ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!

Public TV
1 Min Read

ಲ್ಲು ಅರ್ಜುನ್ (Allu Arjun) ಹಾಗೂ ಅಟ್ಲಿ (Atlee) ಕಾಂಬಿನೇಷನ್‌ನ ಇನ್ನೂ ಹೆಸರಿಡದ ಎಎ26-ಎ6 ಸಿನಿಮಾ ಒಂದಿಲ್ಲೊಂದು ವಿಶೇಷತೆಗಳಿಂದ ಸದ್ದು ಮಾಡುತ್ತಿದೆ. ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಿದಾಗಲೇ ಐಕಾನ್‌ಸ್ಟಾರ್ ಅಭಿಮಾನಿಗಳು ದಿಲ್‌ಖುಷ್ ಆಗಿದ್ದರು. ಈ ಸಿನಿಮಾ ದಿನದಿಂದ ದಿನಕ್ಕೆ ದೊಡ್ಡ ಸ್ಟಾರ್‌ಕ್ಯಾಸ್ಟ್ನಿಂದ ಭಾರೀ ಹವಾ ಕ್ರಿಯೇಟ್ ಮಾಡುತ್ತಿದೆ.

ಬಹುಕೋಟಿ ಬಜೆಟ್‌ನಲ್ಲಿ ತಯಾರಾಗ್ತಿರುವ, ಸೂಪರ್ ಮ್ಯಾನ್ ಕಾನ್ಸೆಪ್ಟ್‌ನ ಇಂಡಿಯನ್ ಸಿನಿಮಾದಲ್ಲಿ ತುಂಬಾ ವಿಶೇಷತೆಗಳಿಂದ ಕೂಡಿದ ಸಿನಿಮಾ ಇದಾಗಿರಲಿದ್ದು, ಈ ಸಿನಿಮಾದಲ್ಲಿ ಒಬ್ಬೊಬ್ಬ ಕಲಾವಿದರು ಸೇರಿಕೊಳ್ತಿದ್ದಾರೆ. ಅದರಲ್ಲೂ ಸ್ಪೆಷಲ್ ಅಂದ್ರೆ ಈ ಸಿನಿಮಾದಲ್ಲಿ ನಟಿ ರಶ್ಮಿಕಾರನ್ನ ಆಯ್ಕೆ ಮಾಡಿಕೊಂಡಿದೆಯಂತೆ ಚಿತ್ರತಂಡ. ಪುಷ್ಪಾ ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಶ್ರೀವಲ್ಲಿಯಾಗಿ ಕಾಣಿಸಿಕೊಂಡ ರಶ್ಮಿಕಾ ಮತ್ತೆ ಅಲ್ಲು ಅರ್ಜುನ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಹೆಣ್ಣು ಯಾವ ಬಟ್ಟೆ ಹಾಕ್ಬೇಕು, ಹೇಗೆ ತಾಯಿ ಆಗ್ಬೇಕು ಅನ್ನೋದು ಅವಳ ಆಯ್ಕೆ – ಭಾವನರನ್ನು ಬೆಂಬಲಿಸಿದ ರಾಗಿಣಿ

ಮತ್ತೊಂದು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್, ಜಾನವಿ ಕಪೂರ್ ಹಾಗೂ ರಶ್ಮಿಕಾ ಇವರೆಲ್ಲರನ್ನ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಸೇರಿಸುವ ಪ್ಲ್ಯಾನ್ ಕೂಡಾ ಮಾಡಿದೆಯಂತೆ ಚಿತ್ರತಂಡ. ಪುಷ್ಪ ಸಿನಿಮಾ ಹಿಟ್ ಪೇರ್ ಮತ್ತೊಮ್ಮೆ ಒಂದಾಗಲಿದ್ದು, ಈ ಸಿನಿಮಾದ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಾಗ್ತಿದೆ. ಅಲ್ಲು ಅರ್ಜುನ್ ಕೂಡಾ ಪುಷ್ಪ ಸಿನಿಮಾದ ಸಕ್ಸಸ್‌ನ ಪೀಕ್‌ನಲ್ಲಿದ್ದಾರೆ.

ಕೊರೊನಾ ಬಳಿಕ ಬಾಲಿವುಡ್‌ನಲ್ಲಿ ಶಾರುಖ್ ಖಾನ್‌ಗೆ ಬಿಗ್ ಬ್ರೇಕ್ ಕೊಟ್ಟ ಜವಾನ್ ಸಿನಿಮಾವನ್ನ ನಿರ್ದೇಶನ ಮಾಡಿದ್ದ ನಿರ್ದೇಶಕ ಅಟ್ಲಿ ಐಕಾನ್ ಸ್ಟಾರ್‌ಗೆ ವಿಭಿನ್ನವಾದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾದ ಬಜೆಟ್ ಹಾಗೂ ಸ್ಟಾರ್‌ಕಾಸ್ಟ್ ಕೂಡಾ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಇನ್ನು ಈ ಚಿತ್ರಕ್ಕೆ ಯಾರೆಲ್ಲ ಬಂದು ಸೇರಿಕೊಳ್ತಾರೋ ಕಾದು ನೋಡಬೇಕಿದೆ. ಇದನ್ನೂ ಓದಿ: ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್‌ ರಾಜ್‌, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್‌

Share This Article