ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ (Puneeth Raj Kumar) ಅವರ ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.

ಹೌದು. ಈಗಾಗಲೇ ನಾಲ್ಕು ಜನರ ಬಾಳಿಗೆ ಬೆಳಕಾಗಿರೋ ಪುನೀತ್ ರಾಜ್ ಕುಮಾರ್ ಅವರ ಕಣ್ಣಿನಿಂದ ಇನ್ನೂ 10 ಜನಕ್ಕೆ ದೃಷ್ಟಿ ನೀಡಲು ವೈದ್ಯರು ತಯಾರಿ ನಡೆಸುತ್ತಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗಿದೆ. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯಾ (Cornea) ಮತ್ತು ಸ್ಟೆಮ್ ಸೆಲ್ (Stem Cell) ಎರಡನ್ನು ಬಳಕೆ ಮಾಡಿಕೊಂಡು ದೃಷ್ಟಿ ನೀಡಲಾಗುತ್ತಿದೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ

ಪುನೀತ್ ರಾಜ್ ಕುಮಾರ್ ಸ್ಟೆಮ್ ಸೆಲ್ ಗಳ ಬಳಕೆಯಿಂದ ಅಂಧರಿಗೆ ದೃಷ್ಟಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಸ್ಟೆಮ್ ಸೆಲ್ ಥೆರಪಿ ನಡೆಸಿ 10 ಮಂದಿಗೆ ದೃಷ್ಟಿ ನೀಡಲು ಮುಂದಾಗಿದೆ. ಅಪ್ಪು ಕಾರ್ನಿಯಾವನ್ನು ಬೇರೆಯವರಿಗೆ ಬಳಸಿ ದೃಷ್ಟಿ ನೀಡಲಾಗಿದೆ. ಈಗ ಪುನೀತ್ ಅವರ ಕಣ್ಣಿನ ರಿಮ್ ಭಾಗದಿಂದ ವೈದ್ಯರು ಸ್ಟೆಮ್ ಸೆಲ್ ಸಂಗ್ರಹಿಸಿದ್ದಾರೆ. ಈಗಾಗಲೇ ಸ್ಟೆಮ್ ಸೆಲ್ ಗಳು ಮಲ್ಟಿಪಲ್ ಆಗುತ್ತಿವೆ. ಮಲ್ಟಿಪಲ್ ಆಗಲು ಕಾಲಾವಧಿ ಬೇಕಾಗುತ್ತಿದೆ. ಮಲ್ಟಿಪಲ್ ಆದ ಮೇಲೆ ಸ್ಟೆಮ್ ಸೆಲ್ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಕಸಿ ಮಾಡಬಹುದು. ಈಗ ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

ಸ್ಟೆಮ್ ಸೆಲ್ ಥೆರಪಿ ಎಂದರೇನು ?
ರೆಟಿನಾ (ಅಕ್ಷಿಪಟಲ) ಸಂಬಂಧಿ ಸಮಸ್ಯೆಗಳು ಹಾಗೂ ವಂಶವಾಹಿ ಗುಣಗಳಿಂದ ಬರುವ ಅನುವಂಶೀಯ ಖಾಯಿಲೆ ಬಳಲುತ್ತಿರುವರಿಗೆ ಅಂಧತ್ವ ನಿವಾರಿಸಬಹುದು. ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಥೆರಪಿ ಮಾಡಿ ದೃಷ್ಟಿ ನೀಡುವುದೇ ಸ್ಟೆಮ್ ಥೆರಪಿ. ಸ್ಟೆಮ್ ಸೆಲ್ ಸಮಸ್ಯೆಯಿಂದಾಗಿ ಮ್ಯಾಕ್ಯೂಲರ್ ಡಿಜನರೇಶನ್ (Macular Degeneration), ರಿಟನೈಟಿಸ್ ಪಿಂಗಮೆಂಟೋಸ್ (Retinitis Pigmentosa) ನಂತಹ ಖಾಯಿಲೆಗಳಿಗೆ ಲಕ್ಷಾಂತರ ಮಂದಿ ಕುರುಡುರಾಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

Share This Article
Leave a Comment

Leave a Reply

Your email address will not be published. Required fields are marked *