ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

Public TV
2 Min Read

– ಟೇಪ್‌ ಕಟ್‌ ಮಾಡಿ ಎಜುಕೇಷನ್‌ ಎಕ್ಸ್‌ಪೋಗೆ ಚಾಲನೆ ಕೊಟ್ಟ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌.ಆರ್‌.ರಂಗನಾಥ್‌
– ಇಂದು, ನಾಳೆ ಅರಮನೆ ಮೈದಾನದಲ್ಲಿ ಇರಲಿದೆ ಶೈಕ್ಷಣಿಕ ಮೇಳ; ಬನ್ನಿ ಸದುಪಯೋಗಪಡಿಸಿಕೊಳ್ಳಿ

ಬೆಂಗಳೂರು: ‘ಪಬ್ಲಿಕ್‌ ಟಿವಿ’ಯ ಅತಿದೊಡ್ಡ ಶೈಕ್ಷಣಿಕ ಮೇಳ (PublicTV Education Expo) ವಿದ್ಯಾಪೀಠ (Vidhyapeeta) 8ನೇ ಆವೃತ್ತಿಗೆ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಶನಿವಾರ ಅದ್ದೂರಿ ಚಾಲನೆ ಸಿಕ್ಕಿತು.

ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಅವರು ಟೇಪ್‌ ಕಟ್‌ ಮಾಡಿ ವಿದ್ಯಾಪೀಠ ಶೈಕ್ಷಣಿಕ ಮೇಳಕ್ಕೆ ಬೆಳಗ್ಗೆ 10:30ಕ್ಕೆ ಚಾಲನೆ ಕೊಟ್ಟರು. ಈ ವೇಳೆ ರೇವಾ ಯೂನಿವರ್ಸಿಟಿ ಚಾನ್ಸಲರ್‌ ಡಾ. ಪಿ.ಶ್ಯಾಮರಾಜ್‌, ಗಾರ್ಡನ್‌ ಸಿಟಿ ಯೂನಿವರ್ಸಿಟಿ ಚಾನ್ಸಲರ್‌ ಡಾ. ವಿ.ಜೆ.ಜೋಸೆಫ್‌, ಕೇಂಬ್ರಿಡ್ಜ್‌ ಶಿಕ್ಷಣ ಸಮೂಹ ಸಂಸ್ಥೆಯ ಚೇರ್ಮನ್‌ ಡಾ. ಡಿ.ಕೆ.ಮೋಹನ್‌, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸ್‌ನ ವೈಸ್‌ ಚಾನ್ಸಲರ್‌ ಡಾ. ಕುಲ್ದೀಪ್‌ ಕುಮಾರ್‌ ರೈನಾ ಸಾಥ್‌ ನೀಡಿದರು. ಇದನ್ನೂ ಓದಿ: ಇಂದಿನಿಂದ `ಪಬ್ಲಿಕ್ ಟಿವಿ ವಿದ್ಯಾಪೀಠʼ – ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ತಪ್ಪದೇ ಬನ್ನಿ!

ಬಳಿಕ ಗಣ್ಯರು ಮೇಳದಲ್ಲಿ ಪಾಲ್ಗೊಂಡಿರುವ ಸ್ಟಾಲ್‌ಗಳಿಗೆ ಭೇಟಿ ನೀಡಿ ಶುಭಹಾರೈಸಿದರು. ಗಾರ್ಡನ್‌ ಸಿಟಿ ಯೂನಿವರ್ಸಿಟಿ ವತಿಯಿಂದ ಹೆಚ್‌.ಆರ್‌.ರಂಗನಾಥ್‌ ಅವರಿಗೆ ಪುಷ್ಪ ಗುಚ್ಛ ನೀಡಿ ಅಭಿನಂದಿಸಲಾಯಿತು. ರೇವಾ ಯೂನಿವರ್ಸಿಟಿ ಚಾನ್ಸಲರ್‌ ಡಾ. ಪಿ.ಶ್ಯಾಮರಾಜ್‌ ಅವರು ಗಿಡ ನೀಡಿ ಗೌರವಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ – ಸ್ಪಾಟ್‌ನಲ್ಲೇ ಲ್ಯಾಪ್‌ಟಾಪ್ ಗೆಲ್ಲಿ

ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಗಣ್ಯರು ದೀಪ ಬೆಳಗಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ವಿದ್ಯಾಪೀಠ 7 ಆವೃತ್ತಿಗಳ ಮಾಹಿತಿ ಒಳಗೊಂಡ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಇದನ್ನೂ ಓದಿ: `ಪಬ್ಲಿಕ್ ಟಿವಿ’ ವಿದ್ಯಾಪೀಠಕ್ಕೆ ಬನ್ನಿ – ಗಂಟೆಗೊಂದು ಬೈಸಿಕಲ್ ಗೆಲ್ಲಿ!

ರಾಜ್ಯದ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊ0ಡಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶ ಇದೆ. ಈ ಶೈಕ್ಷಣಿಕ ಮೇಳದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಕೆಸೆಟ್, ನೀಟ್ ಮತ್ತು ಕಾಮೆಡ್ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‍ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಇಂದು ಮತ್ತು ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ.

Share This Article