ನಾಳೆ ರಕ್ತ ಚಂದ್ರಗ್ರಹಣ – ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ಪೂಜಾ, ದರ್ಶನ ಸಮಯ ಬದಲು

2 Min Read

– ಬೆಳಗ್ಗೆ 9 ಗಂಟೆಯಿಂದ ಗವಿಗಂಗಾಧರೇಶ್ವರ ದೇವಾಲಯ ಬಂದ್‌
– ಸಿಂಹ ರಾಶಿಯವರಿಗೆ ಅಪಾಯದ ಮುನ್ಸೂಚನೆ

ಬೆಂಗಳೂರು: ವರ್ಷದ ಮೊದಲ ಚಂದ್ರಗ್ರಹಣ (Lunar Eclipse 2026) ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಇದನ್ನು ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ. ರಕ್ತ ಚಂದ್ರ ಗ್ರಹಣದಿಂದ ಜಲಕಂಟಕ, ಅಗ್ನಿ ಕಂಟಕ ಜೊತೆಗೆ ಸಿಂಹ ರಾಶಿ ಅವರಿಗೆ ಅಪಾಯ ಇದೆ, ವಿವಿಧ ರಾಶಿಯವರಿಗೂ (Rashi) ಎಫೆಕ್ಟ್‌ ತಟ್ಟಲಿದೆ ಎಂದು ಜೋತಿಷಿಗಳು ಈಗಾಗಲೇ ಹೇಳುತ್ತಿದ್ದಾರೆ.

ಈ ಮಧ್ಯೆ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್, ಗ್ರಹಣ ದಿನದಂದು ದೇವಾಲಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಆ ದಿನ ಚಂದ್ರಗ್ರಹಣದಿಂದ ಆಗುವ ಒಳಿತು ಕೆಡುಕುಗಳು ಮತ್ತು ಗವಿಗಂಗಾಧರೇಶ್ವರ ದೇವಾಲಯದ (Gavi Gangadhareshwara Temple) ವಿಶೇಷ ಪೂಜೆ ಪುನಸ್ಕಾರ ಜೊತೆಗೆ ದೇವಸ್ಥಾನ ಯಾವ ಓಪನ್‌, ಯಾವಾಗ ಬಂದ್‌ ಆಗಿರುತ್ತೆ ಅನ್ನೋ ಮಾಹಿತಿಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಶ್ರೀಮಂತರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳುತ್ತಿದ್ದರೆ ಬಿಡಬೇಕು: ಎಂ.ಬಿ ಪಾಟೀಲ್‌ ಒತ್ತಾಯ

ಬೆಳಗ್ಗೆ 9 ಗಂಟೆಗೆ ದೇವಾಲಯ ಬಂದ್‌
ಮಾ.3 ರಂದು ರಕ್ತಚಂದ್ರ ಗ್ರಹಣ ಹಿನ್ನೆಲೆ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಎಂದಿನಂತೆ ಪೂಜೆ ಪುನಸ್ಕಾರಗಳು ನೆರವೇರಲಿವೆ. ಬೆಳ್ಳಗ್ಗೆ 6 ಗಂಟೆಯಿಂದ ಜಲಾಭಿಷೇಕ ವಿಶೇಷ ಪೂಜೆ ನೆರವೇರಿಸಿ, 9 ಗಂಟೆಗೆ ದರ್ಬೆಯಿಂದ ಗರ್ಭಗುಡಿ ಬಂಧನ ಮಾಡಿ, ದೇವಸ್ಥಾನ ಕ್ಲೋಸ್ ಮಾಡಲಾಗುತ್ತೆ. ನಂತರ ಸಂಜೆ 7:30 ಗಂಟೆಗೆ ದೇವಸ್ಥಾನ ಓಪನ್ ಮಾಡಿ ಸ್ವಾಮಿಗೆ ಜಲಾಭಿಷೇಕ, ಮರುದಿನ ಅಂದ್ರೆ ಬುಧವಾರ ಬೆಳಗ್ಗೆ ದೇವಸ್ಥಾನ ಶುಚಿಗೊಳಿಸುವ ಕಾರ್ಯ ನಡೆಯಲಿದೆ ಎಂದು ಸೋಮಸುಂದರ್ ದೀಕ್ಷಿತ್ ಗುರೂಜಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಹೊಡೆತದಲ್ಲಿ ಇರಾನ್‌ನ 48 ನಾಯಕರು ಉಡೀಸ್‌ – ಟ್ರಂಪ್‌ ಮಾಹಿತಿ

ಕಾಡು ಮಲ್ಲೇಶ್ವರದಲ್ಲಿ ನವಗ್ರಹ ಶಾಂತಿ ಹೋಮ
ಇನ್ನೂ ಗ್ರಹಣ ಹಿನ್ನೆಲೆ ಬೆಂಗಳೂರಿನ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಮಧ್ಯಾಹ್ನ 12 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಗರ್ಭಗುಡಿಯನ್ನ ದರ್ಬೆಯಿಂದ ಬಂದ್‌ ಮಾಡಲಾಗುತ್ತದೆ. ಸಂಜೆ 7 ಗಂಟೆಗೆ ಮತ್ತೆ ದೇವಾಲಯದ ಬಾಗಿಲು ತೆರೆದು, ಪುಣ್ಯಃಶುಚಿತ್ವ ಮಾಡಲಾಗುತ್ತದೆ. ಚಂದ್ರನಿಗೆ ಹಾಗೂ ಕಾಡುಮಲ್ಲೇಶ್ವರನಿಗೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ನೈವೇಧ್ಯ ನೆರವೇರಿಸಿ, ರಾತ್ರಿ 9.30ರ ವರೆಗೆ ಭಕ್ತಾಧಿಗಳಿಗೆ ಅದರ್ಶನಕ್ಕೆ ಅವಕಾಶ ವಿರಲಿದೆ. ಮರುದಿನ ನವಗ್ರಹ ಶಾಂತಿ ಹೋಮ ನೆರವೇರಿಸಲಾಗುತ್ತದೆ.

ಬನಶಂಕರಿ ದೇವಾಲಯದಲ್ಲಿ ಹುಣ್ಣಿಮೆ ಪೂಜೆ
ರಕ್ತಚಂದ್ರ ಗ್ರಹಣ ಹಿನ್ನೆಲೆ ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಲಿವೆ. ಬೆಳಗ್ಗೆಯಿಂದಲೇ ವಿಶೇಷ ಹುಣ್ಣಿಮೆ ಅಭಿಷೇಕ ಪೂಜೆಗಳು ಆರಂಭವಾಗಲಿದ್ದು, 8:30 ಕ್ಕೆ ಮಹಾಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ದೇವಾಲಯ, ಗರ್ಭಗುಡಿಗೆ ದರ್ಬೆ ಹಾಕಿ ದೇವಸ್ಥಾನ ಬಂದ್ ಮಾಡಲಾಗುತ್ತದೆ. ಗ್ರಹಣ ಮುಕ್ತ ಕಾಲದ ಬಳಿಕ 7 ಗಂಟೆಗೆ ದೇವಾಲಯ ಮತ್ತೆ ತೆರೆಯಲಾಗುತ್ತದೆ. ಶುದ್ಧಿ ಕಾರ್ಯದ ಬಳಿಕ ದೇವರಿಗೆ ವಿಶೇಷ ಪೂಜೆಯೊಂದಿಗೆ ಅಭಿಷೇಕ ನೆರವೇರಿಸಿ, ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

Share This Article