ಪಂಜಾಬ್‌ | ಪಾಕ್‌ ಪೋಷಿತ ಉಗ್ರರ ಘಟಕದ ಮೇಲೆ ಪೊಲೀಸರ ದಾಳಿ – ಇಬ್ಬರು ಶಂಕಿತರು ಅರೆಸ್ಟ್‌

1 Min Read

– ಒಂದು ಎಕೆ-47, 3 ರಿವಾಲ್ವರ್‌ ಜಪ್ತಿ

ಚಂಡೀಗಢ: ಪಂಜಾಬ್‌ನ (Punjab) ಅಮೃತಸರದಲ್ಲಿ (Amritsar) ಪಾಕಿಸ್ತಾನದ (Pakistan) ಗುಪ್ತಚರ ದಳ ಐಎಸ್ಐ (ISI) ಪೋಷಿತ ಉಗ್ರರ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿ, ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಈ ಉಗ್ರರ ಘಟಕಕ್ಕೆ ಐಎಸ್‌ಐನಿಂದ ಹಣ ಹರಿದು ಬರುತ್ತಿತ್ತು. ಈ ದಾಳಿಯಿಂದ ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಹಾಗೂ ವಿದ್ವಂಸಕ ಕೃತ್ಯ ತಡೆದಂತಾಗಿದೆ. ಇಬ್ಬರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಪೊಲೀಸರು ಒಂದು ಎಕೆ-47, 3 ಗ್ಲಾಕ್ ರಿವಾಲ್ವಾರ್, 2 ಮ್ಯಾಗಜೀನ್‌ಗಳು ಮತ್ತು 36 ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಹಣಕಾಸು ನೆರವು ಕೇಸ್ – ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾಗೆ ಜಾಮೀನು

ಈ ದಾಳಿಗೂ ಮುನ್ನ, ಜ.1 ರಂದು ನಲಗಢ ಪೊಲೀಸ್ ಠಾಣೆಯಲ್ಲಿ (ಹಿಮಾಚಲ ಪ್ರದೇಶ) ನಡೆದ IED (RDX) ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದರು. ಆರಂಭಿಕ ವಿಚಾರಣೆಯಲ್ಲಿ ಶಂಕಿತರು ವಿದೇಶಿ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಭಾರತದಲ್ಲಿ ದಾಳಿಗೆ ಸಂಚು ಪ್ರಕರಣ – ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಸಂಪರ್ಕದಲ್ಲಿದ್ದ ಕಾಶ್ಮೀರಿ ಉಗ್ರ

Share This Article