ಬರಗೂರು ಸಮಿತಿಯ ಪರಿಷ್ಕೃತ ಪಠ್ಯಪುಸ್ತಕದ ಗುಣಮಟ್ಟ ಸರಿಯಿಲ್ಲ: NCERT

Public TV
2 Min Read

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಪರ-ವಿರೋಧಗಳು ನಡೆಯುತ್ತಿರುವ ಹೊತ್ತಿನಲ್ಲೇ ಈಗ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಕಾಲದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದ ಪರಿಷ್ಕೃತ ಪಠ್ಯ ಪುಸ್ತಕ ಗುಣಮಟ್ಟದ ಸರಿಯಿಲ್ಲ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್(ಎನ್‍ಸಿಇಆರ್‌ಟಿ) ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

2005ರ ರಾಷ್ಟ್ರೀಯ ಶಿಕ್ಷಣ ನೀತಿ ಅಂಶಗಳು ಬರಗೂರು ಸಮಿತಿ ರಚನೆ ಮಾಡಿದ್ದ ಪರಿಷ್ಕರಣೆ ಪಠ್ಯದಲ್ಲಿ ಹೆಚ್ಚಾಗಿ ಇರಲಿಲ್ಲ. ಮೌಲ್ಯಗಳನ್ನು ಬೆಳೆಸಲು ಪೂರಕವಾದ ಪಠ್ಯಗಳು ಬರಗೂರು ರಾಮಚಂದ್ರಪ್ಪರ ಪರಿಷ್ಕರಣೆ ಪಠ್ಯ ಪುಸ್ತಕದಲ್ಲಿ ಇಲ್ಲ ಎಂಬ ಮಹತ್ವದ ಅಂಶವನ್ನು ತಿಳಿಸಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ: ಡಿ.ಕೆ ಶಿವಕುಮಾರ್

2017-18ರಲ್ಲಿ ಕರ್ನಾಟಕದ ಶಾಲೆಗಳಲ್ಲಿ ಜಾರಿಗೆ ತರಲಾದ ಬರಗೂರು ಸಮಿತಿ ನೂತನ ಪರಿಷ್ಕತ ಪಠ್ಯಪುಸ್ತಕಗಳ ಬಗ್ಗೆ ಎನ್‍ಸಿಇಆರ್‌ಟಿ ಸಂಸ್ಥೆ ಅಧ್ಯಯನ ಕೈಗೊಂಡು ವರದಿ ಸಲ್ಲಿಸಿತ್ತು. 78 ಪುಟಗಳ ವರದಿಯಲ್ಲಿ ಭಾಷೆ ಮತ್ತು ಸಮಾಜ ವಿಜ್ಞಾನ, ಗಣಿತ ಪಠ್ಯ ಪುಸ್ತಕಗಳಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗುವ ಪಠ್ಯಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಷ್ಟೆಲ್ಲ ಲೋಪಗಳಿದ್ದರೂ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ ಪಠ್ಯ ಪರಿಷ್ಕರಣೆಯನ್ನು ಬರಗೂರು ಟೀಂ ವಿರೋಧ ಮಾಡಿದ್ದು ಯಾಕೆ ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ.

ಎನ್‌ಸಿಆರ್‌ಟಿಇ ವರದಿಯಲ್ಲಿ ಏನಿದೆ?
ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಅಡಕಗೊಳಿಸಲಾದ ವಿಷಯಗಳು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಲು ಪೂರಕವಾದ ಚಟುವಟಿಕೆಗಳನ್ನು ಹೊಂದಿರಬೇಕು.ಆದರೆ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಇಂತಹ ಚಟುವಟಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.

