ದೇವರಕೊಂಡಗೆ ಗುಡ್‌ ಬೈ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಡೇಟಿಂಗ್‌

Public TV
1 Min Read

`ಪುಷ್ಪ’ (Pushpa) ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಸುದ್ದಿಯಲ್ಲಿರುವ ನಟಿ, ಈಗ ಮತ್ತೊಮ್ಮೆ ತಮ್ಮ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ವಿಜಯ್ ದೇವರಕೊಂಡಗೆ (Vijay Devarakonda) ಗುಡ್ ಬೈ ಹೇಳಿ, ತೆಲುಗು ನಟ ಸಾಯಿ ಶ್ರೀನಿವಾಸ್ ಜೊತೆ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡ್ತಿದ್ದಾರೆ. ಈ ಸುದ್ದಿ ಇದೀಗ ಟಾಲಿವುಡ್- ಬಾಲಿವುಡ್ ಅಂಗಳದಲ್ಲಿ ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ.

`ಕಿರಿಕ್ ಪಾರ್ಟಿ’ ನಟಿ ರಶ್ಮಿಕಾ, ಸೌತ್- ಬಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸ್ಟಾರ್‌ ನಟರಿಗೆ ನಾಯಕಿಯಾಗಿ ಬಂಪರ್‌ ಆಫರ್ಸ್‌ ಬಾಚಿಕೊಳ್ತಿರುವ ರಶ್ಮಿಕಾ ಮತ್ತೆ ಡೇಟಿಂಗ್‌ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ – ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ (Bellamkonda Sai Sreenivas) ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮತ್ತು ಶ್ರೀನಿವಾಸ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಒಂದು ವರ್ಗದ ಫ್ಯಾನ್ಸ್‌ಗೆ ಶಾಕ್ ಆಗಿದೆ. ಈ ಸುದ್ದಿ ನಿಜವಾಗದಿರಲಿ ಎಂದು ಕೋರಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ – ನಟ ಸಾಯಿ ಶ್ರೀನಿವಾಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರೂ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ಈ  ಫೋಟೋ ವೈರಲ್‌ ಆಗ್ತಿದ್ದಂತೆ ತೆಲುಗು ನಟನ ಜೊತೆಗಿನ ಡೇಟಿಂಗ್‌ ವಿಷ್ಯವಾಗಿ ರಶ್ಮಿಕಾ ಸುದ್ದಿಯಲ್ಲಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಪ್ರೀತಿ ಇಲ್ಲ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ರಶ್ಮಿಕಾ ಮಂದಣ್ಣ ಅನೇಕ ಬಾರಿ ಹೇಳಿದ್ದಾರೆ. ಅವರು ಹೇಳಿದ್ದರಲ್ಲಿ ನಿಜ ಇರಬಹುದೇ? ಅಥವಾ ವಿಜಯ್ ಜೊತೆ ಬ್ರೇಕಪ್ ಮಾಡಿಕೊಂಡು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ನಟಿಯೇ ಉತ್ತರಿಸಬೇಕಿದೆ.

Share This Article