ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಖಚಿತ: ಮತ್ತೆ ಭವಿಷ್ಯ ನುಡಿದ ಆರ್.ಅಶೋಕ್

Public TV
1 Min Read

ಬೆಂಗಳೂರು: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗೇ ಆಗ್ತಾರೆ. ಸಿದ್ದರಾಮಯ್ಯ (Siddaramaiah) ಬದಲಾವಣೆ ಆಗೋದು ಖಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

ಪ್ರಯತ್ನ ವಿಫಲವಾಗಿರಬಹುದು ಆದರೆ ಪ್ರಾರ್ಥನೆ ವಿಫಲವಾಗೊಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಹಾಗೇ ಹೇಳಿರೋದ್ರಿಂದ ಅವರಿಗೆ ಸಿಎಂ ಆಸೆ ಇದೆ ಎಂದು ಅರ್ಥ ಅಲ್ವ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ಇದನ್ನ ನಾನು ಹೇಳೋದು ಅಲ್ಲ, ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಧಿಕಾರದ ಮದದಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀವಿ ಅಂತಿದ್ದಾರೆ: ಯಡಿಯೂರಪ್ಪ ಕಿಡಿ

ಲಾಟರಿ ಸಿಎಂ ಅಂದವರು ಯಾರು? ಇಕ್ಬಾಲ್ ಹುಸೇನ್ ಡಿಕೆಶಿ ಸಿಎಂ ಆಗ್ತಾರೆ ಅಂತಾರೆ. ಕಾಂಗ್ರೆಸ್ ಶಾಸಕರೇ ಡಿಕೆಶಿ ಸಿಎಂ ಆಗ್ತಾರೆ ಅಂತಿದ್ದಾರೆ. ನಮ್ಮನ್ನ ಟೀಕೆ ಮಾಡೋದಲ್ಲ. ನಿಮ್ಮ ಪಕ್ಷವನ್ನು ಮೊದಲು ಸರಿ ಮಾಡಿ, ಅವರಿಗೆ ಮದ್ದು ಅರೆಯಿರಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ

ಡಿ.ಕೆ.ಶಿವಕುಮಾರ್ ದೇವಸ್ಥಾನಕ್ಕೆ ಹೋಗ್ತಿರೋದು ವರ ಪಡೆಯೋಕೆ. ಸಿಎಂ ಆಗೋ ಕಾಲ ಕೂಡಿ ಬರುತ್ತಿದೆ ಎಂದು ಅನ್ನಿಸುತ್ತೆ. ಅದಕ್ಕೆ ದೇವಸ್ಥಾನಕ್ಕೆ ಡಿಕೆಶಿ ಹೋಗ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಪಟ್ಟದಿಂದ ಇಳಿತಾರೆ. ಇದು ಗ್ಯಾರಂಟಿ ಎಂದು ಹೇಳಿದ್ದಾರೆ.

Share This Article