ಮೂರನೇ ಬಾರಿಗೆ ಛತ್ರಪತಿ ಶಿವಾಜಿ ಪ್ರತಿಮೆಗೆ ಎಂಇಎಸ್‌ನಿಂದ ಪೂಜೆ

Public TV
1 Min Read

ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ರಾಜಹಂಸಗಡ ಕೋಟೆಯ ರಾಜಕೀಯ ಜೋರಾಗಿದ್ದು ಬಿಜೆಪಿ, ಕಾಂಗ್ರೆಸ್ ಬಳಿಕ ಈಗ ಎಂಇಎಸ್ (MES) ಎಂಟ್ರಿಯಾಗಿದೆ. ಮಹಾರಾಷ್ಟ್ರದ (Maharashtra) ರಾಯಗಡದಿಂದ ಅರ್ಚಕರನ್ನು ಕರೆತಂದು ಎಂಇಎಸ್ ಪುಂಡರು ರಾಜಹಂಸಗಡ ಕೋಟೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಜಹಂಸಗಡ ಕೋಟೆಯಲ್ಲಿ ಈಗಾಗಲೇ ಎರಡೆರಡು ಬಾರಿ ಪ್ರತಿಮೆ ಲೋಕಾರ್ಪಣೆ ಆಗಿದೆ. ಇದರಿಂದ ಶಿವಾಜಿ ಪ್ರತಿಮೆಗೆ (Chhatrapati Shivaji Statue) ಅಪಮಾನ ಆಗಿದೆ ಎಂದು ಆರೋಪಿಸಿ ಶಿವಾಜಿ ಪ್ರತಿಮೆ ಶುದ್ಧೀಕರಣ ಹೆಸರಲ್ಲಿ ಎಂಇಎಸ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ಅನಿಲ್ ಬೆನಕೆಗೆ ನಡು ರಸ್ತೆಯಲ್ಲೇ ಮತದಾರರಿಂದ ಕ್ಲಾಸ್

ಮಹಾರಾಷ್ಟ್ರದ ರಾಯಗಡದಿಂದ ಅರ್ಚಕರನ್ನು ಕರೆತಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಎದುರು ಉತ್ಸವ ಮೂರ್ತಿಗೆ ಪೂಜೆ ಮಾಡಲಾಯಿತು. ಮಹಾರಾಷ್ಟ್ರದ ಪಂಡರಪುರದ ಚಂದ್ರಭಾಗಾ, ಭೀಮಾ ಭಾಮಾ ಇಂದ್ರಾಯಣಿ, ರಾಜಹಂಸಗಡ, ರಾಮಶೇಜ ಸಾಲ್ಹೇರ, ಪನ್ಹಾಳಗಡ, ರಾಯಗಡ, ಗಂಗಾಸಾಗರದಿಂದ ನೀರು ತಂದು ಶಿವಾಜಿ ಉತ್ಸವ ಮೂರ್ತಿಗೆ ಪೂಜೆ ಮಾಡಲಾಯಿತು.

ಇತ್ತ ಶಿವಾಜಿ ಪ್ರತಿಮೆ ಎದುರು ಯಾವುದೇ ರೀತಿಯ ಪೂಜೆಗೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಸೂಚನಾ ಫಲಕ ಹಾಕಿದೆ. ಮತ್ತೊಂದೆಡೆ ಎಂಇಎಸ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಎದುರು ಪೂಜಾ ಕೈಂಕರ್ಯ ನಡೆಸಲಾಗಿದೆ. ಇದನ್ನೂ ಓದಿ: ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ ಕೇಸ್ – ಎಚ್ಚರಿಕೆ ನೀಡಿ ಯುವಕನಿಗೆ ಜಾಮೀನು ನೀಡಿದ ಪೊಲೀಸರು

Share This Article
Leave a Comment

Leave a Reply

Your email address will not be published. Required fields are marked *