ಪುನೀತ್ ರಾಜ್ ಕುಮಾರ್ ಗಂಧದ ಗುಡಿ ರಿಲೀಸ್ ಡೇಟ್ ಘೋಷಣೆ : ಅಕ್ಟೋಬರ್ 28ಕ್ಕೆ ತೆರೆಗೆ

Public TV
1 Min Read

ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಕೂಸಾಗಿದ್ದ ‘ಗಂಧದ ಗುಡಿ’ ಸಾಕ್ಷ್ಯಚಿತ್ರವು ಅಕ್ಟೋಬರ್ 28ರಂದು ಬಿಡುಗಡೆ ಮಾಡುವುದಾಗಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರು ಪ್ರೀತಿಯ ಕಾಣಿಕೆ ಎಂದು ಅಶ್ವಿನಿ ಬರೆದಿದ್ದಾರೆ.

ಈ ಸಾಕ್ಷ್ಯ ಚಿತ್ರದ ಬಗ್ಗೆ ಪುನೀತ್ ರಾಜ್ ಕುಮಾರ್ ಅಪಾರ ಕನಸು ಕಟ್ಟಿಕೊಂಡಿದ್ದರು. ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಸುಮ್ಮನೆ ಮನೆಯಲ್ಲಿ ಕೂರದೇ ಪುನೀತ್ ಅವರು ಕಾಡು ಮೇಡು ಸುತ್ತಿ ಶೂಟಿಂಗ್ ಮಾಡಿರುವ ಸಿನಿಮಾವಿದು. ನಮ್ಮ ನಾಡಿನ ಕಾಡಿನ ಸಂಪತ್ತನ್ನು ಈ ಸಾಕ್ಷ್ಯ ಚಿತ್ರದಲ್ಲಿ ಪರಿಚಯಿಸುವ ಕೆಲಸ ಮಾಡಿದ್ದಾರಂತೆ ಪುನೀತ್ ರಾಜ್ ಕುಮಾರ್. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

ಅಂದುಕೊಂಡಂತೆ ಆಗಿದ್ದರೆ, ಅಪ್ಪು ಬದುಕಿದ್ದಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಬೇಕಿತ್ತು. ಅದಕ್ಕೆ ಸಮಯವನ್ನೂ ನಿಗಧಿ ಮಾಡಿದ್ದರು. ಆದರೆ, ಅವರು ಅಷ್ಟರಲ್ಲಿ ನಿಧನರಾದರು. ಹಾಗಾಗಿ ಅವರ ಕನಸಿನ ಕೂಸನ್ನು ಅದ್ಧೂರಿಯಾಗಿಯೇ ರಿಲೀಸ್ ಮಾಡಬೇಕು ಎನ್ನುವುದು ಅಶ್ವಿನಿ ಅವರ ಕನಸಾಗಿತ್ತು. ಹೀಗಾಗಿ ಥಿಯೇಟರ್ ನಲ್ಲೇ ಈ ಸಾಕ್ಷ್ಯ ಚಿತ್ರ ರಿಲೀಸ್ ಆಗುತ್ತಿದೆ.


Live Tv

[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *