ಬೆಂಗಳೂರು: ಪಂಜಾಬಿಗರ ಚಳಿಗಾಲದ ಸುಗ್ಗಿ ಹಬ್ಬವೆಂದರೆ ಅದು ಲೋಹ್ರಿ ಹಬ್ಬ. ಈ ಹಬ್ಬ ಸಂಕ್ರಾಂತಿ ಹಬ್ಬದಷ್ಟೇ ಪ್ರಖ್ಯಾತಿ ಪಡೆದಿದ್ದು, ಬೆಂಗಳೂರಿನಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಒಂದರ್ಥದಲ್ಲಿ ಇದು ಪಂಜಾಬಿಗರ ಸಂಕ್ರಾಂತಿ.
ಪಂಜಾಬಿ ಸಭಾದಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಈ ಸಂಭ್ರಮವನ್ನು ಏರ್ಪಡಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿದ ಪಂಜಾಬಿಗರು ರಾತ್ರಿ ಚುಮು ಚುಮು ಚಳಿಯಲ್ಲಿ ಬೆಂಕಿ ಉರಿಯನ್ನು ಹಾಕಿಕೊಂಡು ಅದರ ಸುತ್ತ ಹಾಡುಗಳನ್ನು ಹಾಡುತ್ತಾ ಕುಣಿದು ಕುಪ್ಪಳಿಸಿದ್ರು.
ಗಾಢ ಬಣ್ಣದ ಧೋತಿ, ಸಲ್ವಾರ್, ತಲೆಗೆ ಬಣ್ಣ ಬಣ್ಣದ ಪೇಟಾ ಸುತ್ತಿಕೊಂಡು ಭಲ್ಲೇ ಭಲ್ಲೇ ನೃತ್ಯ ಮಾಡಿದ್ರು. ಜೊತೆಗೆ ಪಂಜಾಬ್ ನ ಸಾಂಪ್ರದಾಯಿಕ ಆಹಾರ ಖಾದ್ಯಗಳಾದ ಆಲೂ ಭರ್ವಾ ಚನಾ ಟಿಕ್ಕಿ, ಖಸ್ತಾ ಪನ್ನೀರ್ ಟಿಕಾ ಸೇರಿದಂತೆ ಬಗೆ ಬಗೆಯ ಚಾಟ್ಸ್ ಹಾಗೂ ತಿಂಡಿಗಳನ್ನು ತಯಾರಿಸಲಾಗಿತ್ತು.
ಹಳ್ಳಿಯ ಗುಡಿಸಲುಗಳು, ಗಾಳಿಪಟಗಳು ಹಾಗೂ ಅಲಂಕಾರಿಕ ಗಡಿಗೆಗಳು ಎಲ್ಲರ ಮನಸೂರೆಗೊಳಿಸಿದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv