ಟ್ರೆಂಡ್ ಆಯ್ತು ಪಿಲ್ಲೋ ಚಾಲೆಂಜ್ – ಬೆತ್ತಲ ಮೈಗೆ ದಿಂಬು ಕಟ್ಟಿ ಸೆಲೆಬ್ರಿಟಿ ಫೋಟೋ ಪೋಸ್ಟ್

Public TV
2 Min Read

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಹೊಸ ಹೊಸ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಲೇ ಇರುತ್ತೆ. ಕೆಲವೊಂದು ಚಾಲೆಂಜ್‍ಗಳು ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಆದೇ ಪಟ್ಟಿಗೆ ಈಗ ಪಿಲ್ಲೋ ಚಾಲೆಂಜ್ ಕೂಡ ಸೇರಿಕೊಂಡಿದೆ.

ಸದ್ಯ ಲಾಕ್‍ಡೌನ್ ಅಲ್ಲಿ ‘ಬಿ ದ ರಿಯಲ್ ಮ್ಯಾನ್ ಚಾಲೆಂಜ್’, ‘ಡಾಲ್ಗೊನಾ ಕಾಫಿ ಚಾಲೆಂಜ್’, ‘ಹೋಂ ಗಾರ್ಡನ್ ಚ್ಯಾಲೆಂಜ್’ ಹೀಗೆ ಅನೇಕ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಿದೆ. ಈ ಮಧ್ಯೆ ಸಿಕ್ಕಾಪಟ್ಟೆ ವೈರಲ್ ಆಗಿರೋದು ಪಿಲ್ಲೋ ಚಾಲೆಂಜ್. ಈ ಚಾಲೆಂಜ್‍ಗೆ ಕೇವಲ ಯುವಕ, ಯುವತಿಯರು, ಮಹಿಳೆಯರು ಮಾತ್ರವಲ್ಲಿ ಸೆಲೆಬ್ರಿಟಿಗಳು, ಪುರುಷರು ಹಾಗೂ ಮಕ್ಕಳು ಕೂಡ ಫಿದಾ ಆಗಿದ್ದಾರೆ. ಇವರೆಲ್ಲಾ ಪಿಲ್ಲೋ ಚಾಲೆಂಜ್ ಸ್ವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

https://www.instagram.com/p/B_ML5iTj-sx/

ಹಾಲಿವುಡ್ ನಟಿಯರು ಕೂಡ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೇ ಟಾಲಿವುಡ್ ನಟಿ ಪಾಯಲ್ ರಾಜ್‍ಪೂತ್, ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಕೂಡ ಈ ಚಾಲೆಂಜ್ ಸ್ವೀಕರಿಸಿ, ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

https://www.instagram.com/p/B_CfrgdnUMQ/

ಬಣ್ಣದ ಬಣ್ಣದ ದಿಂಬುಗಳನ್ನೇ ಬಟ್ಟೆಯಂತೆ ಬರೀ ಮೈಗೆ ಅಡ್ಡವಿಟ್ಟುಕೊಂಡು, ಸೊಂಟಕ್ಕೆ ದಿಂಬಿಗೆ ಸೇರಿಸಿ ಒಂದು ಬೆಲ್ಟ್ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಂಚಿಕೊಳ್ಳುವುದಕ್ಕೇ ಪಿಲ್ಲೋ ಚಾಲೆಂಜ್ ಎನ್ನುತ್ತಾರೆ. ಮೊದ ಮೊದಲು ಈ ಚಾಲೆಂಜ್ ಅನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದರು, ಆದರೆ ಲಾಕ್‍ಡೌನ್ ಎಫೆಕ್ಟ್ ನಿಂದ ಮನೆಯಲ್ಲೇ ಕೂತು ಬೋರ್ ಆಗಿರುವ ಪುರುಷರೂ ಕೂಡ ಚಾಲೆಂಜ್ ಸ್ವೀಕರಿಸಿ ನಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಈ ಪಿಲ್ಲೋ ಚಾಲೆಂಜ್ ಫೋಟೋವನ್ನು ಇನ್‍ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

ಬರೀ ಮೈಗೆ ಅಡ್ಡ ದಿಂಬು ಕಟ್ಟಿಕೊಂಡು ಅದಕ್ಕೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ, ನಾಯಿ ಮರಿ, ಬೆಕ್ಕು, ಗಿಡಗಳ ಜೊತೆ ಫೋಟೋ ತೆಗೆದು ಶೇರ್ ಮಾಡುತ್ತಿದ್ದಾರೆ. ಕೆಲವು ಪುರುಷರು ಕೂಡ ಮಹಿಳೆಯರಂತೆ ಪಿಲ್ಲೋ ಜೊತೆಗೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಫೋಟೋಗಳಿಗೆ ನೆಟ್ಟುಗರು ಲೈಕ್ಸ್, ಕಮೆಂಟ್‍ಗಳ ಸುರಿಮಳೆಯೇ ಸುರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *