ಮುತ್ತಿನ ಉಡುಗೆಯಲ್ಲಿ ಕಂಗೊಳಿಸಿದ ರಶ್ಮಿಕಾ ಮಂದಣ್ಣ ಲುಕ್‌ಗೆ ಫ್ಯಾನ್ಸ್ ಫಿದಾ

Public TV
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಈಗ ಕ್ಯಾಮೆರಾ ಮುಂದೆ ಮುತ್ತಿನ ಉಡುಗೆ ಧರಿಸಿ ಗೊಂಬೆಯಂತೆ ಕಂಗೊಳಿಸಿದ್ದಾರೆ.

ಮುತ್ತಿನ ಡಿಸೈನ್ ಮಾಡಿರುವ ಲೆಹೆಂಗಾ ಡ್ರೆಸ್ ಧರಿಸಿ ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ಮುತ್ತಿನ ಉಡುಗೆಯಲ್ಲಿ ಮಿಂಚುತ್ತಿರುವ ಶ್ರೀವಲ್ಲಿ ಕಂಡು ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಸೆಕ್ಸಿ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್‌ಗಳಿಂದ ಫ್ಯಾನ್ಸ್‌ ಬಣ್ಣಿಸಿದ್ದಾರೆ.

ಇತ್ತೀಚೆಗೆ ಮುತ್ತಿನ ಉಡುಗೆ ಧರಿಸಿ ರ‍್ಯಾಪ್ ವಾಕ್ ಮಾಡಿ ಗಮನ ಸೆಳೆದಿದ್ದರು. ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಿಂಚಿದ್ದರು. ಅದರ ಸುಂದರ ಫೋಟೋಶೂಟ್‌ಗಳನ್ನು ನಟಿ ಈಗ ಹಂಚಿಕೊಂಡಿದ್ದಾರೆ.

ಅಂದಹಾಗೆ, ವಿಕ್ಕಿ ಕೌಶಲ್ (Vicky Kaushal) ಜೊತೆಗಿನ ‘ಚಾವಾ’ (Chhava) ಸಿನಿಮಾಗಾಗಿ ರಶ್ಮಿಕಾ ಮರಾಠಿ ಭಾಷೆಯನ್ನು 4 ವಾರಗಳಲ್ಲಿ ಕಲಿತಿದ್ದಾರೆ. ಈ ಕುರಿತು ಇತ್ತೀಚೆಗೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಕನ್ನಡತಿಯಾಗಿ ಕನ್ನಡ ಮಾತನಾಡಲ್ಲ ಎಂದು ನಟಿಯನ್ನು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.

ಇನ್ನೂ ‘ಪುಷ್ಪ 2’ (Pushpa 2) ಸಿನಿಮಾ ಮುಂದೆಯೇ ಡಿ.6ರಂದು ‘ಚಾವಾ’ ಸಿನಿಮಾ ರಿಲೀಸ್ ಆಗ್ತಿದೆ. ಒಂದೇ ದಿನ ರಶ್ಮಿಕಾ ನಟನೆಯ ಎರಡು ಚಿತ್ರಗಳು ಬಿಡುಗಡೆಯಾಗ್ತಿದೆ. ಇದನ್ನೂ ಓದಿ:ಲುಂಗಿಯುಟ್ಟು ಗನ್ ಹಿಡಿದು ಬಂದ ಫಹಾದ್ ಫಾಸಿಲ್- ‘ಪುಷ್ಪ 2’ ಪೋಸ್ಟರ್ ಔಟ್

ಅನಿಮಲ್ 2 (Animal 2), ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಕುಬೇರ (Kubera) ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.

Share This Article