ಪಂಜಾಬ್‌ನಲ್ಲಿ ಹೀನಾಯವಾಗಿ ಸೋತ ನವಜೋತ್ ಸಿಂಗ್ ಸಿಧು

By
1 Min Read

ಚಂಡೀಗಢ: ಪಂಜಾಬ್‍ನಲ್ಲಿ ಎಎಪಿ ಅಬ್ಬರದ ನಡುವೆ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‍ನ ರಾಜ್ಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೋಲು ಅನುಭವಿಸಿದ್ದಾರೆ.

ಜೀವನ್ ಜೋತ್ ಕೌರ್ ಒಟ್ಟು 39,520 ಮತ ಪಡೆದು ಅಮೃತಸರ ಪೂರ್ವ ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ. ಸಿಧು ವಿರುದ್ಧ ಎಎಪಿ ಅಭ್ಯರ್ಥಿ ಜೀವನ್ ಜೋತ್ ಕೌರ್ 6,713 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇದನ್ನೂ ಓದಿ: ಹುಟ್ಟೂರಿನಿಂದ ಸ್ಪರ್ಧೆ ಮಾಡಿದ್ದ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಸೋಲು

ಉಳಿದಂತೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಸ್‍ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ 25,112 ಮತಪಡೆದುಕೊಂಡು ಸೋಲು ಕಂಡಿದ್ದಾರೆ. 2017ರಲ್ಲಿ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ರಾಜೇಶ್ ಕುಮಾರ್ ವಿರುದ್ಧ 42,809 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು

Share This Article
Leave a Comment

Leave a Reply

Your email address will not be published. Required fields are marked *