ಪಠ್ಯಪುಸ್ತಕಗಳಲ್ಲಿ ಲಿಂಗತ್ವ, ಒಳಗೊಳ್ಳುವಿಕೆ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಯಾವುದೇ ಪೂರ್ವಗ್ರಹಗಳು ಇಲ್ಲ. ಆದಾಗ್ಯೂ ಈ ಅಂಶಗಳಿಗೆ ಸಂಬಂಧಿಸಿದ ಕಾಳಜಿಗಳಿಗೆ ಅಗತ್ಯವಾದ ಸೂಕ್ಷ್ಮತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಪೂರಕವಾದ ವಿಷಯ, ಚಟುವಟಿಕೆ,ನಿಯೋಜಿತ ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ 2005 ರಂತೆ ಪಠ್ಯಪುಸ್ತಕಗಳು ಜ್ಞಾನ ಕಟ್ಟುವ ವಿಧಾನವನ್ನು (constructivist approach) ಒಳಗೊಂಡಿರಬೇಕು.ಆದರೆ ಸಿದ್ದಪಡಿಸಲಾದ ಪಠ್ಯಪುಸ್ತಕಗಳಲ್ಲಿ ಈ ಅಂಶಕ್ಕೆ ಹೆಚ್ಚಿನ ಒತ್ತು ನೀಡಿಲ್ಲ.

ಭಾಷೆ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ಮೌಲ್ಯಗಳು ಅಂತರ್ಗತವಾಗಿದ್ದರೂ ಮೌಲ್ಯಗಳನ್ನು ಬೆಳೆಸಲು ಪೂರಕವಾದ, ಚಟುವಟಿಕೆಗಳು, ಉದಾಹರಣೆಗಳು, ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ.

ವಿದ್ಯಾರ್ಥಿಗಳ ದೈನಂದಿನ ಅನುಭವಗಳಿಗೆ ಪಠ್ಯಪುಸ್ತಕಗಳನ್ನು ಜೋಡಿಸುವ ಕಾರ್ಯ ಆಗಿದ್ದರೂ ಇದು ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ. ಜೊತೆಗೆ ಪಠ್ಯಪುಸ್ತಕಗಳಲ್ಲಿ ನೀಡಲಾದ ಉದಾಹರಣೆಗಳು ವಿದ್ಯಾರ್ಥಿಗಳ ಸನ್ನಿವೇಶಗಳಿಗೆ ಹೆಚ್ಚು ಪೂರಕವಾಗಿಲ್ಲ ಹಾಗೂ ಅರ್ಥಪೂರ್ಣವಾಗಿಲ್ಲ.

ಪಠ್ಯ ಪುಸ್ತಕಗಳಲ್ಲಿ ಹೆಚ್ಚಿನ ಅಭ್ಯಾಸ ಕಾರ್ಯ ಮತ್ತು ಚಟುವಟಿಕೆಗಳನ್ನು ನೀಡಲಾಗಿದೆ. ಆದರೆ ಗಣಿತ ವಿಷಯದ ಪಠ್ಯಪುಸ್ತಕದಲ್ಲಿ ಪುನುರಾವರ್ತಿತ ಚಟುವಟಿಕೆಗಳನ್ನು ಇದ್ದು, ವಿದ್ಯಾರ್ಥಿಗಳಿಗೆ ಹೊರೆ ಎನಿಸುವಂತೆ ಇವೆ. ಇದರಿಂದ ವಿದ್ಯಾರ್ಥಿಗಳು ಕಂಠ ಪಾಠ ಮತ್ತು ನೆನಪಿನ ಶಕ್ತಿಗೆ ಹೆಚ್ಚು ಒತ್ತು ನೀಡುವಂತಿದ್ದು, ವಿಷಯದ ಪರಿಕಲ್ಪನಾತ್ಮಕ ಜ್ಞಾನದ ಬೆಳವಣಿಗೆಗೆ ಸಹಾಯ ಆಗುವಂತಿಲ್ಲ.

ಗಣಿತ ವಿಷಯದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಷಯಗಳನ್ನು ಅಳವಡಿಸಿಲ್ಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *