ಬೆಂಗಳೂರು: ಯುಜಿ ಮುಗಿತು, ಈಗ ಪಿಜಿ ಮಾಡಬೇಕು, ಯಾವ ಕಾಲೇಜು, ಯಾವ ಕೋರ್ಸು, ಯಾವ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಚೆನ್ನಾಗಿದೆ? ಯಾವ ಕಾಲೇಜಿನಲ್ಲಿ ಫೀಸ್ ಎಷ್ಟಿದೆ? ಹಾಸ್ಟೆಲ್ ಫೆಸಿಲಿಟಿ ಸಿಗುತ್ತಾ? ಎಜುಕೇಷನ್ ಯಾವ ರೀತಿಯಲ್ಲಿ ಇರುತ್ತೆ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡೋ ದೃಷ್ಟಿಯಿಂದ ನಿಮ್ಮ ʻಪಬ್ಲಿಕ್ ಟಿವಿʼ (Public TV) ಮಲ್ಲೇಶ್ವರಂನಲ್ಲಿ ವಿದ್ಯಾಮಂದಿರ ಶೈಕ್ಷಣಿಕ ಮೇಳವನ್ನ ಆಯೋಜನೆ ಮಾಡಿತ್ತು, ಎರಡು ದಿನ ನಡೆದ ವಿದ್ಯಾಮಂದಿರಕ್ಕೆ ಇಂದು ತೆರೆ ಬಿದ್ದಿದೆ.
ʻಪಬ್ಲಿಕ್ ಟಿವಿʼ ಪ್ರಸ್ತುತ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ (Vidhya Mandira Education Expo) ತೆರೆ ಬಿದ್ದಿದೆ. ಎರಡು ದಿನಗಳ ಕಾಲ ನಡೆದ ಶೈಕ್ಷಣಿಕ ಮೇಳದಲ್ಲಿ ಸಾವಿರಾರು ವಿದ್ಯಾರ್ಥಿಗಳು. ಪೋಷಕರು ಆಗಮಿಸಿ ಮಾಹಿತಿ ಪಡೆದುಕೊಂಡ್ರು. ನಿನ್ನೆ ಬೆಳಗ್ಗೆ 9ರಿಂದ ಆರಂಭವಾಗಿದ್ದ ವಿದ್ಯಾಮಂದಿರ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಮೆಗಾ ಶೈಕ್ಷಣಿಕ ಮೇಳ ಅಭೂತಪೂರ್ವ ಯಶಸ್ಸು ಕಂಡಿತು.
ಇಂದು ಕೂಡ ಬೆಳಗ್ಗೆ 9 ಗಂಟೆಯಿಂದಲೇ ವಿದ್ಯಾರ್ಥಿಗಳು ಮತ್ತು ಪೋಷಕರು ವಿದ್ಯಾಮಂದಿರಕ್ಕೆ ಆಗಮಿಸಿದ್ರು. ಸಂಜೆ 6 ಗಂಟೆವರಗೆ ನಡೆದ ಈ ಮೆಗಾ ಶೈಕ್ಷಣಿಕ ಪಿಜಿ ಕೋರ್ಸ್ ಮೇಳದಲ್ಲಿ ಭಾಗವಹಿಸಿ, ತಮಗೆ ಬೇಕಾದ ಎಲ್ಲ ಮಾಹಿತಿಗಳನ್ನ ಶಿಕ್ಷಣ ಸಂಸ್ಥೆಗಳ ಬಳಿ ಕೇಳಿ ಪಡೆದುಕೊಂಡ್ರು. ಇನ್ನು ಬರೀ ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲ ರಾಜ್ಯದ ಕೋಲಾರ, ತುಮಕೂರು, ಹಾಸನ, ಗದಗ, ಕೊಪ್ಪಳ, ದಾವಣಗೆರೆ ಸೇರಿದಂತೆ ಅನೇಕ ಭಾಗಗಳಿಂದಲೂ ಸಹ ವಿದ್ಯಾರ್ಥಿಗಳು ಆಗಮಿಸಿ, ತಮಗೆ ಬೇಕಾದ ಪಿಜಿ ಕೋರ್ಸ್ ಮತ್ತು ಕಾಲೇಜಿನ ಆಯ್ಕೆಯನ್ನ ಮಾಡಿಕೊಂಡಿದ್ದು ವಿದ್ಯಾಮಂದಿರದ ವಿಶೇಷವಾಗಿತ್ತು.
