ಬಾಲಿವುಡ್ ಸಿನಿಮಾ ಅವಕಾಶಕ್ಕಾಗಿ ಎಡವಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ

Public TV
1 Min Read

ಶ್ಮಿಕಾಗೆ (Rashmika Mandanna) ಮರ್ಮಾಘಾತ. ನೋಡನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಸಿಕ್ಕ ಅವಕಾಶ ನೀರು ಪಾಲಾಗಿದೆ. ಟಾಲಿವುಡ್ ನಟನಿಗೆ ಕೈ ಕೊಟ್ಟು ಬಾಲಿವುಡ್ ನಟನ ಜೊತೆ ಕುಣಿತಕ್ಕೆ ಇಳಿಯಲು ಸಜ್ಜಾಗಿದ್ದ ಸಾನ್ವಿ ಆಕಾಶ ನೋಡುವಂತಾಗಿದೆ. ಏನಾಯಿತು ಶ್ರೀವಲ್ಲಿಗೆ? ಕೈ ಕೊಟ್ಟಿದ್ಯಾರು? ಯಾಕೆ? ಇಲ್ಲಿದೆ ಮಾಹಿತಿ.

ರಶ್ಮಿಕಾ ಮುಖ ಮುಚ್ಚಿಕೊಂಡಿದ್ದಾರೆ. ಇನ್ನೊಂದು ಕಡೆ ಟಾಲಿವುಡ್ ಸ್ಟಾರ್ ನಿತಿನ್ (Nithin) ಗಹಗಹಿಸಿದ್ದಾರೆ. ಸೇಮ್ ಟೈಮ್ ಶ್ರೀಲೀಲಾ ಕೇಕೆ ಹಾಕಿದ್ದಾರೆ. ವಾಟ್ ಈಸ್ ದಿಸ್? ಇದೆಲ್ಲ ಯಾಕಾಯಿತು? ರಶ್ಮಿಕಾ ಮಾಡಿದ ತಪ್ಪೇನು? ಉತ್ತರ ಇಲ್ಲಿದೆ. ತೆಲುಗು ನಟ ನಿತಿನ್ ಜೊತೆ ರಶ್ಮಿಕಾ ಅಭಿನಯಿಸಬೇಕಿತ್ತು. ಕಾಲ್‌ಶೀಟ್ ಕೂಡ ಕೊಟ್ಟಿದ್ದರು. ಆದರೆ ಅದೇ ಹೊತ್ತಿಗೆ ಬಾಲಿವುಡ್ ಶಾಹೀದ್ ಕಪೂರ್(Shahid Kapoor) ಸಿನಿಮಾಕ್ಕೆ ಡೇಟ್ ಕೇಳಿತು. ಎರಡೂ ಕಾಲಿನಿಂದ ಕುಣಿಕುಣಿದು ಎಸ್ ಎಂದರು. ನಿತಿನ್ ಕೈಗೆ ಖಾಲಿ ಗ್ಲಾಸ್ ಇಟ್ಟರು. ಇದನ್ನೂ ಓದಿ:ಬಿಕಿನಿ ಫೋಟೋಶೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಸೋನು ಗೌಡ

ಈ ಸುದ್ದಿ ಹೊರಬಿದ್ದಾಗ ನಿತಿನ್ ಕೆಂಡಕೆಂಡ. ಭೀಷ್ಮ (Bheeshma) ಸಿನಿಮಾದಲ್ಲಿ ಜಂಟಿಯಾಗಿತ್ತು ಈ ಜೋಡಿ. ಆಗ ಅವಕಾಶ ಕಮ್ಮಿ ಇದ್ದವು. ರಶ್ಮಿಕಾ ಕೆಮ್ಮದೆ ಒಪ್ಪಿದ್ದರು. ಈಗ ಬೆರಳಿಗೊಂದು ಚಾನ್ಸ್. ಹೀಗಾಗಿ ಮುಖ ತಿರುವಿದರು. ಸಮಯ ತಿಪ್ಪರಲಾಗ ಹಾಕಿಸದೆ ಬಿಡುತ್ತಾ ? ಶಾಹೀದ್ ಚಿತ್ರ ಬಜೆಟ್ ಸಮಸ್ಯೆಯಿಂದ ಈ ಪ್ರಾಜೆಕ್ಟ್‌ನ ಕೈಚೆಲ್ಲಿದೆ ಚಿತ್ರತಂಡ. ರಶ್ಮಿಕಾ ಚೌಕಾಬಾರ ಆಡುವಂತಾಗಿದೆ. ನಿತಿನ್ ಪಕ್ಕ ಶ್ರೀಲೀಲಾ (Sreeleela) ಮೆರವಣಿಗೆ ಹೊರಟಿದ್ದಾರೆ. ಹತ್ತಿದ ಏಣಿ ಒದ್ದವರಿಗೆ ದೇವರು ನೀರಿಲ್ಲದ ಬಾವಿ ತೋರಿಸದಿರುತ್ತಾನಾ? ಶಾಹಿದ್‌ ಜೊತೆ ಡ್ಯುಯೇಟ್‌ ಹಾಡುವ ಕನಸು ಹೊತ್ತಿದ್ದ ರಶ್ಮಿಕಾಗೆ ಶಾಕ್‌ ಆಗಿದೆ.

ಬಾಲಿವುಡ್ (Bollywood) ಸಿನಿಮಾಗಾಗಿ ಕೈಯಲ್ಲಿದ್ದ ತೆಲುಗು ಸಿನಿಮಾ ಕೈ ಬಿಟ್ಟು ಎಡವಟ್ಟು ಮಾಡಿಕೊಂಡರು ರಶ್ಮಿಕಾ. ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್