ಶ್ರೀವಲ್ಲಿ ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಪುಷ್ಪ 2’ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

Public TV
1 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಶ್ರೀವಲ್ಲಿಗಾಗಿ ಎದುರು ನೋಡ್ತಿದ್ದ ಫ್ಯಾನ್ಸ್‌ಗೆ ನಟಿ ಸಿಹಿಸುದ್ದಿ ನೀಡಿದ್ದಾರೆ.‌ ಇದನ್ನೂ ಓದಿ:‘ಭಾವ ತೀರ ಯಾನ’ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟ ‘ಲಕ್ಷ್ಮಿ ನಿವಾಸ’ ನಟಿ

ಸುಕುಮಾರ್ ನಿರ್ದೇಶನದ ‘ಪುಷ್ಪ’ 1 ಸಿನಿಮಾ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು. ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಿನಿಮಾ ಗೆಲುವಿಗೆ ಕಾರಣವಾಗಿತ್ತು. ಈಗ ‘ಪುಷ್ಪ 2’ ಚಿತ್ರತಂಡ ಮತ್ತೆ ಮನರಂಜನೆ ಕೊಡಲು ರೆಡಿಯಾಗಿದೆ.

ಇದೀಗ ಪುಷ್ಪ 2 ಸಿನಿಮಾ 2ನೇ ಸಾಂಗ್ ಬಿಡುಗಡೆ ಮಾಡುವ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಈ ಹಾಡು ಶೂಟ್ ಮಾಡಲು ಚೆನ್ನಾಗಿತ್ತು. ನಿಮ್ಮೆಲ್ಲರಿಗೂ ಈ ಹಾಡು ಇಷ್ಟವಾಗುತ್ತೆ ಎಂದು ಖಾತ್ರಿಯಿದೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಚಿತ್ರದ 2ನೇ ಹಾಡು ಮೇ 23ರಂದು 11:07ಕ್ಕೆ ರಿಲೀಸ್ ಮಾಡೋದಾಗಿ ತಿಳಿಸಿದ್ದಾರೆ.

ಸದ್ಯ ‘ಪುಷ್ಪ 2’ ಸಿನಿಮಾದ ಜೊತೆ ಅನಿಮಲ್ ಪಾರ್ಕ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಚಾವಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ.

Share This Article