ವಿದ್ಯಾಮಂದಿರ ಮೇಳದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ಕೂಡ ನೀಡಲಾಯಿತು. ಒಬ್ಬ ಲಕ್ಕಿ ವಿಜೇತರಿಗೆ ಲ್ಯಾಪ್ ಟಾಪ್ ಮತ್ತು ಪ್ರತಿ ಒಂದು ಗಂಟೆಗೆ ಒಬ್ಬರಿಗೆ ಟ್ಯಾಬ್ ಅನ್ನ ಲಕ್ಕಿ ಡಿಪ್ ಮೂಲಕ ವಿತರಿಸಲಾಯ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ `ವಿದ್ಯಾಮಂದಿರ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್, ಟ್ಯಾಬ್ ಗೆದ್ದ ಅದೃಷ್ಟವಂತರು ಇವರೇ…
ʻಪಬ್ಲಿಕ್ ಟಿವಿʼ ಮತ್ತು ಆ್ಯಡ್ ಸಿಕ್ಸ್ ಸಹಯೋಗದೊಂದಿಗೆ ಆಯೋಜನೆಯಾಗಿದ್ದ ವಿದ್ಯಾಮಂದಿರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಸಹ ಸಂತಸಗೊಂಡು, ನಮಗೆ ಬಹಳ ಉಪಯುಕ್ತ ಮಾಹಿತಿ ಸಿಕ್ಕಿದೆ. ಇತಂಹ ಮೇಳ ಮಾಡಿದ ಪಬ್ಲಿಕ್ ಟಿವಿಗೆ ಧನ್ಯವಾದವನ್ನ ಸಹ ಹೇಳಿದ್ರೇ, ಶೈಕ್ಷಣಿಕ ಮೇಳಾದ ಭಾಗವಾಗಿದ್ದ ಶಿಕ್ಷಣ ಸಂಸ್ಥೆಯವರು ಸಹ ಪಬ್ಲಿಕ್ ಟಿವಿ ದೊಡ್ಡ ವೇದಿಕೆ ಮೂಲಕ ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆಯನ್ನ ಅರ್ಪಿಸಿದ್ರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾಮಂದಿರದಲ್ಲಿ ಭಾಗಿಯಾಗಿದ್ದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಪಬ್ಲಿಕ್ ಟಿವಿಯ ಸಿಇಓ ಅರುಣ್ ಕುಮಾರ್, ರೇವಾ ವಿಶ್ವವಿದ್ಯಾಲಯದ ರಿಜಿಸ್ಟಾರ್ ನಾರಾಯಣ ಸ್ವಾಮಿ ಮತ್ತು ಆ್ಯಡ್ ಸಿಕ್ಸ್ ಆಡ್ವಾಟೈಸಿಂಗ್ ಸಂಸ್ಥೆಯ ಸುಧಾಕರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ರು.
ಒಟ್ಟಿನಲ್ಲಿ ಎರಡು ದಿನ ನಡೆದ ವಿದ್ಯಾಮಂದಿರ ಶೈಕ್ಷಣಿಕ ಮೇಳ ಅಭೂತಪೂರ್ವ ಯಶಸ್ಸಿನೊಂದಿಗೆ 4ನೇ ಆವೃತ್ತಿಯನ್ನ ಮುಗಿಸಿದೆ. ಪಿಜಿ ಮಾಡುವ ಕನಸು ಕಾಣ್ತಿರೋ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗಿಯಾಗಿ ತಮಗೆ ಬೇಕಾದ ಮಾಹಿತಿ ಪಡೆದ್ರು. ಪಿಜಿ ಮಾಡೋ ಎಲ್ಲ ಮಕ್ಕಳಿಗೂ ಆಲ್ ದಿ ಬೆಸ್ಟ್, ಒಳ್ಳೆಯ ಭವಿಷ್ಯ ನಿಮದಾಗಲಿ ಅಂತಾ ಪಬ್ಲಿಕ್ ಟಿವಿ ಆಶಿಸುತ್ತೆ.