4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

Public TV
2 Min Read

ನವದೆಹಲಿ: ಪಹಲ್ಗಾಮ್‌ನಲ್ಲಿ ದಾಳಿ (Pahalgam Terror Attack) ನಡೆಸಿದ ಉಗ್ರರು ಹಿಂದೆಯೇ ಬಂದು ನೆಲೆಸಿದ್ದರು ಎನ್ನುವುದಕ್ಕೆ ಪುಣೆ ಕುಟುಂಬವೊಂದರ (Pune Family) ರೀಲ್ಸ್‌ನಲ್ಲಿ ಸಾಕ್ಷಿ ಸಿಕ್ಕಿದೆ.

ಪಹಲ್ಗಾಮ್‌ನಿಂದ ಏಳೂವರೆ ಕಿ.ಮೀ. ದೂರದ ಬೇತಾಬ್ ವ್ಯಾಲಿಯಲ್ಲಿ ಮಧ್ಯಾಹ್ನ 2:30ಕ್ಕೆ ಇಬ್ಬರು ಉಗ್ರರು ನಡೆದಾಡಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಪುಣೆ ವ್ಯಕ್ತಿ ಸಲ್ಲಿಸಿರುವ ವಿಡಿಯೋವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈಗ ಪರಿಶೀಲಿಸುತ್ತಿದ್ದಾರೆ.  ಇದನ್ನೂ ಓದಿ: ಉಗ್ರರ ದಾಳಿ ಹಿಂದೆ ಪಾಕ್, ಐಎಸ್‌ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!

 

ಪುಣೆಯ ಸಾಮಾಜಿಕ ಕಾರ್ಯಕರ್ತ ಶ್ರೀಜಿತ್ ರಮೇಶನ್ ಅವರು ಮಾತನಾಡಿ, ಏಪ್ರಿಲ್ 18ರಂದು ನಾವು ಪಹಲ್ಗಾಮ್‌ಗೆ ತೆರಳಿದ್ದೆವು. `ಮಿನಿ ಸ್ವಿಟ್ಜರ್‌ಲ್ಯಾಂಡ್’ ಬೈಸರನ್ ಬಳಿಕ ಪಹಲ್ಗಾಮ್‌ನಿಂದ ಏಳೂವರೆ ಕಿ.ಮೀ. ದೂರದ ಬೇತಾಬ್ ವ್ಯಾಲಿಗೆ ಹೋಗಿದ್ದೆವು. ಅಲ್ಲಿ ನನ್ನ 6 ವರ್ಷದ ಮಗಳು ರೀಲ್ಸ್ ಮಾಡುತ್ತಿದ್ದನ್ನು ನಾನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದೆ. ಪ್ರವಾಸ ಮುಗಿಸಿ ವಾಪಸ್ ಮನೆಗೆ ಬಂದಾ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ತಿಳಿಯಿತು. ನಾಲ್ವರು ಉಗ್ರರ ಫೋಟೋ ಬಿಡುಗಡೆ ಮಾಡಿದ್ದನ್ನು ನೋಡಿದೆವು. ಆ ಫೋಟೋದಲ್ಲಿದ್ದ ಇಬ್ಬರ ಮುಖವನ್ನು ನೋಡಿದಂತೆ ಇದೆ. ನಮ್ಮ ರೀಲ್ಸ್‌ನಲ್ಲಿ ಹಿಂದುಗಡೆ ನಡೆದುಕೊಂಡು ಹೋಗುತ್ತಿದ್ದ ವಿಡಿಯೋಗೆ ಹೋಲಿಕೆ ಮಾಡಿದಾಗ ಸಾಮ್ಯತೆ ಕಂಡು ಬಂತು. ಹಾಗಾಗಿ ದೆಹಲಿ ಎನ್‌ಐಎಗೆ ವಿಡಿಯೋ ಕಳುಹಿಸಿಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್‌’ ಅಂತ ಕೂಗಿದ ಜಿಪ್‌ಲೈನ್‌ ಆಪರೇಟರ್‌

Share This Article