ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡ ʻಪುಷ್ಪʼ ಹೀರೋ

Public TV
1 Min Read

ಟಾಲಿವುಡ್ (Tollywood) ಸ್ಟಾರ್ ಅಲ್ಲು ಅರ್ಜುನ್ `ಪುಷ್ಪ’ (Pushpa) ಚಿತ್ರದ ಸೂಪರ್ ಸಕ್ಸಸ್ ನಂತರ ಸಿನಿಮಾ ಆಯ್ಕೆಯಲ್ಲಿ ಮತ್ತಷ್ಟು ಸೆಲೆಕ್ಟಿವ್ ಆಗಿದ್ದಾರೆ. `ಪುಷ್ಪ 2′ (Pushpa 2) ಶೂಟಿಂಗ್ ಬ್ರೇಕ್ ಹಾಕಿ ನೀಡಿ, ಪತ್ನಿ ಸ್ನೇಹಾ ರೆಡ್ಡಿ (Upasana) ಜೊತೆ ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಕುರಿತ ಫೋಟೋವನ್ನ ಪುಷ್ಪ ಹೀರೋ ಇದೀಗ ಶೇರ್‌ ಮಾಡಿದ್ದಾರೆ. ಇದನ್ನೂ ಓದಿ: ಆಸ್ಕರ್ ಪಾರ್ಟಿಯಲ್ಲಿ ಕಂಗೊಳಿಸಿದ ರಾ ರಾ ರಕ್ಕಮ್ಮ

ಅಲ್ಲು ಅರ್ಜುನ್ (Allu arjun) ಅವರು ಪಕ್ಕಾ ಫ್ಯಾಮಿಲಿ ಮೆನ್ ಸಿನಿಮಾ ಶೂಟಿಂಗ್ ಇಲ್ಲದೇ ಇದ್ದಾಗ ತಮ್ಮ ಸಮಯವನ್ನ ಕುಟುಂಬಕ್ಕೆ ಮೀಸಲಿಡುತ್ತಾರೆ. ವೆಕೇಷನ್ ಅಂತಾ ದೂರದ ದೇಶಕ್ಕೆ ತೆರಳುತ್ತಾರೆ. `ಪುಷ್ಪ 2′ ಶೂಟಿಂಗ್‌ನಿಂದ ಕೊಂಚ ಬ್ರೇಕ್ ಇದ್ದ ಕಾರಣ ಇತ್ತೀಚಿಗೆ ಅಲ್ಲು ಅರ್ಜುನ್ ದಂಪತಿ ರಾಜಸ್ಥಾನಕ್ಕೆ ತೆರಳಿದ್ದರು.

 

View this post on Instagram

 

A post shared by Allu Arjun (@alluarjunonline)

ಕೆಲ ದಿನಗಳ ಹಿಂದೆ ಅಲ್ಲು ಅರ್ಜುನ್ ದಂಪತಿ ಮತ್ತು ಇಬ್ಬರು ಮಕ್ಕಳು ರಾಜಸ್ಥಾನಕ್ಕೆ ಹೋಗಿದ್ದರು. ಈಗ ಸುಂದರ ತಾಣಗಳಿಗೆ ಭೇಟಿ ನೀಡಿದ್ದರು. ಇದೀಗ ರಾಜಸ್ಥಾನದಲ್ಲಿ ಕ್ಲಿಕ್ಕಿಸಿದ್ದ ಅಲ್ಲು ಅರ್ಜುನ್ ಕುಟುಂಬದ ಫೋಟೋವನ್ನ ನಟ ಹಂಚಿಕೊಂಡಿದ್ದಾರೆ.

`ಪುಷ್ಪ 2′ ನಂತರ ಅನಿಮಲ್ ಚಿತ್ರ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ಮಾಡಲು ಅಲ್ಲು ಅರ್ಜುನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *