ನಾಳೆಯಿಂದ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠ’

Public TV
4 Min Read

ಬೆಂಗಳೂರು: ಇಂದಿನ ಕಲಿಕೆ, ನಾಳಿನ ದಾರಿ ದೀಪ.. ಹೌದು, ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯವಾಗುವ ಸಾಲುಗಳು. ಇದು ನಿಮ್ಮ ಪಬ್ಲಿಕ್ ಟಿವಿ (Public TV) ಪ್ರಸ್ತುತ ಪಡಿಸುತ್ತಿರೋ ವಿದ್ಯಾಪೀಠ (Vidhyapeeta) 6 ನೇ ಆವೃತ್ತಿಯ ಘೋಷವಾಕ್ಯ. ಇದೇ ಜೂನ್‌ 3 ಮತ್ತು 4ರಂದು ಶನಿವಾರ ಮತ್ತು ಭಾನುವಾರ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಬೆಂಗಳೂರಿನ (Bengaluru) ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ವೇದಿಕೆ ಸಿದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಇರುವ ಗೊಂದಲಗಳಗೆ ಈ ವೇದಿಕೆ ಉತ್ತರ ನೀಡಲಿದೆ.

ಒಂದೇ ಸೂರಿನಡಿಯಲ್ಲಿ 100 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿಯಾಗಲಿದ್ದು, ಕಾರ್ಯಕ್ರಮದ ಸಿದ್ಧತೆ ಹೇಗಿದೆ? ಎರಡು ದಿನದ ವಿದ್ಯಾಪೀಠದ ವಿಶೇಷತೆಗಳು ಏನು? ಯಾವ ರೀತಿಯಲ್ಲಿ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನುಕೂಲಕರವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: 105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು Expoದಲ್ಲಿ ಭಾಗಿ, ಪ್ರವೇಶ ಉಚಿತ: ಸಿ.ಕೆ ಹರೀಶ್ ಕುಮಾರ್

ಕಾರ್ಯಕ್ರಮ ವಿವರ:
Ad6 ಸಹಯೋಗದಲ್ಲಿ ಪಬ್ಲಿಕ್‌ ಟಿವಿಯು ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷವಾಕ್ಯದೊಂದಿಗೆ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‌’ವಿದ್ಯಾಪೀಠ’ವನ್ನು ಆಯೋಜಿಸಿದೆ. ಜೂನ್‌ 3 ಮತ್ತು 4ರಂದು ಬೆಂಗಳೂರು ಅರಮನೆ ಮೈದಾನದ ಗೇಟ್‌ ನಂಬರ್‌ 4ರ ಗಾಯತ್ರಿ ವಿಹಾರದಲ್ಲಿ ಬೆಳಗ್ಗೆ 10.೦೦ ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದೆ. ಇದು ವಿದ್ಯಾಪೀಠದ 6ನೇ ಆವೃತ್ತಿ ಎನ್ನುವುದೂ ವಿಶೇಷ. ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಶೈಕ್ಷಣಿಕ ಮೇಳ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಶೈಕ್ಷಣಿಕ ಮೇಳದಲ್ಲಿ ರಾಜ್ಯದ ನಾನಾ ಭಾಗಗಳ 100ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶ ಇದೆ.

ಗಿಫ್ಟ್‌ ತಗೊಳ್ಳಿ:
2023ರಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದರೆ ನಿಮ್ಮ ಅಂಕಪಟ್ಟಿ ಅಥವಾ ನಕಲು ಪ್ರತಿ (Xerox) ತೋರಿಸಿ ನೀವು ಗಿಫ್ಟ್‌ ಪಡೆದುಕೊಳ್ಳಬಹುದು. ಆದರೆ, ನೀವು ಪಡೆದ ಅಂಕ ಶೇ.60 ಅಥವಾ ಅದಕ್ಕಿಂತ ಮೇಲಿರಬೇಕು. ಸೆಕೆಂಡ್‌ ಪಿಯುಸಿಯಲ್ಲಿ 60-80% ಪಡೆದವರು, 80-95%, 95-100% ಪಡೆದವರು ಎಂದು ಗುರುತಿಸಿ ನಿಮ್ಮ ಅಂಕಗಳ ಆಧಾರದಲ್ಲಿ On Spot ಗಿಫ್ಟ್‌ ನೀಡಲಾಗುವುದು.

ಹೆಸರು ನೋಂದಾಯಿಸಿ:
ಶೈಕ್ಷಣಿಕ ಮೇಳಕ್ಕೆ ಬರುವ ಪ್ರತಿಯೊಬ್ಬರೂ ನಗರದ ಅರಮನೆ ಮೈದಾನದ ಗೇಟ್‌ ಬಳಿ ನೋಂದಣಿ ಕೇಂದ್ರ (Registration Counter) ದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿ ಗಂಟೆಗೊಮ್ಮೆ ನಡೆಯುವ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಗುವುದು. ಶೈಕ್ಷಣಿಕ ಮೇಳ ನಡೆಯುವ ಅರಮನೆ ಮೈದಾನ ಗಾಯತ್ರಿ ವಿಹಾರದ ಆವರಣದಲ್ಲಿಯೇ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಿಧಾನಗತಿಯ ಸೈಕಲ್‌ ಪಂದ್ಯ (Slow Cycle Race), ವಿಷಯ ಆರಿಸಿಕೊಳ್ಳಿ, ಮಾತನಾಡಿ (Pick & Speak) ಮೊದಲಾದ ಆಕರ್ಷಕ ಸ್ಪರ್ಧೆಗಳು ವಿದ್ಯಾಪೀಠದಲ್ಲಿ ನಡೆಯಲಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

