ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

Public TV
2 Min Read

– ಸಿಎಂ ತವರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರ ಅಂತ ಕಿಡಿ

ಮೈಸೂರು: ನಗರದಲ್ಲಿ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Girl Rape And Murder) ಸಿದ್ದರಾಮಯ್ಯಗೆ ಕಪ್ಪುಚುಕ್ಕೆ, ಇದು ಸರ್ಕಾರದ ವೈಫಲ್ಯದ ಪರಿಣಾಮ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಕಿಡಿಕಾರಿದ್ರು.

ಬೆಂಗಳೂರಿನಲ್ಲಿ ಮಾತಾಡಿದ ಆರ್. ಅಶೋಕ್, ಮೈಸೂರಿನ (Mysuru) ಘಟನೆ ರಾಜ್ಯವನ್ನು ತಲ್ಲಣಗೊಳಿಸಿದೆ. ಬಾಲಕಿ ಅತ್ಯಾಚಾರ ತಡೆಯೋಕಾಗದವರು ಯಾವ ಪುರುಷಾರ್ಥಕ್ಕೆ ದಸರಾ‌ ಮೆರವಣಿಗೆ ಮಾಡಿದ್ರು? ರಾಜ್ಯದಲ್ಲಿ ರೇಪ್ ಮೆರವಣಿಗೆ ಸಾಗಿದೆ. ಸಿಎಂ ಸ್ವತಃ ತಮ್ಮ ಜಿಲ್ಲೆಯಲ್ಲೇ ಬಾಲಕಿ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ಸರ್ಕಾರ ತಲೆತಗ್ಗಿಸುವ ಘಟನೆ ಇದು ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮೈಸೂರು | ಬಾಲಕಿಯ ರೇಪ್‌ ಬಳಿಕ ಎದೆ, ಹೊಟ್ಟೆ, ಮರ್ಮಾಂಗಕ್ಕೆ 19 ಬಾರಿ ಚಾಕು ಇರಿದು ಕೊಂದಿದ್ದ ಕಾಮುಕ

ನೈಟ್ ಬೀಟ್ ಪೊಲೀಸರು ಏನ್ ಮಾಡ್ತಿದ್ರು? ಪೋಸ್ಟಿಂಗ್‌ಗಾಗಿ ಕಾಸು ಕಲೆಕ್ಷನ್‌ಗೆ ಹೋಗಿದ್ರಾ ಪೊಲೀಸರು? ಸಿಎಂ ತವರು ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ನಡೆದಿದ್ದರೂ ಸಿಎಂ, ಡಿಸಿಎಂ ಚಕಾರ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದೇ ಸರ್ಕಾರ ಕೈಚೆಲ್ಲಿದೆ. ಸರ್ಕಾರ ಕ್ರಮ ಕೈಗೊಳ್ಳದೇ ನಿದ್ದೆಯಲ್ಲಿದೆ, ಇದು ಅವಮಾನವೀಯ ಘಟ‌ನೆ. ಪೊಲೀಸರು ದಸರಾ (Dasara) ಗುಂಗಲ್ಲೇ ಇದ್ದಿದ್ರೆ ಅಲರ್ಟ್ ಆಗಿರ್ಬೇಕಿತ್ತು. ಇಡೀ ಮೈಸೂರು ವಿದ್ಯುದ್ದೀಪಾಲಂಕಾರದ ಬೆಳಕಿನಿಂದ ಝಗಮಗಿಸ್ತಿತ್ತು. ನಾಲ್ಕೈದು ಜಿಲ್ಲೆಗಳ ಪೊಲೀಸರು ಭದ್ರತೆಗಿದ್ರು. ಇಷ್ಟಿದ್ರೂ ಬಾಲಕಿ ರೇಪ್ ತಡೆಯಲು ಆಗಿಲ್ಲ. ದೆಹಲಿಯಲ್ಲಿ ಮೋದಿ ಮನೆ ಮುಂದೆ ರಸ್ತೆಗುಂಡಿ ಪತ್ತೆ ಹಚ್ಚೋರು ಬಾಲಕಿ ಅತ್ಯಾಚಾರ ತಡೆಯಲು ಆಗಿಲ್ಲ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರಿನ ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ: ಪ್ರತಾಪ್ ಸಿಂಹ ಆರೋಪ

ಇನ್ನು ಮೈಸೂರು ಪೊಲೀಸರಿಗೆ ಯತೀಂದ್ರ ಕಾಟ ಎಂದು ಪ್ರತಾಪ್ ಸಿಂಹ (Pratap Simha) ಆರೋಪ ಸರಿ ಇದೆ. ಪ್ರತಾಪ್ ಸಿಂಹ ಸತ್ಯ ಹೇಳಿದ್ದಾರೆ. ಪೋಸ್ಟಿಂಗ್ ವ್ಯವಹಾರ ಸರ್ಕಾರದಲ್ಲಿ ನಡೀತಿದೆ. ಪೊಲೀಸರು ಫೀಲ್ಡ್‌ನಲ್ಲಿಲ್ಲ, ಪೋಸ್ಟಿಂಗ್‌ಗಾಗಿ ಶಾಸಕರು, ಸಚಿವರ ಮನೆ ಮುಂದೆ ಇದ್ದಾರೆ ಎಂದು ಅಶೋಕ್ ಹೇಳಿದ್ರು. ಇದನ್ನೂ ಓದಿ: ಚಾಮುಂಡಿ ತಾಯಿಗೆ ಮುಡಿ ಉತ್ಸವ; ರಾಜರ ವಜ್ರ-ವೈಡೂರ್ಯ ಅಲಂಕಾರದಲ್ಲಿ ಕಂಗೊಳಿಸಿದ ದೇವಿ

Share This Article