ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ – ಜೂನ್‌ 3, 4ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

By
3 Min Read

ಬೆಂಗಳೂರು: ದ್ವಿತೀಯ ಪಿಯುಸಿ (Second PUC), ಪದವಿ (Degree) ಮುಗಿದ ನಂತರ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಯಾವ ಕೋರ್ಸ್‌ಗೆ ಸೇರಿಸಿದರೆ ಸೂಕ್ತ? ಯಾವ ಕಾಲೇಜಿನಲ್ಲಿ ಶುಲ್ಕ ಎಷ್ಟಿರುತ್ತೆ ಇತ್ಯಾದಿ ಗೊಂದಲ ಪೋಷಕರಲ್ಲಿ ಇದ್ದೇ ಇರುತ್ತೆ. ಜ್ಞಾನದ ಜೊತೆಗೆ ವೃತ್ತಿಪರ ಕೋರ್ಸ್‌ಗಳು ಮುಖ್ಯ ಅಂತ ಯೋಚಿಸುವ ಮಂದಿ ಬಹಳ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಒಂದೇ ಸೂರಿನಡಿ ಸೂಕ್ತ ವೇದಿಕೆ ಕಲ್ಪಿಸಿ, ಗೊಂದಲ ನಿವಾರಣೆಗಾಗಿ ನಿಮ್ಮ ಪಬ್ಲಿಕ್‌ ಟಿವಿ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ವಿದ್ಯಾಪೀಠ’ವನ್ನು ಆಯೋಜಿಸಿದೆ.

‘ಇಂದಿನ ಕಲಿಕೆ, ನಾಳಿನ ದಾರಿ ದೀಪ’ ಎಂಬ ಘೋಷವಾಕ್ಯದೊಂದಿಗೆ ಆ್ಯಡ್‌6 ಸಹಯೋಗದಲ್ಲಿ ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುತ್ತಿರುವ ವಿದ್ಯಾಪೀಠ (PUBLiC TV Vidyapeeta) 6ನೇ ಆವೃತ್ತಿಯ ಶೈಕ್ಷಣಿಕ ಮೇಳ ಜೂನ್‌ 3 ಮತ್ತು 4 ರಂದು ನಡೆಯಲಿದೆ. ಬೆಂಗಳೂರು ನಗರದ ಅರಮನೆ ಮೈದಾನದ ((Palace Ground Bengaluru)  ಗಾಯತ್ರಿ ವಿಹಾರದಲ್ಲಿ (ಗೇಟ್‌ ನಂಬರ್‌ 4) ಶೈಕ್ಷಣಿಕ ಮೇಳವನ್ನು (Education Fair) ಆಯೋಜಿಸಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಶೈಕ್ಷಣಿಕ ಮೇಳ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ.

100ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ: ಕರ್ನಾಟಕದ (Karnataka) ಅತಿ ದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 100ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.  ಇದನ್ನೂ ಓದಿ: ಸೌರವ್ ಗಂಗೂಲಿ ಬಯೋಪಿಕ್‌ಗೆ ರಣ್‌ಬೀರ್ ಬದಲು ಮತ್ತೊಬ್ಬ ನಟನ ಎಂಟ್ರಿ

ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ, ಆಕರ್ಷಕ ಬಹುಮಾನ ಗೆಲ್ಲಿ
ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಇರುತ್ತದೆ.

ವಿದ್ಯಾಪೀಠದ ಪ್ಲಾಟಿನಂ ಪ್ರಾಯೋಜಕರು
ಗಾರ್ಡನ್‌ ಸಿಟಿ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಇನ್‌ಸ್ಟಿಟ್ಯೂಷನ್ಸ್‌,

ಗೋಲ್ಡ್‌ ಪ್ರಾಯೋಜಕರು
ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಸಿಎಂಆರ್‌ ಯೂನಿವರ್ಸಿಟಿ, ಬಿಜಿಎಸ್‌ & ಎಸ್‌ಜೆಬಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ,  ಎಕ್ಸೆಲ್‌ ಅಕಾಡೆಮಿಕ್ಸ್‌.

ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌
ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್), ನ್ಯೂ ಬಾಲ್ಡ್‌ವಿನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟೂಷನ್ಸ್‌, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ, ಕೆಎಲ್‌ಇ ಟೆಕ್ನಲಾಜಿಕಲ್‌ ಯೂನಿವರ್ಸಿಟಿ,

ಸಿಲ್ವರ್‌ ಪ್ರಾಯೋಜಕರು
ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ಪಿಇಎಸ್‌ ಯೂನಿವರ್ಸಿಟಿ, ಆಚಾರ್ಯ ಪ್ರೆಸಿಡೆನ್ಸಿ ಯೂನಿವರ್ಸಿಟಿ, ಎಜೆಎಂಎಸ್‌ ಇನ್‌ಸ್ಟಿಟ್ಯೂಟ್ಸ್‌, ಪ್ಲ್ಯಾನ್‌ಎಜು, ದಯಾನಂದ ಸಾಗರ್‌ ಇನ್‌ಸ್ಟಿಟ್ಯೂಷನ್ಸ್‌, ಟೇಲರ್ಸ್‌ ಯೂನಿವರ್ಸಿಟಿ, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಚಾಣಕ್ಯ ಯೂನಿವರ್ಸಿಟಿ, ಆಚಾರ್ಯ ಬೆಂಗಳೂರು ಬಿ ಸ್ಕೂಲ್

ಬ್ಯಾಂಕಿಂಗ್‌ ಪಾರ್ಟನರ್
ಕೆನರಾ ಬ್ಯಾಂಕ್

ಬಿವರೇಜ್‌ ಪಾರ್ಟನರ್‌
ನಂದಿನಿ – ಕೆಎಂಎಫ್‌, ಬಾಯರ್ಸ್‌ ಕಾಫಿ

ಗಿಫ್ಟ್‌ ಸ್ಪಾನ್ಸರ್‌
ಜೀನಿ ಮಿಲೆಟ್‌ ಮಿಕ್ಸ್

ದಿನಾಂಕ: ಜೂನ್ 0‌3 ಮತ್ತು 04, 2023
ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9900060891 / 9900060204

Share This Article