ವಜಾ ಮಾಡೋದಾದ್ರೆ ಕಾಂಗ್ರೆಸ್‍ನವರನ್ನೇ ಮಾಡಬೇಕು: ಆರ್ ಅಶೋಕ್

Public TV
2 Min Read

ಬೆಂಗಳೂರು: ಕಾಂಗ್ರೆಸ್‍ನವರಿಗೆ ಮಾತನಾಡುವ ನೈತಿಕತೆಯೇ ಇಲ್ಲ. ವಜಾ ಮಾಡೋದಾದರೆ ಕಾಂಗ್ರೆಸ್ ಅವರನ್ನೇ ಮಾಡಬೇಕು ಎಂದು ಸಚಿವ ಆರ್. ಅಶೋಕ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಳಿನಾ ಕೇಳಿ ಖಾರ ಅರಿಯೋ ಅಭ್ಯಾಸ ಬಿಜೆಪಿಗಿಲ್ಲ. ವಜಾ ಮಾಡುವುದಾದರೆ ಕಾಂಗ್ರೆಸ್ ಅವರನ್ನು ವಜಾ ಮಾಡಬೇಕು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಬಾವುಟ ಹಾರಿಸಿ ಎಂದಾಗ ಇವರು ಎಲ್ಲಿದ್ದರು? ಇದು ಕಾಂಗ್ರೆಸ್ ಅವರ ರಾಜಕೀಯ ಮೇಲಾಟ ಅಷ್ಟೆ. ಧರಣಿ ಮಾಡಲಿ, ನಮಗೆ ಏನೂ ತೊಂದರೆ ಇಲ್ಲ. ಮೋದಿ ಬಂದ ಮೇಲೆ ಇವರು ಎಲ್ಲಾ ಕಡೆ ನಿದ್ದೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಚಿವ ಈಶ್ವರಪ್ಪ ಮಾತಾನಾಡಿರುವ ಪೂರ್ತಿ ವಿಷಯದಲ್ಲಿ ರಾಷ್ಟ್ರ ಧ್ವಜಕ್ಕೆ ಯಾರದಾರೂ ಅಗೌರವ ತೊರಿಸಿದರೆ ಅವರು ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಇದರಲ್ಲಿ ಈಶ್ವರಪ್ಪ ಅವರ ಪಾತ್ರ ಏನಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ ಅವರು ಪ್ರಚಾರ ತೆಗೆದುಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲಾ ನಾಟಕ, ಶೋ ಎಂದು ಕುಮಾರಸ್ವಾಮಿಯೇ ಹೇಳಿದ್ದಾರೆ. ನಿನ್ನೆಯ ಸದನದಲ್ಲಿ ನಡೆದ ವರ್ತನೆ ಇದು ಕಾಂಗ್ರೆಸ್‍ನ ಗೂಂಡಾಗಿರಿಯಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಲು ಹೋದಾಗ ಧ್ವಜ ಹಾರಿಸಬಾರದು ಎಂದು ಕಾಂಗ್ರೆಸ್‍ನವರು ಲಾಠಿ ಚಾರ್ಜ್ ಮಾಡಿದ್ದರು. ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ಕಾಂಗ್ರೆಸ್‍ನವರು ಧರಣಿ ಮಾಡಲಿ. ನಿದ್ರೆ ಮಾಡಲಿ. ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತೆ ಎಂದು ವ್ಯಂಗ್ಯವಾಡಿದರು.

ಎಲ್ಲಾ ಕಡೆ ಕಾಂಗ್ರೆಸ್ ಖಾಲಿ ಆಗುತ್ತಿದೆ. ಬಿಜೆಪಿ ಇಲ್ಲ ಅಂದಿದ್ದರೆ ಕಾಂಗ್ರೆಸ್ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ಇವರಿಗೆ ಇಟಲಿ ಮೇಲೆ ತುಂಬಾ ಆಸೆ. ಇಟಲಿಯವರು ಏನ್ ಹೇಳುತ್ತಾರೋ ಅದನ್ನು ಕೇಳುತ್ತಾರೆ. ಜೊತೆಗೆ ಅಲ್ಪಸಂಖ್ಯಾತರ ಓಲೈಕೆ ಮಾಡುವುದಷ್ಟೇ ಗೊತ್ತು ಎಂದರು. ಇದನ್ನೂ ಓದಿ: ತಮ್ಮ ಮನೆಯಲ್ಲಿ ಸುರಕ್ಷಿತವಾಗಿಲ್ಲ ಅಂದ್ರೆ ಹಿಜಬ್ ಧರಿಸಿ, ಶಾಲಾ-ಕಾಲೇಜುಗಳಲ್ಲ: ಪ್ರಜ್ಞಾ ಠಾಕೂರ್

ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್. ಈಗ ಇರುವುದು ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್‍ಗೂ ಈಗಿರುವ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *