಧಾನಸೌಧಕ್ಕೆ ರಾಜ್ಯಪಾಲರ ಆಗಮನ – ಹೂಗುಚ್ಛ ನೀಡಿ ಆತ್ಮೀಯ ಸ್ವಾಗತ ಕೋರಿದ ಸಿಎಂ

ಕಾಂಗ್ರೆಸ್‌ನವರು ಗವರ್ನರ್ ಮೇಲೆ ಒತ್ತಡ ಹಾಕಿ ಅವರ ಬಾಯಿಂದ ಕೇಂದ್ರ ಸರ್ಕಾರವನ್ನ ಟೀಕಿಸುವ ಕೆಲಸಕ್ಕೆ ಇಳಿದಿದ್ದಾರೆ. ಇದು ಅಕ್ಷಮ್ಯ ಅಪರಾಧ. ಬಾಂಗ್ಲಾದವರಿಗೆ ಮನೆ ಕೊಡುತ್ತೇವೆ ಅಂತಾ ಸರ್ಕಾರ ಹೇಳಿದರೆ ಅದನ್ನ ಗವರ್ನರ್ ಹೇಳೋಕೆ ಆಗುತ್ತಾ? ಈ ಅಧಿವೇಶನ ಮಾಡೋದು ಏನಿತ್ತು? ಓದಬೇಕು ಬೇಡ್ವೋ ಎಂಬ ಅಧಿಕಾರ ಗವರ್ನರ್‌ಗೆ ಇದೆ. ಹಿಂದೆಯೂ ಮೊದಲ ಸಾಲು ಓದಿ, ಕೊನೆಯ ಸಾಲು ಓದಿರುವ ಇತಿಹಾಸವೂ ಇದೆ. ನಾನು ವಿಪಕ್ಷ ನಾಯಕನಾಗಿ ರಾಜ್ಯಪಾಲರಿಗೆ ಡಿಮ್ಯಾಂಡ್ ಮಾಡಿದ್ದೇನೆ. ಕೇಂದ್ರಕ್ಕೆ ಅವಹೇಳನ ರೀತಿ ಸಾಲು ಸೇರದಿದ್ದರೆ ಅದು ಸಂವಿಧಾನದ ಉಲ್ಲಂಘನೆ ಆಗಲಿದೆ ಎಂದು ಹೇಳಿದ್ದೇನೆ. ನಗರ ನಕ್ಸಲರೆಲ್ಲರೂ ಬೀದಿಗೆ ಬಂದಿದ್ದಾರೆ. ಅವರ ಹೇಳಿಕೆಗಳು ಶುರುವಾಗಿವೆ. ರಾಜ್ಯಪಾಲರಿಗೆ ಛೀಮಾರಿ ಹಾಕಬೇಕು ಅಂತಾ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮತ್ತೆ ಎಫ್‌ಐಆರ್

Share This Article