ಬಾಲಿವುಡ್‌ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್

Public TV
1 Min Read

ಪುಷ್ಪ, ಆಮೇಶಂ ಸಿನಿಮಾಗಳ ಮೂಲಕ ಸಕ್ಸಸ್ ಕಂಡಿರುವ ಫಹಾದ್ ಫಾಸಿಲ್ (Fahadh Faasil) ಇದೀಗ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ‘ಜಬ್ ವಿ ಮೆಟ್’ ಡೈರೆಕ್ಟರ್ ಇಮ್ತಿಯಾಜ್ ಅಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಫಹಾದ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ಮಾಲಿವುಡ್ ನಟ ಫಹಾದ್‌ಗೆ ಸದ್ಯ ಬಾಲಿವುಡ್‌ನಿಂದ ಬುಲಾವ್ ಬಂದಿದೆ. ರಾಕ್‌ಸ್ಟಾರ್, ಜಬ್ ವಿ ಮೆಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಇಮ್ತಿಯಾಜ್ (Imtiaz Ali) ಈಗ ಫಹಾದ್‌ಗೆ ನಿರ್ದೇಶನ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್

ಇಮ್ತಿಯಾಜ್ ಅವರು ಚೆಂದದ ಲವ್ ಸ್ಟೋರಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದಕ್ಕೆ ಫಹಾದ್ ಸೂಕ್ತ ನಾಯಕ ಎಂದೆನಿಸಿ ನಟನನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. ನಿರ್ದೇಶಕನ ಕಥೆಗೆ ಫಹಾದ್ ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

ಇನ್ನೂ ಇದುವರೆಗೂ ಫಹಾದ್ ಬಾಲಿವುಡ್‌ನಲ್ಲಿ ನಟಿಸಿಲ್ಲ. ಆದರೆ ಅವರು ನಟಿಸಿರುವ ಸಿನಿಮಾಗಳು ಹಿಂದಿಯಲ್ಲಿ ಡಬ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಹಿಂದಿಯಲ್ಲೂ ಅಪಾರ ಅಭಿಮಾನಿಗಳನ್ನು ನಟ ಸಂಪಾದಿಸಿದ್ದಾರೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ನಟ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯಾವುದಕ್ಕೂ ನಟನ ಕಡೆಯಿಂದ ಗುಡ್ ನ್ಯೂಸ್ ಸಿಗವವರೆಗೂ ಕಾಯಬೇಕಿದೆ.

Share This Article