ಬಿಗ್ ಬಾಸ್ ಅಂದ್ರೆ ಸುಮ್ನೆನಾ?: ಕ್ಯಾಪ್ಟನ್‌ಗೇ ಪನಿಶ್‌ಮೆಂಟ್

Public TV
1 Min Read

ಬಿಗ್‌ಬಾಸ್‌ ಕನ್ನಡದ ಹತ್ತನೇ (Bigg Boss Kannada) ಸೀಸನ್‌ನ ಮೊದಲನೇ ನಾಯಕನಾಗಿ (Captain) ಸ್ನೇಹಿತ್ ಆಯ್ಕೆಯಾಗಿದ್ದರು. ನಾಯಕನಾದ ಮೇಲೆ ಅವರ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು. ನಂತರ ಅವರು ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ಕ್ಯಾಪ್ಟನ್‌ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್‌ (Snehith) ಕ್ಯಾಪ್ಟನ್ಸಿಗೆ ಅಂಕಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಕಾರಣ ನೀಡಿ ಅವರನ್ನು ಬಿಗ್‌ಬಾಸ್‌ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ ಕೂಡ.  ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಎದ್ದುಬಂದು ನಡುಗುತ್ತ ನಿಂತಿದ್ದಾರೆ. ಅವರ ಮೈಯಲ್ಲಿ ನಡುಕವಿದ್ದರೆ ಕಣ್ಣೊಳಗೆ ಅಗ್ರೆಸಿವ್‌ನೆಸ್‌ ಕಾಣಿಸುತ್ತಿದೆ.

ಸ್ನೇಹಿತ್‌ ಕ್ಯಾಪ್ಟನ್ಸಿ ಬಗ್ಗೆ ಯಾವ್ಯಾವ ಸ್ಪರ್ಧಿಗಳು ಎಷ್ಟೆಷ್ಟು ಮಾರ್ಕ್ಸ್‌ ಕೊಟ್ಟಿದ್ದಾರಾ? ಓವರಾಲ್ ಆಗಿ ಕ್ಯಾಪ್ಟನ್‌ ಆಗಿ ಸ್ನೆಹಿತ್ ಗೆದ್ದಿದ್ದಾರಾ? ಸೋತಿದ್ದಾರಾ? ಸ್ನೇಹಿತ್ ಅದರಿಂದ ಕಲಿತದ್ದು ಏನು? ಇದೆಲ್ಲವೂ ಸದ್ಯ JioCinemaದಲ್ಲಿ ಮಾತ್ರ ಲಭ್ಯವಿದೆ. ಸ್ನೇಹಿತ್ ನೀರಿಗೆ ಬಿದ್ದಾಗೊಮ್ಮೆ ಎದ್ದು ಬರುವ ದೃಶ್ಯ ಮಾತ್ರ ಪಾಪ ಅನಿಸುವಂತಿದೆ.

 

ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಕ್ಯಾಪ್ಟನ್ ಆಗಿ ಸ್ನೇಹಿತ್ ತಕ್ಕ ಮಟ್ಟಿಗೆ ಹುದ್ದೆಯನ್ನು ನಿಭಾಯಿಸಿದ್ದಾರೆ. ಕೆಲವು ತಪ್ಪುಗಳನ್ನು ಮಾಡಿರಬಹುದು. ಆದರೆ, ತೀರಾ ಕಳಪೆ ಎನ್ನುವ ರೀತಿಯಲ್ಲಂತೂ ವರ್ತಿಸಿಲ್ಲ. ಹೀಗಾಗಿ ಸ್ನೇಹಿತ್ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಇರಬಹುದು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್