ಜಪಾನ್‌ನಲ್ಲೂ ಪುಷ್ಪಾ ಹವಾ – ಪ್ರೀಮಿಯರ್‌ಗೆ ಭರ್ಜರಿ ರೆಸ್ಪಾನ್ಸ್..!

1 Min Read

ಲ್ಲು ಅರ್ಜುನ್ (AlluArjun) ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ನ ಪುಷ್ಪಾ-2 (Pushpa2) ಸಿನಿಮಾ 2024ರ ಡಿಸೆಂಬರ್ 5ರಂದು ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸಿನಿಮಾ 1700 ಕೋಟಿಗೂ ಅಧಿಕ ಹಣವನ್ನ ತನ್ನ ಕಬಂದ ಬಾಹುವಿನಿಂದ ಬಾಚಿಕೊಂಡಿತ್ತು. ಪುಷ್ಪಾ-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ವಿವಿಧ ದಾಖಲೆಗಳನ್ನ ಸೃಷ್ಟಿತ್ತು.

 

View this post on Instagram

 

A post shared by Pushpa (@pushpamovie)

ಭಾರತೀಯ ಚಿತ್ರರಂಗದಲ್ಲೇ ಹಳೆ ದಾಖಲೆಗಳನ್ನೆಲ್ಲ ಪುಡಿಗಟ್ಟಿ, ಹೊಸ ಹೊಸ ದಾಖಲೆಗಳನ್ನ ಮಾಡಿದ್ದ ಪುಷ್ಪ-2 ಸಿನಿಮಾ ಇದೀಗ ಜಪಾನ್‌ನಲ್ಲೂ  (Japan) ತೆರೆಕಾಣ್ತಿದೆ. ಇದೇ ಜನವರಿ 16ರಿಂದ ಜಪಾನ್‌ನಲ್ಲಿ ಸಿನಿಮಾ ತೆರೆಗೆ ಬರಲಿದ್ದು, ಆ ಸಿನಿಮಾದ ಪ್ರೀಮಿಯರ್ ಈಗಾಗ್ಲೇ ಜಪಾನ್‌ನಲ್ಲಿ ನಡೆದಿದೆ. ಪ್ರೀಮಿಯರ್‌ಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.

ಸದ್ಯ ಅಲ್ಲು ಅರ್ಜುನ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಹೊಸ ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ. ಲೋಕೇಶ್ ಕನಗರಾಜ್ ಜೊತೆಗೆ ಎಎ23 ಸಿನಿಮಾ ಮಾಡೋಕೆ ಒಪ್ಪಿಕೊಂಡಿದ್ದಾರೆ. ನಿರ್ದೇಶಕ ಅಟ್ಲಿ ಜೊತೆಗೆ ಎಎ22 ಸಿನಿಮಾ ಮಾಡ್ತಿದ್ದಾರೆ. ಇದಾದ ಬಳಿಕ ಲೋಕೇಶ್ ಕನಗರಾಜ್ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡಲಿದ್ದಾರೆ. ಜಪಾನ್‌ನಲ್ಲಿ ಪುಷ್ಪಾ ಹವಾ ಜೋರಾಗಿದೆ.

Share This Article