ಚಂಡೀಗಢ: ನ್ಯೂ ಚಂಡೀಗಢದ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಪ್ರಿಲ್ 11 ರಂದು ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿತು. 220 ರನ್‌ಗಳ ಬೃಹತ್ ಗುರಿಯನ್ನು 18.5 ಓವರ್‌ಗಳಲ್ಲೇ ಪೂರೈಸಿತು. ಈ ಮೂಲಕ ಐಪಿಎಲ್‌ನಲ್ಲಿ ವಿಶೇಷ ದಾಖಲೆಯೊಂದನ್ನು ಪಂಜಾಬ್ ಕಿಂಗ್ಸ್ (Punjab Kings) ತಂಡ ಮಾಡಿತು.
200+ ರನ್‌ಗಳ ಬೃಹತ್ ಮೊತ್ತವನ್ನ ಸುಲಭವಾಗಿ ಚೇಸ್ ಮಾಡಿದ ಶ್ರೇಯಸ್ (Shreyas Iyer) ಬಳಗ ಐಪಿಎಲ್‌ನಲ್ಲಿ 10ನೇ ಬಾರಿ 200+ ರನ್ ಗುರಿಯನ್ನ ಯಶಸ್ವಿಯಾಗಿ ಚೇಸ್ ಮಾಡಿದ ಮೊದಲ ತಂಡ ಎಂಬ ದಾಖಲೆಯನ್ನು ಹೆಗಲಿಗೇರಿಸಿಕೊಂಡಿತು.
ಪಂಜಾಬ್ ತಂಡ ಆಡಿರುವ 4 ಪಂದ್ಯಗಳಲ್ಲಿ 3 ಜಯ ಮತ್ತು ಒಂದು ರದ್ದಿನೊಂದಿಗೆ 7 ಅಂಕಗಳನ್ನು ಗಳಿಸಿದ್ದು ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದೆ. ಹೈದರಾಬಾದ್ ತಂಡ 4 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದು 2 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.
ಅತಿಹೆಚ್ಚು ಬಾರಿ 200+ ರನ್ ಗುರಿ ಬೆನ್ನಟ್ಟಿದ ಐಪಿಎಲ್ ತಂಡಗಳು
10 ಬಾರಿ – ಪಂಜಾಬ್ ಕಿಂಗ್ಸ್
6 ಬಾರಿ – ಮುಂಬೈ ಇಂಡಿಯನ್ಸ್
5 ಬಾರಿ – ರಾಜಸ್ಥಾನ ರಾಯಲ್ಸ್
4 ಬಾರಿ – ಸನ್‌ರೈಸರ್ಸ್ ಹೈದರಾಬಾದ್
4 ಬಾರಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು


