PUBLiC TV Impact | ಸರ್ಕಾರದ ದುಡ್ಡನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದ ಪಿಡಿಓ ಅಮಾನತು

By
1 Min Read

ಹುಬ್ಬಳ್ಳಿ: ಸರ್ಕಾರದ ಹಣವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡುತ್ತಿದ್ದ ಪಿಡಿಓ (PDO) ಎಹೆಚ್ ಮನಿಯಾರ್ ಹಗರಣವನ್ನು `ಪಬ್ಲಿಕ್ ಟಿವಿ’  ಬಯಲಿಗೆಳೆದ ಬೆನ್ನಲ್ಲೇ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಕಳೆದ ಆ.31ರಂದು `ಪಬ್ಲಿಕ್ ಟಿವಿ’ (PUBLiC TV) ಗಳಗಿಹುಲಕೊಪ್ಪ ಗ್ರಾಮದಲ್ಲಿನ ಕರೆಂಟ್ ಬಿಲ್ ಹಗರಣವನ್ನು ಬಯಲಿಗೆಳೆದಿತ್ತು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್ ಸರ್ಕಾರದ ದುಡ್ಡನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡುತ್ತಿರುವ ಕುರಿತು ದಾಖಲೆ ಸಮೇತ ಸುದ್ದಿಯನ್ನು ಬಿತ್ತರಿಸಿತ್ತು.ಇದನ್ನೂ ಓದಿ: ಕೀನ್ಯಾದಲ್ಲಿ ರಾಜಮೌಳಿ ಗಸ್ತು, ಕೀನ್ಯಾ ಸಚಿವ ಬಿಚ್ಚಿಟ್ಟರು `ಆ’ ರಹಸ್ಯ

ವರದಿಗೆ ಎಚ್ಚೆತ್ತ ಜಿಪಂ ಸಿಇಓ ಭುವನೇಶ್ವರ ಅವರು ವಿಚಾರಣೆ ನಡೆಸಿ ಗ್ರಾಮ ಪಂಚಾಯಿತಿ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್ ಅನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

=

Share This Article