PUC ಪಠ್ಯ ಪರಿಷ್ಕರಣೆ – ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ತೀರ್ಮಾನ

Public TV
2 Min Read

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಣ್ಣಗಾಗುವ ಮುನ್ನವೇ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚನೆಯ ಆದೇಶವನ್ನು ಶಿಕ್ಷಣ ಇಲಾಖೆ ಹಿಂಪಡೆದು ಸಮಿತಿಯನ್ನು ವಿಸರ್ಜಿಸಿದೆ.

TEXT BOOK

ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ ಮಾಡಿದ್ದ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿಯ `ಹೊಸ ಧರ್ಮಗಳ ಉದಯ’ ಪಠ್ಯ ಮಾತ್ರ ಪರಿಷ್ಕರಣೆಗೆ ವಹಿಸಿತ್ತು. ಶಾಲಾ ಪಠ್ಯ ಪುಸ್ತಕ ಗೊಂದಲ ಆದ ಹಿನ್ನಲೆಯಲ್ಲಿ ಪಿಯುಸಿ ಪಠ್ಯ ಪರಿಷ್ಕರಣೆ ಕೈ ಬಿಡಲು ತೀರ್ಮಾನಿಸಿ, ರೋಹಿತ್ ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದೇ ಇರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥಗೆ ಸಂಘಟನೆಗಳಿಂದ ಧಮ್ಕಿ – ಪೊಲೀಸರಿಂದ ಬಿಗಿ ಭದ್ರತೆ

TEXTBOOK

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ದ್ವಿತೀಯ ಪಿಯುಸಿಯ ಇತಿಹಾಸದ ಒಂದು ಪಠ್ಯವನ್ನು ಪರಿಷ್ಕರಣೆಗಾಗಿ ಸಮಿತಿಗೆ ನೀಡಲಾಗಿತ್ತು. ಈಗಾಗಲೇ ಮುಖ್ಯಮಂತ್ರಿಗಳು ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಿದ್ದಾರೆ. ಹೀಗಾಗಿ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯೂ ವಿಸರ್ಜನೆ ಆಗಿದೆ. ರೋಹಿತ್ ಚಕ್ರತೀರ್ಥ ಸಮಿತಿಯಿಂದ ವರದಿ ಸ್ವೀಕಾರ ಮಾಡುವುದಿಲ್ಲ. ದ್ವಿತೀಯ ಪಿಯುಸಿಯ ಒಂದು ಪಠ್ಯವನ್ನೂ ಸಹ ಪರಿಷ್ಕರಣೆ ಮಾಡುವುದಿಲ್ಲ. ಈಗ ಇರುವ ಪಠ್ಯವನ್ನು ಯಥಾವತ್ತಾಗಿ ಉಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ಮರೆತಿದ್ದು ಕಾಂಗ್ರೆಸ್ ಹೊರತು ನಾವಲ್ಲ: ಬಿಜೆಪಿ ತಿರುಗೇಟು

ಪಠ್ಯ ಪರಿಷ್ಕರಣೆ ಜನಾಭಿಪ್ರಾಯಕ್ಕೆ: ಪಠ್ಯಪುಸ್ತಕ ಪರಿಷ್ಕರಣೆಯನ್ನ ಜನಾಭಿಪ್ರಾಯಕ್ಕೆ ಬಿಡುತ್ತೇವೆ. ಯಾವ ಪಠ್ಯದಲ್ಲಿ ತಪ್ಪಾಗಿದೆ? ಎಲ್ಲಿ ಲೋಪ ಉಂಟಾಗಿದೆ? ಅದನ್ನ ಸರಿ ಮಾಡಿಕೊಳ್ಳುತ್ತೇವೆ. ಬಸವಣ್ಣನವರ ಸಾಲು ಸೇರಿಸುತ್ತೇವೆ. ಸಂವಿಧಾನ ಶಿಲ್ಪಿ ಬಿರುದನ್ನೂ ಸೇರ್ಪಡೆ ಮಾಡುತ್ತೇವೆ. ಜನಾಭಿಪ್ರಾಯದಲ್ಲಿ ಏನಾದರೂ ಆಕ್ಷೇಪಗಳು ಬಂದರೆ ಅದನ್ನ ಸ್ವೀಕಾರ ಮಾಡಿ, ಸರಿ ಇದ್ದರೆ ಅದನ್ನ ಪರಿಷ್ಕರಣೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

ಬರಗೂರು ಸಮಿತಿಯ ಬಹುತೇಕ ಪಠ್ಯವನ್ನು ಉಳಿಸಿಕೊಂಡಿದ್ದೇವೆ. ಅದರ ಬಗ್ಗೆ ಯಾರೂ ವಿವಾದ ಮಾಡಿಲ್ಲ. ಬೇರೆಲ್ಲ ಪಠ್ಯದ ಬಗ್ಗೆ ಮಾತ್ರ ವಿವಾದ ಮಾಡ್ತಿದ್ದಾರೆ. ಬಸವಣ್ಣನವರ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಏನು ಪರಿಷ್ಕರಣೆ ಮಾಡಿತ್ತೋ ಅದನ್ನು ಹಾಗೇ ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *