ಬೆಂಗಳೂರಿನಲ್ಲಿ ಪಂಚರ್ ಮಾಫಿಯಾ| ನಾಗಸಂದ್ರ – ಗೊರಗುಂಟೆಪಾಳ್ಯ ರಸ್ತೆಯಲ್ಲಿ ರಾಶಿ ರಾಶಿ ಮೊಳೆಗಳು

Public TV
1 Min Read

ಬೆಂಗಳೂರು: ನಗರದ ಕೆಲ ರಸ್ತೆಯಲ್ಲಿ ಪಂಚರ್ ಮಾಫಿಯಾ ಇನ್ನೂ ಜೀವಂತವಾಗಿದೆ. ಬೆಂಗಳೂರು (Bengaluru) ಹೊರವಲಯದ ಟಿ.ದಾಸರಹಳ್ಳಿಯ ನಾಗಸಂದ್ರದಿಂದ ಗೊರಗುಂಟೆ ಪಾಳ್ಯಕ್ಕೆ ತೆರಳುವ ರಸ್ತೆಯಲ್ಲಿ ಪಂಚರ್ ಮಾಫಿಯಾ (Puncture Mafia) ನಡೆಯುತ್ತಿದೆ ಎಂದು ವಾಹನ ಸವಾರರು ಸಾಕ್ಷಿ ಸಮೇತ ವಿಡಿಯೋ ಮಾಡಿದ್ದಾರೆ.

ಹೌದು. ಗೊರಗುಂಟೆ ಪಾಳ್ಯದ (Goraguntepalya) ಮುಖ್ಯ ಸಿಗ್ನಲ್​ನಲ್ಲಿರುವ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಸವಾರರೊಬ್ಬರ ಬೈಕ್‌ ಟಯರ್‌ ಆಗಾಗ ಪಂಚರ್‌ ಆಗುತ್ತಿತ್ತು. ಈ ಕಾರಣಕ್ಕೆ ಅವರು ತನಿಖೆಗೆ ಇಳಿದಾಗ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮೊಳೆ ಹಾಕಿರುವುದು ಕಂಡು ಬಂದಿದೆ. ರಸ್ತೆ ಮೇಲೆ ಬಿದ್ದಿರುವ ಸಣ್ಣ ಸಣ್ಣ ಮೊಳೆಗಳನ್ನು ನೋಡಿ ಅವರು ಶಾಕ್‌ ಆಗಿದ್ದಾರೆ. ಇದನ್ನೂ ಓದಿ:  ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

 

ಈ ಹಿಂದೆಯೂ ನಗರದ ಹಲವು ಕಡೆ ಪಂಚರ್‌ ಮಾಫಿಯಾದ ಬಗ್ಗೆ ಸುದ್ದಿಗಳು ಪ್ರಕಟವಾಗಿದ್ದವು. ಕೆಲ ದಿನಗಳ ಹಿಂದೆ ರಾಜ್‌ಕುಮಾರ್‌ ಸಮಾಧಿಯಿಂದ ಗೊರಗುಂಟೆಪಾಳ್ಯಕ್ಕೆ ಬರುವ ಕಡೆ ಮೊಳೆಗಳನ್ನು ಹಾಕಲಾಗುತ್ತದೆ ಎಂದು ನೆಟ್ಟಿಗರೊಬ್ಬರು ವಿಡಿಯೋ ಮಾಡಿದ್ದು ವೈರಲ್‌ ಆಗಿತ್ತು.  ಈ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹಾಕುವವರನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು  ಸವಾರರು ಆಗ್ರಹಿಸಿದ್ದಾರೆ.

Share This Article