ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ನಂತ್ರ ಅವರ ಅಭಿಮಾನಿಗಳು, ಕಲಾವಿದರು, ಗಣ್ಯರು ಕಂಬನಿ ಮೀಡಿಯುತ್ತಿದ್ದಾರೆ. ನಟಿ ಶ್ರುತಿ ಮತ್ತು ಸುಧಾರಾಣಿ ಅವರು ಅಪ್ಪು ಅವರ ಕುರಿತಾಗಿ ಭಾವನಾತ್ಮಕವಾಗಿ ಬರೆದುಕೊಳ್ಳುವ ಮೂಲಕವಾಗಿ ಅಪ್ಪು ಇನ್ನಿಲ್ಲ ಎನ್ನುವ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ನಟಿ ಸುಧಾರಾಣಿಯವರು ಅಪ್ಪು ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಚಾರಗಳನ್ನು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯವಾಗಿದೆ. ಚಿಕ್ಕವರಾಗಿದ್ದಾಗ ಸ್ಟುಡಿಯೋ ಹೊರಗಡೆ ಕುಳಿತು ಆಟ ಆಡುತ್ತಾ ಇದ್ದಿದ್ದು, ಶಾಟ್ ಮುಗಿದ ಮೇಲೆ Chocolateನ ಹಂಚಿಕೊಂಡು ತಿನ್ನುತ್ತಾ ಇದ್ದಿದ್ದು, ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ನನ್ನನ್ನ  Ma’am  ಅಂತ ಕೂಗಿದ್ರೆ ನನಗೆ ಕೋಪ ಬರುತ್ತೆ ಅಪ್ಪು ಅಂತ ಅಂದರೂನು ಪ್ರೀತಿಯಿಂದ ನನ್ನ ಛೇಡಿಸೋದಕ್ಕೆ ಹಾಗೆ ಕರೆದು ನಗುತ್ತಾ ಇದ್ದ ಆ ನಗುಮುಖ ಇನ್ನೊಂದ್ಸಲ ನೋಡುವುದಕ್ಕೆ ಸಿಗುವುದಿಲ್ಲ. ಈ ಸತ್ಯಾನ ನಂಬೋದಕ್ಕೆ ಆಗ್ತಾ ಇಲ್ಲ. ಯಾಕ್ ಅಪ್ಪು, ಇಷ್ಟು ಬೇಗ ನಾವೆಲ್ಲರು ಬೇಡವಾಗಿ ಹೋದ್ವಾ? ಹೇಳೋದಕ್ಕೆ ಬೇಕಾದಷ್ಟಿದೆ, ಆದರೆ ಈ ರೀತಿ ಭೂತಕಾಲದಲ್ಲಿ ನಿಮ್ ಬಗ್ಗೆ ಮಾತಾಡೋದಕ್ಕೆ ಇಷ್ಟ ಇಲ್ಲ. ನಿಮ್ಮ ನಗು, ಬದುಕಿನ ಬಗ್ಗೆ ನಿಮಗಿದ್ದ ಪ್ರೀತಿ, ಸಿನಿಮಾಗಳ ಮೂಲಕ ನೀವು ಸದಾ ಅಮರ. ಮತ್ತೊಮ್ಮೆ ಕರ್ನಾಟಕದ ಮಣ್ಣಿನ ಮಗನಾಗಿ ಹುಟ್ಟಿ ಬನ್ನಿ ಅಪ್ಪು ಎಂದು ಅಪ್ಪು ಜೊತೆಗೆ ಕಳೆದ ದಿನವನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ:   ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

ಎದೆಯಲ್ಲಿರುವ ದುಃಖವನ್ನು ಪದಗಳಲ್ಲಿ ಹೇಳಲಾಗುತ್ತಿಲ್ಲಾ: ಶ್ರುತಿ
ಕೆಲವು ಘಟನೆಗಳೇ ಹಾಗೆ, ಘಟಿಸಿದ್ದು ಒಂದು ಕ್ಷಣವೇ ಆದರೂ, ಉಸಿರಿರುವವರೆಗೆ ಅಚ್ಚುಳಿದು ಬಿಡುತ್ತದೆ. ಅಪ್ಪು ಅಂದು ನೀವಾಡಿದ ಮಾತು, ನಮ್ಮಿಬ್ಬರ ಚಿತ್ರದ ಬಗ್ಗೆ ನೀವು ಕಂಡ ಕನಸು, ನನ್ನ ಅಭಿನಯದ ಬಗ್ಗೆ ನೀವಾಡಿದ ಮೆಚ್ಚುಗೆಯ ಮಾತು, ಊಟಕ್ಕೆ ಮನೆಗೆ ಬನ್ನಿ ಎಂದು ಕರೆದ ಆತ್ಮೀಯತೆ, ಅದೆಲ್ಲವೂ ಇಷ್ಟು ಬೇಗ ಕೇವಲ ನೆನಪಾಗಿ ಹೋಯಿತೇ? ಎದೆಯಲ್ಲಿರುವ ದುಃಖವನ್ನು ಪದಗಳಲ್ಲಿ ಹೇಳಲಾಗುತ್ತಿಲ್ಲಾ, RIP ಎಂದು ಹೇಳಲಾರೆ RETURN IF POSSIBLE ಎಂದಷ್ಟೇ ಪ್ರಾರ್ಥಿಸಬಲ್ಲೆ ಎಂದು ನಟಿ ಶ್ರುತಿ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಅಪ್ಪು ದೂರವಾಗಿರುವ ನೋವನ್ನು ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

 

View this post on Instagram

 

A post shared by Shruthi (@shruthi__krishnaa)

ಸ್ಯಾಂಡ್‍ವುಡ್‍ನ ಅನೇಕ ಹಿರಿಯ ಕಿರಿಯ ಕಲಾವಿದರು ಅಪ್ಪು ನಿಧನಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿಕೆಯನ್ನು ಜೀರ್ಣಿಸಿಕೊಳ್ಳಲು ಮೌನರೋದನೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *