ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ

Public TV
1 Min Read

ಚಂಡೀಗಢ: ಸಿಖ್‌ (Sikh) ಧರ್ಮದ ಪವಿತ್ರ ಪುಸ್ತಕ ಗುರು ಗ್ರಂಥ ಸಾಹಿಬ್‌ (Guru Granth Sahib) ಕೆಲ ಪುಟಗಳನ್ನು ಹರಿದು ಹಾಕಿದ್ದಕ್ಕೆ 19 ವರ್ಷದ ಯುವಕನನ್ನು ಹೊಡೆದು ಕೊಂದು ಹಾಕಿದ ಘಟನೆ ಪಂಜಾಬ್‌ (Punjab) ಫಿರೋಜ್‌ಪುರದ ಗುರುದ್ವಾರದಲ್ಲಿ (Gurudwara) ಶನಿವಾರ ನಡೆದಿದೆ.

ಬಂಡಾಲ ಗ್ರಾಮದ ಗುರುದ್ವಾರ ಬಾಬಾ ಬೀರ್‌ನಲ್ಲಿ ಬಕ್ಷೀಶ್ ಸಿಂಗ್ ಈ ಕೃತ್ಯ ಎಸಗಿದ್ದು, ನಂತರ ಕೋಪಗೊಂಡ ಆತನನ್ನು ಅಲ್ಲಿದ್ದ ಜನರು ಹಿಡಿದು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠ ಸಿಂಗ್ ಸುಖವಿಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಗಂಡನೊಂದಿಗೆ ಗಲಾಟೆ – ಕೋಪದಲ್ಲಿ ಮಗನನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ

 

ಮೃತಪಟ್ಟ ಯುವಕ ಮಾನಸಿಕ ಅಸ್ವಸ್ಥನಾಗಿದ್ದು ಎರಡು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದ ಎಂದು ಆತನ ತಂದೆ ಲಖ್ವಿಂದರ್ ಸಿಂಗ್ ಹೇಳಿದ್ದಾರೆ. ಈಗ ಮಗನನ್ನು ಹತ್ಯೆಗೈದವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಂದೆ ದೂರು ನೀಡಿದ್ದಾರೆ. ಇದನ್ನೂ ಓದಿ: ರೇವಣ್ಣ ಅರೆಸ್ಟ್‌ ಬೆನ್ನಲ್ಲೇ ಭವಾನಿಗೂ ಸಂಕಷ್ಟ?

ಜನರು ಥಳಿಸಲು ಆರಂಭಿಸಿದಾಗ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಹರಿದು ಹಾಕಿದ ವಿಚಾರ ತಿಳಿದು ಗ್ರಾಮಸ್ಥರು ಗುರುದ್ವಾರದಲ್ಲಿ ಜಮಾಯಿಸಿ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವಕನನ್ನು ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

Share This Article