ಸೈಕಲ್‌, ಲ್ಯಾಪ್‌ಟಾಪ್‌ ಬಹುಮಾನ ಗೆಲ್ಲಿ:
ಸ್ಲೋ ಸೈಕಲ್‌ ರೇಸ್‌ನಲ್ಲಿ ಭಾಗಿಯಾಗಿ ಗೆದ್ದವರು ಸೈಕಲ್‌ಗಳನ್ನು ಬಹುಮಾನವಾಗಿ ಪಡೆಯಬಹುದು. ಪಿಕ್‌ & ಸ್ಪೀಕ್‌ನಲ್ಲಿ ವಿಜೇತರಾದವರಿಗೆ ಲ್ಯಾಪ್‌ಟಾಪ್‌ಗಳು ಬಹುಮಾನವಾಗಿ ಸಿಗಲಿದೆ. 2 ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ 15 ಸೈಕಲ್‌ಗಳು ಹಾಗೂ 4 ಲ್ಯಾಪ್‌ಟಾಪ್‌ಗಳನ್ನು ಪ್ರಶಸ್ತಿ ರೂಪದಲ್ಲಿ ವಿಜೇತರಿಗೆ ನೀಡಲಾಗುವುದು.

ವಿದ್ಯಾಪೀಠದ ಪ್ಲಾಟಿನಂ ಪ್ರಾಯೋಜಕರು
ಗಾರ್ಡನ್‌ ಸಿಟಿ ಯೂನಿವರ್ಸಿಟಿ
ರೇವಾ ಯೂನಿವರ್ಸಿಟಿ
ರಾಮಯ್ಯ ಯೂನಿವರ್ಸಿಟಿ
ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ
ದಿ ಆಕ್ಸ್‌ಫರ್ಡ್‌ ಇನ್‌ಸ್ಟಿಟ್ಯೂಷನ್ಸ್‌.

ಗೋಲ್ಡ್‌ ಪ್ರಾಯೋಜಕರು
ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
ಸಿಎಂಆರ್‌ ಯೂನಿವರ್ಸಿಟಿ
ಬಿಜಿಎಸ್‌ & ಎಸ್‌ಜೆಬಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ.

ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌
ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ
ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್)
ನ್ಯೂ ಬಾಲ್ಡ್‌ವಿನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟೂಷನ್ಸ್‌
ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌
ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ
ಕೆಎಲ್‌ಇ ಟೆಕ್ನಲಾಜಿಕಲ್‌ ಯೂನಿವರ್ಸಿಟಿ, ಇದನ್ನೂ ಓದಿ: ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ – ಜೂನ್‌ 3, 4ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

ಸಿಲ್ವರ್‌ ಪ್ರಾಯೋಜಕರು
ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌
ಪಿಇಎಸ್‌ ಯೂನಿವರ್ಸಿಟಿ
ಆಚಾರ್ಯ
ಪ್ರೆಸಿಡೆನ್ಸಿ ಯೂನಿವರ್ಸಿಟಿ
ಎಜೆಎಂಎಸ್‌ ಇನ್‌ಸ್ಟಿಟ್ಯೂಟ್ಸ್‌
ಪ್ಲ್ಯಾನ್‌ಎಜು
ದಯಾನಂದ ಸಾಗರ್‌ ಇನ್‌ಸ್ಟಿಟ್ಯೂಷನ್ಸ್‌,
ಟೇಲರ್ಸ್‌ ಯೂನಿವರ್ಸಿಟಿ
ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
ಎಕ್ಸೆಲ್‌ ಅಕಾಡೆಮಿಕ್ಸ್‌
ಚಾಣಕ್ಯ ಯೂನಿವರ್ಸಿಟಿ
ಆಚಾರ್ಯ ಬೆಂಗಳೂರು ಬಿ ಸ್ಕೂಲ್

ಬ್ಯಾಂಕಿಂಗ್‌ ಪಾರ್ಟನರ್
ಕೆನರಾ ಬ್ಯಾಂಕ್

ಬಿವರೇಜ್‌ ಪಾರ್ಟನರ್‌
ನಂದಿನಿ – ಕೆಎಂಎಫ್‌
ಬಾಯರ್ಸ್‌ ಕಾಫಿ

ಗಿಫ್ಟ್‌ ಸ್ಪಾನ್ಸರ್‌
ಜೀನಿ ಮಿಲೆಟ್‌ ಮಿಕ್ಸ್

ಪಬ್ಲಿಕ್‌ ಟಿವಿ ಪ್ರಸ್ತುತಪಡಿಸುವ ವಿದ್ಯಾಪೀಠ ಶೈಕ್ಷಣಿಕ ಮೇಳಕ್ಕೆ ಬನ್ನಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9900060891 / 9900060204

Share This Article