ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಡ್ಯಾನ್ಸ್- ‘ಪುಷ್ಪ 2’ ಪ್ರೋಮೋ ಔಟ್

Public TV
1 Min Read

ನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅಲ್ಲು ಅರ್ಜುನ್ (Allu Arjun) ನಟಿಸಿರುವ ‘ಪುಷ್ಪ 2’ (Pushpa 2) ಸಿನಿಮಾ ಡಿ.5ರಂದು ಬಹುಭಾಷೆಯಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ಇದೀಗ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಹೆಜ್ಜೆ ಹಾಕಿರುವ ರೊಮ್ಯಾಂಟಿಕ್ ಹಾಡಿನ ಪ್ರೋಮೋ ರಿಲೀಸ್ ಆಗಿದೆ.

‘ಪುಷ್ಪ 2’ನಲ್ಲಿ ಪುಷ್ಪರಾಜ್ ಮತ್ತು ಶ್ರೀವಲ್ಲಿ ಕಲರ್‌ಫುಲ್ ಲೋಕೇಷನ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಸದ್ಯ ಹಾಡಿನ ಪ್ರೋಮೋವನ್ನು ಚಿತ್ರತಂಡ ರಿವೀಲ್ ಮಾಡಿದೆ. ಡಿ.1ರಂದು ಚಿತ್ರದ ಫುಲ್ ಸಾಂಗ್ ರಿಲೀಸ್ ಮಾಡೋದಾಗಿ ತಿಳಿಸಿದೆ. ಸದ್ಯ ಚಿತ್ರದ ಹಾಡಿನ ಪ್ರೋಮೋ ನೋಡಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ತಿಮ್ಮಪ್ಪನ ದೇವಸ್ಥಾನದಲ್ಲಿ ಮದುವೆ ಸುದ್ದಿ ಖಚಿತಪಡಿಸಿದ ಕೀರ್ತಿ ಸುರೇಶ್

 

View this post on Instagram

 

A post shared by Mythri Movie Makers (@mythriofficial)

ಅಂದಹಾಗೆ, ಡಿ.5ರಂದು ರಿಲೀಸ್ ಆಗಲಿರುವ ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ, ಶ್ರೀಲೀಲಾ, ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.

Share This Article