ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ಸುತ್ತಾಡಿದ್ರಾ ರಶ್ಮಿಕಾ ಮಂದಣ್ಣ?

By
2 Min Read

ನ್ನಡತಿ, ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಗ ಟರ್ಕಿಗೆ ಹೋಗಿದ್ದಾಗ ತೆಗೆದ ಫೋಟೋಗಳನ್ನ ಬಹುದಿನಗಳ ನಂತರ ನಟಿ ಶೇರ್ ಮಾಡಿದ್ದಾರೆ. ಹಳೆಯ ಫೋಟೋ ಶೇರ್ ಮಾಡಿ ರಶ್ಮಿಕಾ ಮತ್ತೆ ಸಿಕ್ಕಿಬಿದ್ದಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಜೊತೆ ನಟಿ ಸುತ್ತಾಡಿದ್ದಾರೆ ಎಂದು ಮತ್ತೆ ಟೀಕೆಗೆ ಒಳಗಾಗಿದ್ದಾರೆ.

ಆದರೆ, ಈಗ ಮತ್ತೆ ನಟಿ ರಶ್ಮಿಕಾ ಮಂದಣ್ಣ ಫೋಟೋ ಮತ್ತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಳೆಯದು ಎಂದು ಅಭಿಮಾನಿಗಳು ಸಾಕ್ಷಿ ಸಮೇತ ಗುರುತಿಸಿದ್ದಾರೆ. ಜೊತೆಗೆ ನೀವು ವಿಜಯ್ ದೇವರಕೊಂಡ ಅವರ ಜೊತೆಗೆ ಟರ್ಕಿ ಪ್ರವಾಸಕ್ಕೆ ತೆರಳಿದ್ದಾಗ ತೆಗೆದುಕೊಂಡಿರುವ ಚಿತ್ರ ಇದು ಎಂದು ನೆಟ್ಟಿಗರು ರಶ್ಮಿಕಾ ಕಾಲೆಳೆದಿದ್ದಾರೆ. ಮೊದಲೇ ಇಬ್ಬರ ಡೇಟಿಂಗ್‌ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದು, ಈ  ಪೋಸ್ಟ್‌ನಿಂದ ಮತ್ತಷ್ಟು ಸಂಶಯ ಜಾಸ್ತಿಯಾಗಿದೆ. ಇದನ್ನೂ ಓದಿ:Bigg Boss: ಒಬ್ಬ ರಾವಣ, 10 ತಲೆ, ಒಂದೇ ಮನೆ 10 ಸೀಸನ್‌- ಸುದೀಪ್‌ ಖಡಕ್‌ ಡೈಲಾಗ್

ಈ ಹಿಂದೆ ಒಂದೇ ಬ್ಯಾಕ್ ಗ್ರೌಂಡ್ ಇದ್ದ ಚಿತ್ರಗಳನ್ನು ಹಂಚಿಕೊಂಡಿದ್ದ ವೇಳೆ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದರು. ಈಗ ಮತ್ತೆ ಒಂದೇ ರೀತಿಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇತ್ತೀಚಿಗೆ ನಟಿ ಕೆಲ ಹಿಂದೆ ಟರ್ಕಿಯಲ್ಲಿ ತಾನು ಕಳೆದ ರಜಾ ದಿನಗಳ ನೆನಪಿನಲ್ಲಿ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿರೋದು ಅನೇಕರ ಚರ್ಚೆಗೆ ಗ್ರಾಸವಾಗಿದೆ.

‘ಖುಷಿ’ (Kushi) ಸಿನಿಮಾದ ಶೂಟಿಂಗ್ ಟರ್ಕಿಯಲ್ಲಿ ನಡೆದಿತ್ತು. ಅಲ್ಲಿನ ಫೋಟೋಗಳನ್ನ ವಿಜಯ್ ಹಂಚಿಕೊಂಡಿದ್ದರು. ಈಗ ರಶ್ಮಿಕಾ ಹಂಚಿಕೊಂಡಿರೋದನ್ನ ನೋಡಿ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಲೇಟ್ ಆಗಿ ಶೇರ್ ಮಾಡಿದ್ರು ನಟಿ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಇದು ನಿಜನಾ? ಈ ಬಗ್ಗೆ ನಟಿಯೇ ಸ್ಪಷ್ಟನೆ ಕೊಡಬೇಕಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್