ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

Public TV
2 Min Read

– ಅಭಿಮಾನಿಗಳ ಪರ `ಯುವರತ್ನ’ ಬ್ಯಾಟಿಂಗ್

ಬೆಂಗಳೂರು: ಎಂದಿಗೂ ನಾವು ಹಾಗೂ ಅಭಿಮಾನಿಗಳು ಒಂದೆ. ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ದೇವರು ಒಳ್ಳೆದು ಮಾಡಲ್ಲ ಎಂದು ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಪುನೀತ್ ಅಭಿನಯದ 29ನೇ ಸಿನಿಮಾದ ಟೈಟಲ್ `ಯುವರತ್ನ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಮ್ಮನ್ನ ಪ್ರೀತಿಯಿಂದ ಈ ಮಟ್ಟಕ್ಕೆ ಕರೆದುಕೊಂಡು ಬಂದಿದ್ದೀರಿ. ಅಭಿಮಾನಿಗಳಿಗೆ ಸದಾ ಧನ್ಯವಾದಗಳನ್ನು ಹೇಳುತ್ತೇನೆ. ಅಭಿಮಾನಿಗಳನ್ನ ಎಂದಿಗೂ ಬೇರೆ ವಿಚಾರಕ್ಕೆ ಬಳಸಿಕೊಂಡಿಲ್ಲ, ಬಳಸಿಕೊಳ್ಳುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ದೇವರು ಒಳ್ಳೆಯದು ಮಾಡಲ್ಲ. ನಮ್ಮ ಕುಟುಂಬಕ್ಕೆ 50 ವರ್ಷಗಳಿಂದ ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಎಂದರು.

ಅಭಿಮಾನಿಗಳ ಪ್ರೀತಿಗೆ ನಾವು ಇದುವರೆಗೂ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಆದ್ರು ನಮಗೆ ನೀವು ನೀಡುವ ಪ್ರೀತಿ ಮುಂದುವರಿಯುತ್ತದೆ. ಒಳ್ಳೆ ಸಿನಿಮಾ ಮಾಡುವ ಮೂಲಕ ನಿಮ್ಮನ್ನು ರಂಜಿಸಿ ನಿಮಗೆ ಸಂತೋಷ ಪಡಿಸುತ್ತೇವೆ. ನಮ್ಮಿಂದ ಸಾಧ್ಯವಾಗುವುದು ಇಷ್ಟೇ. ಒಂದು ವರ್ಷದ ಬಳಿಕ ರಾಜಕುಮಾರ ಸಿನಿಮಾ ಬಳಿಕ ಅದೇ ಜೋಡಿ ನಿಮ್ಮ ಮುಂದೆ ಬರುತ್ತಿದೆ. ಅದೇ ಪ್ರೊಡಕ್ಷನ್ ನಲ್ಲಿ ಮಾಡುತ್ತಿರುವುದು ಮತ್ತೊಂದು ಖುಷಿ ನೀಡಿದೆ. ಸಿನಿಮಾ ಟೈಟಲ್ ಬಗ್ಗೆ ಅವರೇ ಯೋಚನೆ ಮಾಡಿ `ಯುವರತ್ನ’ ಎಂದು ಇಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ನಮಗೇ ಸಾಥ್ ನೀಡಿದ್ದಾರೆ ಎಂದರು. ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಶೀರ್ಷಿಕೆ ಅನಾವರಣ ಮಾಡಲಾಯಿತು. ನಿಮ್ಮ ಬೆಂಬಲ ನಮಗೆ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡಿದರು.

ಪುನೀತ್ ಅವರು ಈ ಹೇಳಿಕೆ ಏಕೆ ನೀಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕೆಲ ದಿನಗಳ ಹಿಂದೆ ನಿರ್ದೇಶಕ ಪ್ರೇಮ್ ಅವರು ವಿಲನ್ ಚಿತ್ರದ ಕುರಿತು ಕೆಟ್ಟದಾಗಿ ಮಾತನಾಡಿದ ಸಿನಿ ಅಭಿಮಾನಿಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಪ್ರೇಮ್ ಅವರ ಈ ಮಾತಿಗೆ ಹೀಗೆ ಹೇಳಿದ್ದಾರಾ ಎನ್ನುವ ಚರ್ಚೆ ಈಗ ಆರಂಭವಾಗಿದೆ.

ಅಂಧ ಅಭಿಮಾನಿಯಾದ ವಿನುತಾ ಹಾಗೂ ಮಹೇಶ್ ಅವರಿಂದ ಯವರತ್ನ ಟೈಟಲ್ ಲಾಂಚ್ ಮಾಡಿಸಿದ ಸಿನಿಮಾ ತಂಡ ಇದೇ ವೇಳೆ ಖುಷಿ ಹಂಚಿಕೊಂಡಿತು. ರಾಜನ ಮಗ ಯುವರಾಜ, ಹೀಗಾಗಿ ಯುವರತ್ನ ಎಂದು ಟೈಟಲ್ ನೀಡಿದ್ದೇವೆ. ಸಿನಿಮಾದಲ್ಲಿ ಅಪ್ಪು 16 ವರ್ಷದ ಬಳಿಕ ಚಿತ್ರದ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/PRK_Trends/status/1057928931712610307

Share This Article
Leave a Comment

Leave a Reply

Your email address will not be published. Required fields are marked *