ಕಲಬುರಗಿಯಲ್ಲಿ ಪುದುಚೇರಿ ವಾಹನ ನೋಂದಣಿಗೆ 2 ಕೋಟಿ ದಂಡ

1 Min Read

ಕಲಬುರಗಿ: ವಾಹನ ತೆರಿಗೆ ಕಡಿಮೆ ಆಗುತ್ತದೆ ಎಂದು ದೂರದ ಪುದುಚೇರಿಯಲ್ಲಿ (Puducherry) ನೋಂದಣಿ ಮಾಡಿದ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ 1.98 ಕೋಟಿ ರೂ. ತೆರಿಗೆ ಹಾಗೂ ದಂಡ ಸಂಗ್ರಹ ಮಾಡಿದ್ದಾರೆ.

ಪುದುಚೇರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಾಲ್ಕು ಚಕ್ರ ವಾಹನಗಳ ರಸ್ತೆ ತೆರಿಗೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಲವರು ತಮ್ಮ ವಾಹನಗಳನ್ನು ಅಲ್ಲಿ ನೋಂದಣಿ ಮಾಡಿ ರಾಜ್ಯ ತೆರಿಗೆ ಸಂಗ್ರಹಕ್ಕೆ ಕೊಕ್ಕೆ ಹಾಕುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದನ್ನೂ ಓದಿ: ಯೋಗೇಶ್‌ ಗೌಡ ಕೊಲೆ ಕೇಸ್‌ – ಅಂತಿಮ ತೀರ್ಪು ಏ.15ಕ್ಕೆ ಮುಂದೂಡಿಕೆ

ಕಲಬುರಗಿಯಲ್ಲಿ ಅಂತಹ 92 ವಾಹನಗಳ ಮಾಲೀಕರ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಿಸಿ, ಒಟ್ಟು 1.98ಕೋಟಿ ರೂ. ದಂಡ ಮತ್ತು ತೆರಿಗೆ ಸಂಗ್ರಹ ಮಾಡಲಾಗಿದೆ.

ಪುದುಚೇರಿ ಖರೀದಿಗೆ ಕಾರಣ: ರಾಜ್ಯದಲ್ಲಿ ವಾಹನಗಳ ಮೇಲೆ ವಿಧಿಸುವ ತೆರಿಗೆ ಸುಮಾರು ಶೇ.13ರಿಂದ 20ರವರೆಗೆ ಇದ್ದು, ಪುದುಚೇರಿಯಲ್ಲಿ ಇದೇ ವಾಹನಗಳಿಗೆ ಕಡಿಮೆ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಲಕ್ಷಾಂತರ ರೂ. ದುಬಾರಿ ಕಾರ್ ಕೊಳ್ಳುವಾಗ ಹೆಚ್ಚಿನ ಹಣ ಉಳಿಯುತ್ತದೆ ಎಂದು ಪುದುಚೇರಿಯಲ್ಲಿ ವಾಹನ ಖರೀದಿಸಲಾಗುತ್ತಿದೆ. ಇದನ್ನೂ ಓದಿ: ಸತ್ಯಕ್ಕೆ ಯಾವತ್ತೂ ಜಯ ಸಿಗಲಿದೆ: ವಿನಯ್‌ ಕುಲಕರ್ಣಿ

ನಿಯಮ ಏನಿದೆ?: ರಾಜ್ಯ ಮೋಟಾರ್ ವಾಹನ ಕಾಯಿದೆ ಪ್ರಕಾರ, ಬೇರೆ ರಾಜ್ಯದಲ್ಲಿ ನೋಂದಾಯಿಸಿದ ವಾಹನವನ್ನು ಕರ್ನಾಟಕದಲ್ಲಿ ಗರಿಷ್ಠ ಎಂದರೆ 11ರಿಂದ 12 ತಿಂಗಳು ಕಾಲ ಬಳಸಬಹುದಾಗಿದೆ. ಇನ್ನು ಬೇರೆ ರಾಜ್ಯಗಳಿಂದ ತಮ್ಮ ಕೆಲಸಕ್ಕೆ ಬಂದವರಿಗೆ ಕೆಲ ನಿಬಂಧನೆಗಳಿವೆ. ಆದರೆ, ವರ್ಷಕ್ಕಿಂತ ಹೆಚ್ಚಿನ ಕಾಲ ನಮ್ಮ ರಾಜ್ಯದಲ್ಲಿ ಓಡಾಡುತ್ತಿದ್ದರೆ ರಾಜ್ಯದ ಮೋಟಾರು ವಾಹನ ಕಾಯಿದೆ ಪ್ರಕಾರ ತೆರಿಗೆ ಕಟ್ಟಬೇಕು. ಇಲ್ಲದಿದ್ದರೆ ವಾಹನವನ್ನು ಸೀಜ್ ಮಾಡುವ ಅಧಿಕಾರ ಸಾರಿಗೆ ಇಲಾಖೆ ಹೊಂದಿದೆ.

Share This Article